ವಿಜಯಲಕ್ಷ್ಮೀ ದರ್ಶನ್, ಧನ್ವೀರ್ 
ಸಿನಿಮಾ ಸುದ್ದಿ

'ಜೈಲಿನಲ್ಲಿ ಕ್ರಿಮಿನಲ್ ಗಂಡ, ಬಾಯ್‌ಫ್ರೆಂಡ್ ಜತೆ ಹೆಂಡತಿ ಸುತ್ತಾಟ' ಪೋಸ್ಟ್: ಕೆರಳಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಜೈಲಿನಲ್ಲಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ ಕೆಲ ಕಿಡಿಗೇಡಿಗಳು ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೀಳು ಮಟ್ಟದ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಜೈಲಿನಲ್ಲಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ ಕೆಲ ಕಿಡಿಗೇಡಿಗಳು ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೀಳು ಮಟ್ಟದ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.

ತಮ್ಮ ನೆಚ್ಚಿನ ನಟ ದರ್ಶನ್ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ಒಂದೆಂಡೆ ಪ್ರಾರ್ಥನೆ ಮಾಡುತ್ತಿದ್ದರೆ ದರ್ಶನ್ ಅವರ ಜಾಮೀನಿಗಾಗಿ ವಿಜಯಲಕ್ಷ್ಮಿ ಶತಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಕೆಲವರು ವಿಜಯಲಕ್ಷ್ಮಿ ದರ್ಶನ್ ಅವರನ್ನು ಹೀನಾಯವಾಗಿ ಪೋಸ್ಟ್ ಮಾಡುತ್ತಿದ್ದು ಇದರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ದರ್ಶನ್ ಹಾಗೂ ಕುಟುಂಬದ ವಿರುದ್ಧ ‘ಜಲಗಾರ ಯೂನಿವರ್ಸಿಟಿ’ ಎಂಬ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ಸತತವಾಗಿ ಕೆಟ್ಟ ಪೋಸ್ಟ್ ಹರಡುತ್ತಾ ಬಂದಿದ್ದಾನೆ. ಇದೀಗ ಆ ಖಾತೆಯಲ್ಲಿ ಮಾಡಲಾಗಿರುವ ಪೋಸ್ಟ್‌ನಲ್ಲಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಹೀನಾಯವಾಗಿ ಬರೆದುಕೊಂಡಿದ್ದಾನೆ.

ಪೋಸ್ಟ್ ನಲ್ಲಿ ಏನಿದೆ?

ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ, ಗಂಡ ಜೈಲಿನಲ್ಲಿದ್ದರೆ ಈಕೆ ಬಾಯ್‌ಫ್ರೆಂಡ್ ಜತೆ ಸುತ್ತಾಟ ನಡೆಸುತ್ತಿದ್ದಾಳೆ ಎಂದು ಬರೆದುಕೊಂಡು ಅನೇಕ ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಮಗನ ಕುರಿತೂ ಸಹ ವಿಕೃತಿ ಮೆರೆದಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನನ್ನು ಬಾಯಿ ತುಂಬಾ ಅತ್ತಿಗೆ ಎಂದೇ ಕರೆಯುವ ಧನ್ವೀರ್ ಜತೆ ದರ್ಶನ್ ಅಭಿನಯದ ಡೇವಿಲ್ ಚಿತ್ರ ವೀಕ್ಷಣೆಗೆ ತೆರಳಿದ್ದ ವಿಡಿಯೊವನ್ನು ಇಲ್ಲಿ ಬಳಸಿಕೊಂಡು ಹೀನಾಯ ಮನಸ್ಥಿತಿ ಪ್ರದರ್ಶಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!

ಚಳಿ ಚಳಿ ತಾಳೆನು ಈ ಚಳಿಯಾ! ಹಿರಿಯ ನಟಿ ಅಂಬಿಕಾ ವಿರುದ್ಧ 46 ಕೋಟಿ ರೂ. ಮೌಲ್ಯದ ಚೆಕ್ ವಂಚನೆ ಪ್ರಕರಣ, ದೂರು ದಾಖಲು

ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ರೈತರ ಸಾವು!