ರಾಧಿಕಾ ಶರತ್ ಕುಮಾರ್ 
ಸಿನಿಮಾ ಸುದ್ದಿ

K Bhagyaraj Dies: ಸಾವಿನ ಮನೆಯಲ್ಲೂ TRP ಗಾಗಿ ಮುಗಿಬಿದ್ದ ಮಾಧ್ಯಮಗಳು,ರಾಧಿಕಾ ಶರತ್ ಕುಮಾರ್ ಗರಂ!

ಕಣ್ಣೀರಿಡುತ್ತಾ ದಯವಿಟ್ಟು, ಹಿಂದೆ ಹೋಗಿ, ದು:ಖದಲ್ಲಿರುವ ಅವರ ಕುಟುಂಬಕ್ಕೆ ಖಾಸಗಿ ಕ್ಷಣಗಳಿಗೆ ಅಡ್ಡಿ ಮಾಡಬೇಡಿ ಎಂದು ಎರಡು ಕೈ ಮುಗಿದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ ಕೆ. ಭಾಗ್ಯರಾಜ್ ಅವರ ನಿಧನದಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ನಿವಾಸದ ಹೊರಗೆ ಮೌನ, ದುಃಖ ಮಾಡುಗಟ್ಟಿತ್ತು. ಅಂತಿಮ ನಮನ ಸಲ್ಲಿಸಲು ಕುಟುಂಬಸ್ಥರು, ಸಹೋದ್ಯೋಗಿಗಳು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇಂತಹ ದು:ಖದ ಸನ್ನಿವೇಶದಲ್ಲಿ TRP ಗಾಗಿ ಮುಗಿಬಿದ್ದ ಮಾಧ್ಯಮಗಳ ವಿರುದ್ಧ ನಟಿ ರಾಧಿಕಾ ಶರತ್‌ಕುಮಾರ್ ಗರಂ ಆಗಿದ್ದಾರೆ.

ಕಣ್ಣೀರಿಡುತ್ತಾ ದಯವಿಟ್ಟು, ಹಿಂದೆ ಹೋಗಿ, ದು:ಖದಲ್ಲಿರುವ ಅವರ ಕುಟುಂಬಕ್ಕೆ ಖಾಸಗಿ ಕ್ಷಣಗಳಿಗೆ ಅಡ್ಡಿ ಮಾಡಬೇಡಿ ಎಂದು ಎರಡು ಕೈ ಮುಗಿದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಹೌದು. ಭಾಗ್ಯರಾಜ್ ಅವರ ಮೃತದೇಹ ಹೊತ್ತ ಆಂಬ್ಯುಲೆನ್ಸ್ ನಿವಾಸದತ್ತ ಬರುತ್ತಿದ್ದಂತೆ, ನೇರ ದೃಶ್ಯಗಳನ್ನು ಸೆರೆಹಿಡಿಯಲು ಮಾಧ್ಯಮ ಸಿಬ್ಬಂದಿ ಸುತ್ತುವರೆದಿದ್ದಾರೆ. ಇದು ದುಃಖಿತ ಕುಟುಂಬಕ್ಕೆ ಇನ್ನಷ್ಟು ದುಃಖವನ್ನುಂಟುಮಾಡಿತು.

ಇದನ್ನು ನೋಡಿ ಗರಂ ಆದ ರಾಧಿಕಾ ಶರತ್‌ಕುಮಾರ್, ಕೈ ಮುಗಿದು ಕೇಳಿಕೊಳ್ಳುತ್ತೇನೆ. ಟಿಆರ್ ಪಿಗಾಗಿ ಬೆನ್ನಟ್ಟಬೇಡಿ. ನಮ್ಮ ಸಿನಿಮಾಗಳ ಮೂಲಕ ನಿಮ್ಮನ್ನು ನಾವು ರಂಜಿಸುತ್ತೇವೆ. ದಯವಿಟ್ಟು ಕುಟುಂಬಕ್ಕೆ. ಕುಟುಂಬದ ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಬೇಡಿ. ಹಿಂದೆ ಸರಿದು ಪರಿಸ್ಥಿತಿಯನ್ನು ಗೌರವಿಸುವಂತೆ ಪದೇ ಪದೇ ಕೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

10 Years Of Surgical Strike: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿ; ಭಾರತದ ದಿಟ್ಟ ನಿಲುವಿಗೆ ಹೊಸ ಉದಾಹರಣೆ: ಪ್ರಧಾನಿ ಮೋದಿ

ಉತ್ತರ ಪ್ರದೇಶದಲ್ಲಿ ವರುಣನ ರೌದ್ರಾವತಾರ; 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ, ಅವಾಂತರಕ್ಕೆ 10 ಮಂದಿ ಬಲಿ, 17 ಜನರಿಗೆ ಗಾಯ..!

ಪಂಜಾಬ್ LPU ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ: ಕಿಡಿ ಹೊತ್ತಿಸಿದ ಸಾಮಾಜಿಕ ಜಾಲತಾಣದ ಸುಳ್ಳು ವದಂತಿ! ಅತ್ಯಾಚಾರ ಆರೋಪ ತಳ್ಳಿಹಾಕಿದ ಪೊಲೀಸರು

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕಸದ ಬುಟ್ಟಿಗೆ ಎಸೆದು, Iran ಸ್ಥಿತಿ ಲೇವಡಿ ಮಾಡಿದ ಡೊನಾಲ್ಡ್ ಟ್ರಂಪ್..!