ಹೃತಿಕ್ 
ಸಿನಿಮಾ ಸುದ್ದಿ

ಜೀ ಕನ್ನಡ ಸರಿಗಮಪ ಜ್ಯೂರಿ ಮೋಹನ್ ಪುತ್ರ- ನಟ ಹೃತಿಕ್ ನಿಧನ: ವಾರದಲ್ಲಿ 2ನೇ ಸ್ಮಶಾನ ಯಾತ್ರೆ ಎಂದಿದ್ದೇಕೆ ಮಂಡ್ಯ ರಮೇಶ್?

ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್ ರಾಜರಾಜೇಶ್ವರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿರುವ ಮೋಹನ್‌ ಕೃಷ್ಣ ಅವರ ಪುತ್ರ ಹೃತಿಕ್ ಹಠಾತ್ ನಿಧನರಾಗಿದ್ದಾರೆ.

ನಟ ಮಂಡ್ಯ ರಮೇಶ್‌ ಅವರ ನಟನ ರಂಗಭೂಮಿ ಹೃತಿಕ್‌ ಸಕ್ರಿಯರಾಗಿದ್ದರು. ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್ ರಾಜರಾಜೇಶ್ವರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಹೃತಿಕ್ ನಿಧನದ ಬಗ್ಗೆ ಮಂಡ್ಯ ರಮೇಶ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮತ್ತೊಂದು ಯಾತನೆ! ನಟನದ ನಾಟಕಗಳನ್ನು ನೋಡಿದವರಿಗೆ ಈ ಹುಡುಗ ಪರಿಚಿತ. ಹೃತಿಕ್ (ಜಿ‌‌ ಸರಿಗಮಪ ದ ಜೂರಿಯಾಗಿರುವ ಮೋಹನ್ ಅವರ ಏಕ ಮಾತ್ರ ಪುತ್ರ) ಮೊನ್ನೆ ಮೊನ್ನೆ ನಡೆದ 'ಸುಬ್ಬಣ್ಣ ಸ್ಮರಣೆ'ಯ ಎರಡೂ ನಾಟಕಗಳಲ್ಲಿ ಮುಖ್ಯ ಪಾತ್ರವಹಿಸಿ, ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಅತಿ ಮೆಚ್ಚಿನ ನಟ ಆಗಿದ್ದ.

ರಂಗಗೀತೆಗಳಲ್ಲಿ ಸೊಗಸಾಗಿ ಹಾಡಿದ. ಚೆಕ್ ಪೋಸ್ಟ್ ನಂಬರ್ 840ಯ ರಾಜಕಾರಣಿ, ಚೋರ ಚರಣದಾಸದ ಕುಡುಕ, ಅಂಧಯುಗದ ಸಂಜಯ, ಅಡುಗೆ ಮನೆಯಲ್ಲಿ ಹುಲಿಯ ಸಕ್ಸೆನಾ ಮತ್ತು ಶೆಟ್ಟಿ, ಬೆತ್ತಲೆ ಅರಸನ ರಾಜ ರಹಸ್ಯ ನಾಟಕದ ಕಾರಬಾರಿ.. ಹೀಗೆ ಅಸಂಖ್ಯಾ ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿ ತಂಡದ ದೊಡ್ಡ ಶಕ್ತಿಯಾಗಿದ್ದ.

ಗಾಯನ, ನೃತ್ಯ, ಪ್ರಾಣಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು, ಅದರ ಬಗ್ಗೆ ಅತೀವ ಅಧ್ಯಯನ ಮಾಡಿ ಮಕ್ಕಳಿಗೆ ಪರಿಸರದ ಬಗ್ಗೆ ಎಚ್ಚರ ಮೂಡಿಸುವುದರ ಜೊತೆಗೆ ಸದಾ ನಗುತ್ತಾ ಹಸನ್ಮುಖನಾಗಿ ಗೆಳೆಯರ ಗುಂಪಿನಲ್ಲಿ ಚಂದವಾಗಿದ್ದ. ನಟನದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪ್ರೀತಿ, ನಿಷ್ಠೆಗಳಿಂದ ಎಲ್ಲರ ಮನ ಗೆದ್ದಿದ್ದ ಎಂದು ಬರೆದುಕೊಂಡಿದ್ದಾರೆ.

ದಿಢೀರನೇ ಇವತ್ತು ಕಣ್ಮರೆಯಾಗಿ ಬಿಟ್ಟ. ಈ ವಾರದಲ್ಲಿ ನನ್ನ ಎರಡನೇ ಸ್ಮಶಾನ ಯಾತ್ರೆ. ಬೆಂಗಳೂರಿನ ಅವನ ಮನೆಯಲ್ಲಿ, ರಸ್ತೆಯಲ್ಲಿ, ಮಸಣದಲ್ಲಿ ಅವನ ಕುಟುಂಬದವರ, ರಂಗ ಸಹಪಾಠಿಗಳ, ಅವನ ಅಭಿಮಾನಿಗಳ, ಅಪಾರ ಬಂಧು ವರ್ಗದವರ ರೋಧನ ಮುಗಿಲು ಮುಟ್ಟಿತ್ತು.

ಈ ಹುಡುಗ ಹೃತಿಕ್‌ನ ಸಾವು ಮತ್ತು ಬೆಂಕಿಯ ನಡುವೆ ಅವನು ಬೆಂದು ಹೋಗುವ ಚಿತ್ರ ನನ್ನಂತೆ ಅವನನ್ನು ಪ್ರೀತಿಸುವ ಎಲ್ಲರನ್ನೂ ಬಹುಕಾಲ ನೋವಿನಲ್ಲಿ ತಳ್ಳಿ ಮನಸ್ಸಿನ ತುಂಬಾ ಸಂಕಟ ತುಂಬಿಬಿಡುತ್ತಿದೆ. ಈ ಯವ್ವನಿಗರ ಸಾವು ನನ್ನನ್ನು ಕಾಡುತ್ತಲೆ ಇದೆ. ಅವನ ಪ್ರೀತಿಯ ತಂದೆಗೆ ಮತ್ತು ಕುಟುಂಬಕ್ಕೆ ನೋವನ್ನು ಕಳೆಯುವ ಶಕ್ತಿ ಸಿಗಲಿ. ಎಲ್ಲರ ಪರವಾಗಿ ಈ ಮಗುವಿಗೆ ನಮನಗಳು ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest LIVE Updates | ಪ್ರತಿಭಟನೆ ಮುಂದುವರಿಯಲಿದೆ; ಭರವಸೆ ಕಳೆದುಕೊಳ್ಳಬೇಡಿ: ಸಿಜೆಪಿಯ ಅಭಿಜೀತ್ ದೀಪ್ಕೆ ವಿನಂತಿ

ಖಾಸಗಿ ಆಸ್ಪತ್ರೆಗೆ ಸೋನಮ್ ವಾಂಗ್‌ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಸೂಚನೆ; ಧನ್ಯವಾದ ಅರ್ಪಿಸಿದ ಪತ್ನಿ ಗೀತಾಂಜಲಿ!

ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಬೀದಿಬದಿ ವ್ಯಾಪಾರಿಗಳಿಂದ GBA ಅಧಿಕಾರಿಗಳ ಮೇಲೆ ಹಲ್ಲೆ; ಪೆಪ್ಪರ್ ಸ್ಪ್ರೇ ಬಳಕೆ!

ಕಾಕ್ರೋಚ್ 'ಸಂಸತ್ ಚಲೋ': ಲಾಠಿ ಚಾರ್ಜ್ ವೇಳೆ ಗಾಯಗೊಂಡಿದ್ದ ಯುವತಿ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ!

ಶಿವಾಜಿನಗರ ಪುಟ್ ಬಾತ್ ಒತ್ತುವರಿ ತೆರವು: GBA ಅಧಿಕಾರಿಗಳ ಮೇಲೆ ಹಲ್ಲೆ, ಬಿಜೆಪಿ ತೀವ್ರ ಖಂಡನೆ! Video