ಮುಂಬೈ: ಹಲವಾರು ಜನಪ್ರಿಯ ಧಾರಾವಾಹಿಗಳ ಮೂಲಕ ಮಲಯಾಳಂ ಟಿವಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಖ್ಯಾತ ಕಿರುತೆರೆ ನಟಿ ಇವಾ ಗ್ರೋವರ್ ಅವರು ತಮ್ಮ ಮಾಜಿ ಪತಿ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ ಅವರ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಕೇವಲ 18 ದಿನಗಳ ಪರಿಚಯ ಹಾಗೂ ಪ್ರಣಯದ ನಂತರ, ತಮ್ಮ ಕುಟುಂಬದ ತೀವ್ರ ವಿರೋಧದ ನಡುವೆಯೂ ಹೈದರ್ ಅಲಿ ಖಾನ್ ಅವರೊಂದಿಗೆ ಅಂತರಧರ್ಮೀಯ ಮದುವೆಯಾಗಿದ್ದ ಇವಾ ಇವಾ ಗ್ರೋವರ್, ಅವರ ವೈಯಕ್ತಿಕ ಜೀವನದ ಕರಾಳ ಸತ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದ ಈವಾ ಗ್ರೋವರ್, ಆ ನಂತರ ತಾನು ಅನುಭವಿಸಿದ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮದುವೆಯಾದ ನಂತರ ಖಾಸಗಿ ಕ್ಷಣಗಳಲ್ಲಿ ಹೈದರ್ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಪ್ರಾರಂಭಿಸಿದ. ಹೈದರ್ ಅಲಿ 'ಸಿಜೋಫ್ರೇನಿಯಾ' ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬ ಸತ್ಯ ಮದುವೆಯಾದ ಮೇಲಷ್ಟೇ ತಿಳಿಯಿತು ಎಂದು ಇವಾ ಹೇಳಿದ್ದಾರೆ.
ದೈಹಿಕ ಹಿಂಸೆಯಷ್ಟೇ ಅಲ್ಲದೆ, ಹೈದರ್‌ನಿಂದ ನಟಿಗೆ ತೀವ್ರ ತರದ ಮಾನಸಿಕ ಕಿರುಕುಳವೂ ಎದುರಾಗಿತ್ತು. ಮನೆಯ ಕರೆಂಟ್ ಬಿಲ್ ಪಾವತಿಸಲು ಮತ್ತು ಮನೆಯ ಖರ್ಚಿಗಾಗಿ ನಿರ್ದೇಶಕರೊಂದಿಗೆ ಹಾಗೂ ಇತರ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಸ್ವತಃ ಗಂಡನೇ ಒತ್ತಾಯಿಸುತ್ತಿದ್ದ ಎಂಬ ಆಘಾತಕಾರಿ ಸತ್ಯವನ್ನು ಇವಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿಯ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ ಇವಾ ಗ್ರೋವರ್ ಅವರು ಹೈದರ್ ಅಲಿ ಖಾನ್ ಅವರಿಗೆ ವಿಚ್ಛೇದನ ನೀಡಿದರು. ಆ ಕರಾಳ ದಿನಗಳಿಂದ ಹೊರಬಂದ ನಂತರ ನಟಿ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ ಮತ್ತು ಸ್ವತಂತ್ರವಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.