ವಿಸ್ಮಯ ಮೋಹನ್​ಲಾಲ್​ 
ಸಿನಿಮಾ ಸುದ್ದಿ

'ನಾನು ಫಿಟ್ ಆಗಿರಲಿಲ್ಲ, ನನ್ನ ತೂಕ 100 KG ಆಗಿತ್ತು; ಆದ್ರೆ ಥಾಯ್ಲೆಂಡ್​ ಪ್ರವಾಸ ಎಲ್ಲವನ್ನು ಬದಲಿಸಿತು': ನಟಿ ವಿಸ್ಮಯ ಮೋಹನ್​ಲಾಲ್​

ವಿಸ್ಮಯ ಮೋಹನ್​ಲಾಲ್​ ಅಭಿನಯದ 'ತುಡುಕ್ಕಮ್​' ಸಿನಿಮಾ ಆಗಸ್ಟ್ 7 ರಂದು ತೆರೆಕಾಣಲಿದೆ.

ಇತ್ತೀಚಿಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಟೀವ್ರ ಟೀಕೆಗಳನ್ನು ಎದುರಿಸಿದ್ದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಪುತ್ರಿ ವಿಸ್ಮಯ ಮೋಹನ್​ಲಾಲ್​ ಅವರು ಈಗ 'ತುಡುಕ್ಕಮ್​' ಚಿತ್ರದ ಮೂಲಕ ಮಾಲಿವುಡ್​ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ವಿಸ್ಮಯ ಮೋಹನ್​ಲಾಲ್​ ಅಭಿನಯದ 'ತುಡುಕ್ಕಮ್​' ಸಿನಿಮಾ ಆಗಸ್ಟ್ 7 ರಂದು ತೆರೆಕಾಣಲಿದೆ. ಈ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ವಿಸ್ಮಯ, ತಮ್ಮ ಜೀವನದಲ್ಲಿ ಆದ ದೊಡ್ಡ ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಥಾಯ್ಲೆಂಡ್‌ಗೆ ತೆರಳಿದ್ದ ವಿಸ್ಮಯ, ಈ ಪ್ರವಾಸವು ತನ್ನ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿತು ಎಂದು ಬಹಿರಂಗಪಡಿಸಿದ್ದಾರೆ. ಎರಡು ವಾರಗಳ ಪ್ರವಾಸವು ಒಂಬತ್ತು ತಿಂಗಳ ಕಾಲದ ವಾಸವಾಗಿ ಬದಲಾಯಿತು ಎಂದು ನಟಿ ಹೇಳಿದ್ದಾರೆ.

ಮುಯೇ ಥಾಯ್ ಸಮರ ಕಲೆ ಕಲಿತ ವಿಸ್ಮಯ

ಥಾಯ್ಲೆಂಡ್‌ನಲ್ಲಿ ನಾನು ಉಳಿದುಕೊಂಡಿದ್ದ ಸಮಯದಲ್ಲಿ ಮುಯೇ ಥಾಯ್ ಸಮರ ಕಲೆಯ ಪರಿಚಯವಾಯಿತು. ಇದು ದೈಹಿಕ ಫಿಟ್‌ನೆಸ್ ನೀಡುವುದಲ್ಲದೆ ಮಾನಸಿಕ ಸಾಮರ್ಥ್ಯ ಹಾಗೂ ಶಿಸ್ತನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವಿಸ್ಮಯ ಹೇಳಿದ್ದಾರೆ.

ಮುಯೇ ಥಾಯ್ ಥಾಯ್ಲೆಂಡ್‌ನ ರಾಷ್ಟ್ರೀಯ ಕ್ರೀಡೆಯಾಗಿದೆ. ಇದು ಮೊಣಕಾಲುಗಳು ಮತ್ತು ಮೊಣಕೈಗಳನ್ನು ಬಳಸುವುದರಿಂದ ಇದನ್ನು 'ಎಂಟು ಅಂಗಗಳ ಕಲೆ' ಎಂದೂ ಕರೆಯಲಾಗುತ್ತದೆ ಎಂದಿದ್ದಾರೆ.

ಇದು ನನ್ನ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಆ ಸಮಯದಲ್ಲಿ ನಾನು ಫಿಟ್ ಆಗಿರಲಿಲ್ಲ. ಫಿಟ್‌ನೆಸ್ ಮತ್ತು ತೂಕ ಎಂಬುದು ಎರಡು ಬೇರೆ ಬೇರೆ ವಿಷಯಗಳು. ಒಬ್ಬ ವ್ಯಕ್ತಿಯು 98 ಕೆಜಿ ತೂಕವಿದ್ದರೂ ಫಿಟ್ ಆಗಿರಬಹುದು. ಆದರೆ ನಾನು ಸುಮಾರು 100 ಕೆಜಿ ಇದ್ದಾಗ ಮೆಟ್ಟಿಲು ಹತ್ತುವುದಕ್ಕೂ ಹೆಣಗಾಡುತ್ತಿದ್ದೆ. ನನಗೆ ತೀವ್ರವಾಗಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಆಗಲೇ ನಾನು ಥಾಯ್ಲೆಂಡ್‌ಗೆ ತೆರಳಿದೆ. ಹೊಸದನ್ನು ಪ್ರಯತ್ನಿಸೋಣ ಎಂದುಕೊಂಡೆ. ಹಾಗೆ ನಾನು ಕೊಹ್ ಸಮುಯಿ ದ್ವೀಪದಲ್ಲಿರುವ 'ಫಿಟ್ಕೊ' ಎನ್ನುವ ಮುಯೇ ಥಾಯ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡೆ ಎಂದು ವಿಸ್ಮಯ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

ಬಿಜೆಪಿಗೆ ಆಘಾತ! ಉಪಸಭಾಪತಿ ಎಂ.ಕೆ ಪ್ರಾಣೇಶ್ ಆಯ್ಕೆ ಅಸಿಂಧು; ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಜಯಭೇರಿ

ಕಾವೇರಿ ಜಲ ವಿವಾದ: ತಮಿಳುನಾಡು CM Vijay ಭೇಟಿಗೆ ಬ್ರೇಕ್! ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ; Video

ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಬೆಚ್ಚಿಬಿದ್ದ ಕುಂದಾಪುರ

'ನೀವೇನ್ ಬಿಜೆಪಿಯವ್ರಾ?'; ಪತ್ರಕರ್ತನ ಪ್ರಶ್ನೆಗೆ ರಾಹುಲ್ ಗಾಂಧಿ ಗರಂ, ಇಷ್ಟಕ್ಕೂ ಆಗಿದ್ದೇನು? Video