ವಂದಿತಾ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ತಂದೆಯ ಆಸೆಯಂತೆ ಹೊಸ ಉದ್ಯಮ ಆರಂಭಿಸಿದ ಪುನೀತ್‌ ರಾಜ್‌ಕುಮಾರ್ ಪುತ್ರಿ ವಂದಿತಾ!

ಈ ಬಗ್ಗೆ ವಂದಿತಾ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೊ ಹಾಕಿ ಆರ್ಡರ್ ಮಾಡಿ ಎಂದು ಲಿಂಕ್ ಹಂಚಿಕೊಂಡಿದ್ದರು.

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ಬೆಂಗಳೂರಿನಲ್ಲಿ 'ನುಕಾಸ್ ಕೆಫೆ' ಎಂಬ ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ.

ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡಹೆಸರನ್ನು ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ತಿರಮಿಸು, ಬ್ರೌನಿ ಮತ್ತು ಚೀಸ್ ಕೇಕ್ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ಸ್ವತಃ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.

ಈ ಬಗ್ಗೆ ವಂದಿತಾ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೊ ಹಾಕಿ ಆರ್ಡರ್ ಮಾಡಿ ಎಂದು ಲಿಂಕ್ ಹಂಚಿಕೊಂಡಿದ್ದರು. ಬೇಕಿಂಗ್ ಮೇಲಿನ ತಮ್ಮ ಆಸಕ್ತಿಯನ್ನು ಉದ್ಯಮವನ್ನಾಗಿಸಿಕೊಂಡ ವಂದಿತಾ, ತಿರಮಿಸು, ಬ್ರೌನಿ, ಚೀಸ್ ಕೇಕ್ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ಸ್ವತಃ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಹೆಚ್ಚಿನ ಆರ್ಡರ್‌ಗಳು ಬಂದರೆ ಡೆಲಿವರಿ ತಡವಾಗುವ ಸಾಧ್ಯತೆ ಇದೆ ಎಂದು ಮೊದಲೇ ತಿಳಿಸಿದ್ದಾರೆ.

ಈಗ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವ ವಂದಿತಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಶಿವಣ್ಣ ಪತ್ನಿ ಗೀತಾ ಅವರಲ್ಲಿ ಪುನೀತ್ ರಾಜ್​ಕುಮಾರ್ ಅವರು ಬ್ಯುಸಿನೆಸ್ ಶುರು ಮಾಡೋಕೆ ಹೇಳಿದ್ದರಂತೆ. ಚೆನ್ನಾಗಿ ಬೇಕ್ ಮಾಡುತ್ತೀರಿ. ಅದನ್ನೇ ಬ್ಯುಸಿನೆಸ್ ಮಾಡಿ ಎಂದು ಹೇಳಿದ್ರಂತೆ. ಆದರೆ ಅವರಿಗೆ ಅಷ್ಟು ಐಡಿಯಾ ಇರದ ಕಾರಣ ಮಾಡಿರಲಿಲ್ವಂತೆ. ಆದರೆ ಈಗ ಅಪ್ಪು ಕನಸು ಮಗಳ ಮುಖಾಂತರ ನನಸಾಗಿದೆ.

ಚಾಕೊಲೇಟ್ ಕಪ್ ಕೇಕ್, ವೆನಿಲ್ಲಾ ಕಪ್ ಕೇಕ್, ರೆಡ್ ವೆಲ್ವೆಟ್ ಸದ್ಯ ಲಭ್ಯವಿದೆ. ಸ್ಪೆಷಲ್ ಮೆನುಗಳಲ್ಲಿ ತಿರಮಿಸು, ಮಡೆಲೈನ್ಸ್, ಚೀಸ್ ಕೇಕ್ ಬ್ರೌನಿ, ಟ್ರೆಸ್ ಲೆಚೆಸ್ ಲಭ್ಯವಿದೆ. ಬೆಂಗಳೂರಿನಲ್ಲಿ ವಂದಿತಾ ಪುನೀತ್ ರಾಜ್‌ಕುಮಾರ್ ಯಾವುದೇ ಬೇಕರಿ ತೆರೆದಿಲ್ಲ. ಆದರೆ, ನುಕಾ' ಸ್ ಕೆಫೆ ವೆಬ್‌ಸೈಟ್ ಮೂಲಕ ಆರ್ಡರ್‌ಗಳನ್ನ ತೆಗೆದುಕೊಂಡು ಮನೆಯಲ್ಲೇ ಬೇಕರಿ ತಿನಿಸುಗಳನ್ನ ತಯಾರಿಸಿ ಡೆಲಿವರಿ ಕಳುಹಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ: ಸ್ಕೂಲ್​ ವ್ಯಾನ್​ಗೆ ಪ್ಯಾಸೆಂಜರ್ ರೈಲು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವು

Hormuz ಸಂಘರ್ಷ ತೀವ್ರ: Iran ಮೇಲೆ ಅಮೆರಿಕಾ ಭೀಕರ ವಾಯುದಾಳಿ; ಪ್ರತೀಕಾರವಾಗಿ ಕತಾರ್ ಮೇಲೆ Tehran ಕ್ಷಿಪಣಿ ದಾಳಿ

Delimitation ಪರಿಷ್ಕೃತ ಮಸೂದೆ ವಿವಾದ: ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ..!

ನೌಕಾ ದಿಗ್ಬಂಧನ ಉಲ್ಲಂಘನೆ: ಇರಾನ್‌ಗೆ ತೆರಳುತ್ತಿದ್ದ 3 ಹಡಗುಗಳಿಗೆ ಅಮೆರಿಕಾ ತಡೆ, 1 ಹಡಗು ವಶಕ್ಕೆ..!

'ಟೈ ಧರಿಸಿಲ್ಲ' ಎಂದು 'ಕಾಲು ಮುಟ್ಟಿ ಕ್ಷಮೆ ಕೇಳಿ ಅಂದ್ರು': ಕಂಪನಿ ಘನತೆಗೆ ಮಸಿ ಬಳಿಯುವ ಪ್ರಯತ್ನ; ಮಾಜಿ ಉದ್ಯೋಗಿ ಆರೋಪ ತಳ್ಳಿ ಹಾಕಿದ IndiGo