ನಟಿ ಉಮಾ ಶಂಕರಿ 
ಸಿನಿಮಾ ಸುದ್ದಿ

ಉಪ್ಪಿ ದಾದ ಬೆಡಗಿಗೆ ಸ್ತನ ಕ್ಯಾನ್ಸರ್: ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಟಿ ಉಮಾ ಶಂಕರಿ; ಹೇಳಿದ್ದೇನು?

ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಉಮಾ ಅವರು ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ 'ಉಪ್ಪಿ ದಾದ ಎಂ.ಬಿ.ಬಿ.ಎಸ್ ಸಿನಿಮಾದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ನಟಿ ಉಮಾ ಶಂಕರಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಈ ಆಘಾತಕಾರಿ ಸುದ್ದಿಯನ್ನು ಸ್ವತಃ ನಟಿ ಉಮಾ ಶಂಕರಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದು, ಸದ್ಯ ಅವರ ಈ ಭಾವನಾತ್ಮಕ ಪೋಸ್ಟ್ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.

ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಉಮಾ ಅವರು ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು. ಇದೀಗ ಇತ್ತೀಚೆಗೆ ತಮಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಎರಡನೇ ಸುತ್ತಿನ ಕಿಮೊಥೆರಪಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.

ನಟಿಯ ಪೋಸ್ಟ್​ನಲ್ಲಿ ಏನಿದೆ?

ಪ್ರಸ್ತುತ ನಾನು ಎರಡನೇ ಸುತ್ತಿನ ಕೀಮೋಥೆರಪಿ ಮತ್ತು ಇಮ್ಯೂನೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದು, ಪ್ರತಿಯೊಂದು ದಿನವನ್ನೂ ಧೈರ್ಯದಿಂದ ಎದುರಿಸುತ್ತಿದ್ದೇನೆ. ಆದಾಗ್ಯೂ, ನೋವಿನಿಂದ ಕೂಡಿರುವ ಭಾರವಾದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ, ಈ ಕಷ್ಟದ ಸಂದರ್ಭದಲ್ಲಿ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿರುವ ಕುಟುಂಬಸ್ಥರಿಗೆ ಹಾಗೂ ಅಪಾರ ಪ್ರೀತಿ ಮತ್ತು ಧೈರ್ಯ ನೀಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದು, ತಾವು ಚಿಕಿತ್ಸೆಗೆ ಸ್ಪಂದಿಸುತ್ತಾ ಗುಣಮುಖರಾಗುವತ್ತ ಸಂಪೂರ್ಣ ಗಮನವನ್ನು ಹರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

APMCಗೆ CM ಡಿಕೆಶಿ ದಿಢೀರ್ ಭೇಟಿ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು; 19 ಬಾಲ ಕಾರ್ಮಿಕರ ರಕ್ಷಣೆ; ನಾಲ್ಕು ಅಂಗಡಿ ಮಾಲೀಕರ ಬಂಧನ!

ವಿಧಾನಸಭೆಯಲ್ಲಿ ವಿಜಯ್ ಸನ್ನೆಗೆ ಕೆರಳಿದ DMK; ಬಾಡಿ ಶೇಮಿಂಗ್ ಆರೋಪಕ್ಕೆ ಸಿಎಂ ಜೋಸೆಫ್ ವಿಜಯ್ ಸ್ಪಷ್ಟನೆ!

ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ 10 ನಿಮಿಷ ಆಗಸದಲ್ಲೇ ಗಿರಕಿ; 2ನೇ ಪ್ರಯತ್ನದಲ್ಲಿ ಸೇಫ್‌ ಲ್ಯಾಂಡಿಂಗ್!

ಒಮರ್ ಅಬ್ದುಲ್ಲಾ ಮುಂದೆ 'ವಂದೇ ಮಾತರಂ' ಸಂಪೂರ್ಣ ರಾಷ್ಟ್ರಗೀತೆ ಗಾಯನ, ಬಾಂಬ್ ದಾಳಿ ಪೀಡಿತ ಕಾಶ್ಮೀರ ಈಗ ಬದಲು!

ಮುಂದಿನ ವರ್ಷ ದೇಶದ ಮೊದಲ ಬುಲೆಟ್ ಟ್ರೈನ್ ಪ್ರಾಯೋಗಿಕ ಸಂಚಾರ ಆರಂಭ; ಮುಂಬೈನಿಂದ ಅಹಮದಾಬಾದ್‌ಗೆ ಕೇವಲ 90 ನಿಮಿಷ!