ಜನ ನಾಯಗನ್ Online Desk
ಸಿನಿಮಾ ಸುದ್ದಿ

Box Office ನಲ್ಲಿ 217 ಕೋಟಿ ರೂ ಬಾಚಿದ ದಳಪತಿ ಕೊನೆ ಸಿನಿಮಾ 'ಜನ ನಾಯಗನ್'; OTT ರಿಲೀಸ್ ಯಾವಾಗ?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆಯಾಗಿದ್ದು, ನಾಲ್ಕೇ ದಿನದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಧೂಳೆಬ್ಬಿಸುತ್ತಿದೆ. ಇದರ ನಡುವೆಯೇ, ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದ್ದು, ಆ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ:

ತಮಿಳುನಾಡು ಮುಖ್ಯಮಂತ್ರಿ ಹಾಗೂ ಕೋಲಿವುಡ್‌ನ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾದ ಜನ ನಾಯಗನ್ ಬಿಡುಗಡೆಯಾಗಿದ್ದು, ನಾಲ್ಕೇ ದಿನದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಚಿತ್ರವು ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದರ ನಡುವೆಯೇ, ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದ್ದು, ಆ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ:

ಮೂರೇ ದಿನದಲ್ಲಿ 217 ಕೋಟಿ ಕಲೆಕ್ಷನ್!

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಕೇವಲ 4 ದಿನಗಳಲ್ಲಿ ಪ್ರಪಂಚದಾದ್ಯಂತ ₹217 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ₹200 ಕೋಟಿ ಕ್ಲಬ್ ಸೇರಿದೆ. ಅದರಂತೆ, ಚಿತ್ರವು ಭಾರತದಾದ್ಯಂತ ಒಟ್ಟು ₹145.98 ಕೋಟಿ ಕಲೆಕ್ಷನ್ ಹಾಗು ವಿದೇಶಿ ಮಾರುಕಟ್ಟೆಯಿಂದ ₹71.50 ಕೋಟಿ ಬಾಚಿಕೊಂಡಿದೆ. ಇದರೊಂದಿಗೆ, ಜಾಗತಿಕವಾಗಿ 4 ದಿನಗಳಲ್ಲಿ ಒಟ್ಟು ₹217.48 ಕೋಟಿ ಗಳಿಸಿದೆ. ಈ ಮೂಲಕ ₹200 ಕೋಟಿ ಗಡಿಯನ್ನು ಯಶಸ್ವಿಯಾಗಿ ದಾಟಿದೆ.

ಯಾವ OTTಯಲ್ಲಿ ಜನ ನಾಯಗನ್?

ಆರಂಭದಲ್ಲಿ ಅಮೆಜಾನ್‍ ಪ್ರೈಮ್ ವಿಡಿಯೋ ಸಂಸ್ಥೆಯು ಸುಮಾರು 110 ಕೋಟಿ ರೂಪಾಯಿಗಳಿಗೆ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಲು ಮಾತುಕತೆ ನಡೆಸಿತ್ತು. ಆದರೆ ಚಿತ್ರದ ರಿಲೀಸ್ ವಿಳಂಬ ಹಾಗೂ ಪೈರಸಿ ಲೀಕ್ ಆದ ಕಾರಣ ಈ ಡೀಲ್ ಅಂತಿಮಗೊಳ್ಳಲಿಲ್ಲ. ಇದರ ನಡುವೆ, ಕೆಲವು ವರದಿಗಳ ಪ್ರಕಾರ, ZEE5 ಸಂಸ್ಥೆಯು ಸುಮಾರು 50 ಕೋಟಿ ಆಫರ್ ನೀಡಿ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಳ್ಳಲು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಆದಾಗ್ಯೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿ ಇದೆ.

ಯಾವಾಗ OTTಯಲ್ಲಿ ಬಿಡುಗಡೆ?

ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಕಾರಣ, ಸಿನಿಮಾ ಸದ್ಯಕ್ಕೆ ಥಿಯೇಟರ್‌ಗಳಲ್ಲೇ ಮುಂದುವರಿಯಲಿದೆ. ಆದರೆ, ಸಾಮಾನ್ಯವಾಗಿ ಹೊಸ ಸಿನಿಮಾಗಳು ಬಿಡುಗಡೆಯಾದ 4 ರಿಂದ 6 ವಾರಗಳ ನಂತರ ಓಟಿಟಿಗೆ ಬರುತ್ತವೆ. ಅದರಂತೆ ಜನ ನಾಯಗನ್ ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ OTT ಪರದೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ

ಯುದ್ಧದ ಕಿಡಿ ಹೊತ್ತಿಸಲು ಬಂದಿತ್ತಾ ಪಾಕ್ ನೌಕಾಪಡೆ ಹಡಗು? ಭಾರತೀಯ ಕ್ಯಾಪ್ಟನ್ ಚಾಣಾಕ್ಷತನದಿಂದ ತಪ್ಪಿದ ಭಾರೀ ದುರಂತ!