Toxic Online Desk
ಸಿನಿಮಾ ಸುದ್ದಿ

IMDb ಪಟ್ಟಿಯಲ್ಲಿ ಯಶ್ Toxic ನಂ.1 ಸ್ಥಾನ; ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ರಾಕಿಂಗ್ ಸ್ಟಾರ್ ದಾಖಲೆ!

IMDbನ ಭಾರತದ ಅತ್ಯಂತ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಮೊದಲ ಸ್ಥಾನ; ಬಿಡುಗಡೆ ದಿನಾಂಕ, ನಿರ್ದೇಶಕ ಮತ್ತು ತಾರಾಗಣದ ಕುರಿತು ವಿವರ ಇಲ್ಲಿದೆ.

2026ರ ಅರ್ಧ ವರ್ಷ ಮುಗಿದೇ ಹೋಯಿತು. ಧುರಂಧರ್ 2, ಪೆದ್ದಿ, ಕರುಪ್ಪು ಚಿತ್ರಗಳು ತೆರೆ ಮೇಲೆ ಅಪ್ಪಳಿಸಿ ಬೊಬ್ಬಿರಿದು ಬಾಕ್ಸ್ ಆಫೀಸ್ ಕೊಳ್ಳೆಹೊಡೆದವು. ಇದರ ನಡುವೆ ಮುಂದಿನ 6 ತಿಂಗಳಿನಲ್ಲಿ ದಳಪತಿ ವಿಜಯ್ ಅವರ ಜನ ನಾಯಗನ್, ಶಾರುಖ್ ಖಾನ್ ಅವರ ಕಿಂಗ್, ರಾಕಿಂಗ್ ಸ್ಟಾರ್ ಯಶ್ ಅವರ ರಾಮಾಯಣ ಹಾಗೂ ಟಾಕ್ಸಿಕ್‍ ಮತ್ತು ರಜನಿಕಾಂತ್ ಅವರ ಜೈಲರ್ 2 ಚಿತ್ರಗಳು ಸೇರಿದಂತೆ ಹಲವಾರು ಬಿಗ್ ಬಜೆಟ್ನ ದೊಡ್ಡ ತಾರಾಗಣದ ಚಿತ್ರಗಳು ಸರತಿ ಸಾಲಿನಲ್ಲಿ ರೆಡಿ ಆಗಿದೆ. ಇದರ ನಡುವೆಯೇ ದೇಶಾದ್ಯಂತ ಹೆಚ್ಚಿನ ಸಿನಿಪ್ರಿಯರು ಕಾಯುತ್ತಿರುವ ಟಾಪ್ 5 ಚಿತ್ರಗಳ ಲಿಸ್ಟ್ ಅನ್ನು ಇಂಡ್ಬ್ ಬಿಡುಗಡೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ.

IMDb ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ Toxic

IMDb ಭಾರತೀಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್‍ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ. ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ ಪ್ಯಾನ್-ಇಂಡಿಯಾ ಸ್ಟಾರ್ ಯಶ್ ನಟಿಸುತ್ತಿರುವ ಈ ಚಿತ್ರದ ಮೇಲಿನ ಕ್ರೇಜ್ ದೇಶಾದ್ಯಂತ ಮತ್ತಷ್ಟು ಹೆಚ್ಚಾಗಿದೆ. ಅದರಂತೆ, ದೇಶಾದ್ಯಂತ ಸಿನಿಪ್ರೇಮಿಗಳು ಈ ಚಿತ್ರಕ್ಕಾಗಿ ಎಷ್ಟು ಕಾತರದಿಂದ ಕಾಯುತ್ತಿದ್ದಾರೆ ಎಂಬುದಕ್ಕೆ ಈ ಪಟ್ಟಿಯೇ ಸಾಕ್ಷಿಯಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಜಂಟಿಯಾಗಿ ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸಿರುವ ಟಾಕ್ಸಿಕ್‍ ಚಿತ್ರವು ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿರುವ ಈ ಚಲನಚಿತ್ರವನ್ನು IMDbಯಲ್ಲಿ ಟಾಕ್ಸಿಕ್‍ ಚಿತ್ರವು ಶೇಕಡಾ 47 ಕ್ಕಿಂತ ಹೆಚ್ಚು ವೋಟ್‌ಗಳೊಂದಿಗೆ ನಂಬರ್ 1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಬಹು ತಾರಾಗಣ:

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ಟಾಕ್ಸಿಕ್‍ ಕೇವಲ ಕನ್ನಡಕ್ಕೆ ಸೀಮಿತವಾಗದೆ, ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪ್ಯಾನ್-ಇಂಡಿಯಾ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಯಶ್ ಅವರೊಂದಿಗೆ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಏತನ್ಮಧ್ಯೆ, ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಧೂಳೆಬ್ಬಿಸಿವೆ. ಸದ್ಯದ ಮಾಹಿತಿ ಪ್ರಕಾರ, ಈ ಮಹಾತ್ವಾಕಾಂಕ್ಷೆಯ ಚಿತ್ರವು ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

ಚುನಾವಣಾ ಪ್ರಚಾರದಲ್ಲಿ ಮಗು ಬಳಕೆ ಆರೋಪ: DMK ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಸ್ ದಾಖಲು!

'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ​ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್-Video

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!

ಸೈನಿಕನ ಪಾರ್ಥಿವ ಶರೀರ ಹೊತ್ತ ಆ್ಯಂಬುಲೆನ್ಸ್ ಅಪಘಾತ; 4 ಸಾವು, ಕುಟುಂಬದ ಗಂಡು ಸಂತತಿಯೇ ನಾಶ!