ಯಶ್ - ಕಿಯಾರಾ ಅಡ್ವಾಣಿ! 
ಸಿನಿಮಾ ಸುದ್ದಿ

Toxic: ಕಿಚ್ಚು ಹೊತ್ತಿಸಿದ `ತಬಾಹಿ'; ‘ಟಾಕ್ಸಿಕ್’ ಒಪ್ಪಿಕೊಳ್ಳಲು ಕಾರಣ ಬಿಚ್ಚಿಟ್ಟ ಕಿಯಾರಾ ಅಡ್ವಾಣಿ!

ಟಾಕ್ಸಿಕ್ ಚಿತ್ರದ ಟೀಸರ್, ಹಾಡುಗಳು ಮತ್ತು ಕ್ಲಿಪ್‌ಗಳು ಬಿಡುಗಡೆಯಾಗಿದ್ದು, ಅದರಲ್ಲಿ ಕಿಯಾರಾ ಅವರು ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬರು ನಿರೀಕ್ಷಿತ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದ ತಬಾಹಿ ಹಾಡಲ್ಲಿ ಅತ್ಯಂತ ಗ್ಲ್ಯಾಮರ್‌ ಆಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇದೀಗ `ಟಾಕ್ಸಿಕ್’ ಒಪ್ಪಿಕೊಳ್ಳಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

ಟಾಕ್ಸಿಕ್ ಚಿತ್ರದ ಟೀಸರ್, ಹಾಡುಗಳು ಮತ್ತು ಕ್ಲಿಪ್‌ಗಳು ಬಿಡುಗಡೆಯಾಗಿದ್ದು, ಅದರಲ್ಲಿ ಕಿಯಾರಾ ಅವರು ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಆದರೆ ಇದೆಲ್ಲದರ ನಡುವೆ, ನಟಿ ಕಿಯಾರಾ ಅವರು ಫೆಮಿನಾಗೆ ನೀಡಿದ ಸಂದರ್ಶನವೊಂದರಲ್ಲಿ, ಗೀತು ಮೋಹನ್ದಾಸ್ ಅವರ ಚಿತ್ರವನ್ನು ತಾನು ಏಕೆ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

‘ನಾನು ಈ ಸಿನಿಮಾದ ಕಥೆಯನ್ನು ಕೇಳಿದಾಗ, ಈ ಪಾತ್ರವನ್ನು ಎಷ್ಟು ಚೆಂದವಾಗಿ ರೂಪಿಸಲಾಗಿದೆ ಎಂದು ನೋಡಿ ಬೆರಗಾದೆ. ಇದು ಓರ್ವ ನಟ ಅಥವಾ ನಟಿ ಬಯಸುವ ಎಲ್ಲ ರೀತಿಯ ಅಂಶಗಳನ್ನು, ಆಳವಾದ ಅಭಿನಯದ ಅವಕಾಶವನ್ನು ಹೊಂದಿತ್ತು. ಇಂತಹ ಪಾತ್ರವನ್ನು ನಿರ್ವಹಿಸಲು ನನ್ನಲ್ಲಿ ಆತ್ಮವಿಶ್ವಾಸ ಮೂಡುವಂತಹ ಹಂತವನ್ನು ನನ್ನ ವೃತ್ತಿಜೀವನದಲ್ಲಿ ತಲುಪಿದ್ದೇನೆ ಎಂದು ನನಗೆನಿಸಿತು, ಹಾಗಾಗಿ ಆ ಪಾತ್ರ ಒಪ್ಪಿಕೊಂಡೆ ಎಂದು’ ಕಿಯಾರಾ ಹೇಳಿದ್ದಾರೆ.

ಮುಂದುವರೆದು ಮಾತನಾಡಿ, ‘ಮಹಿಳೆಯರನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಸೀಮಿತಗೊಳಿಸಿ ತೋರಿಸುವ ಪಾತ್ರಗಳು ನನಗೆ ಇಷ್ಟ ಆಗುವುದಿಲ್ಲ. ವೈಯಕ್ತಿಕವಾಗಿ ನನಗೆ ಮಹಿಳಾ ಶಕ್ತಿಯಲ್ಲಿ ನಂಬಿಕೆ ಇದೆ, ಹಾಗಿದ್ದಮೇಲೆ ನಮ್ಮ ಪಾತ್ರಗಳು ಯಾಕೆ ಹಾಗೆ ಇರಬಾರದು? ಎಂದು ಪ್ರಶ್ನಿಸಿದ್ದು, ಮಹಿಳಾ ಪಾತ್ರಗಳು ಬಲವಾದ, ವಾಸ್ತವಿಕ ಹಾಗೂ ಸಂಕೀರ್ಣವಾಗಿರಬೇಕು, ಆ ಅಂಶಗಳು ‘ಟಾಕ್ಸಿಕ್’ ಸಿನಿಮಾದ ಪಾತ್ರದಲ್ಲಿ ನನಗೆ ಕಾಣಿಸಿತು ಎಂದು ಕಿಯಾರಾ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿಗೆ ಆಘಾತ! ಉಪಸಭಾಪತಿ ಎಂ.ಕೆ. ಪ್ರಾಣೇಶ್ ಆಯ್ಕೆ ಅಸಿಂಧು; ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಜಯಭೇರಿ

ಕಾವೇರಿ ಜಲ ವಿವಾದ: ತಮಿಳುನಾಡು CM Vijay ಭೇಟಿಗೆ ಬ್ರೇಕ್! ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ; Video

ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಬೆಚ್ಚಿಬಿದ್ದ ಕುಂದಾಪುರ

'ನೀವೇನ್ ಬಿಜೆಪಿಯವ್ರಾ?'; ಪತ್ರಕರ್ತನ ಪ್ರಶ್ನೆಗೆ ರಾಹುಲ್ ಗಾಂಧಿ ಗರಂ, ಇಷ್ಟಕ್ಕೂ ಆಗಿದ್ದೇನು? Video

'ಮೋದಿ ರಾಜೀನಾಮೆ ಕೇಳಲು ನಿನಗೆಷ್ಟು ಧೈರ್ಯ'?: ಬೆಂಗಳೂರಿನಲ್ಲಿ ನೀಟ್ ಪ್ರತಿಭಟನಾಕಾರನ ಮೇಲೆ ಭೀಕರ ಹಲ್ಲೆ; FIR ದಾಖಲು