ಸಿನಿಮಾ ಸುದ್ದಿ

'ವೀರಮದಕರಿಯಲ್ಲಿ ನನ್ನ ಮುಖಕ್ಕಿಂತ ಹೊಕ್ಕಳನ್ನೇ ಹೆಚ್ಚು ತೋರ್ಸಿದ್ರು, ಅದಕ್ಕಾಗಿಯೇ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ': ರಾಗಿಣಿ ದ್ವಿವೇದಿ

ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅವರು ವಿವಿಧ ರೀತಿಯ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಕನ್ನಡದಲ್ಲಿ ವೀರ ಮದಕರಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ವೃತ್ತಿ ಬದುಕು ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರು, ವಿವಾದವನ್ನೂ ಕಂಡರು.

ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅವರು ವಿವಿಧ ರೀತಿಯ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಆರ್ ಜೆ ತುಹಿನ್ ಅವರ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಸಂದರ್ಶಕ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದು ನಟ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಅಸಮಾಧಾನಕ್ಕೀಡುಮಾಡಿದೆ. ‘ವೀರ ಮದಕರಿ’ ಚಿತ್ರದಲ್ಲಿ ರಾಗಿಣಿ ಸೊಂಟ ಕಂಡಾಗಲೆಲ್ಲ ಸುದೀಪ್ ಕೈ ಸೊಂಟದ ಬಳಿ ಹೋಗುವ ರೀತಿಯಲ್ಲಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಅದನ್ನು ತಮಾಷೆಯ ರೀತಿಯಲ್ಲಿ ತೋರಿಸಲಾಗಿದೆ.

ಈ ಬಗ್ಗೆ ಆರ್​​ಜೆ ತುಹಿನ್ ರಾಗಿಣಿ ಬಳಿ. ‘ನಿಮ್ಮ ಮೊದಲ ಚಿತ್ರ ವೀರ ಮದಕರಿಯಲ್ಲಿ ಸೊಂಟ ಮತ್ತು ನೇವಲ್ ಅಂದರೆ ಹೊಕ್ಕಳು ತೋರಿಸಲಾಗಿದೆ. ನಿರ್ದೇಶಕರು ನೇವಲ್ ಆಫೀಸರ್ ಆಗಿದ್ರಾ? ಎಂದು ಪ್ರಶ್ನೆ ಮಾಡಿದರು.

ಅದಕ್ಕೆ ರಾಗಿಣಿ, ‘ಈ ಐಡಿಯಾ ಹಿಂದೆ ಯಾವ ಉದ್ದೇಶ ಇತ್ತು ಅನ್ನೋದು ಗೊತ್ತಿಲ್ಲ. ಮಹಿಳೆಯರ ದೇಹದ ಅತ್ಯಂತ ಮಾದಕ ಭಾಗಗಳಲ್ಲಿ ಅವಳ ಹೊಟ್ಟೆ ಕೂಡ ಒಂದು. ಹೀರೋಗೆ ಹೊಕ್ಕಳ ವೀಕ್​​ನೆಸ್ ಇತ್ತು ಎಂದು ತೋರಿಸುವ ಪ್ರಯತ್ನ ಆ ಚಿತ್ರದಲ್ಲಿ ಇದ್ದಿರಬಹುದು ಎಂದು ನಗುತ್ತಾ ಉತ್ತರಿಸಿದರು.

ಹೊಕ್ಕಳು ತೋರಿಸೋದಕ್ಕೆ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದರೇ ಎಂದು ನನಗೆ ಅನಿಸುತ್ತಿದೆ. ಆ ಸಿನಿಮಾದಲ್ಲಿ ನನ್ನ ಮುಖಕ್ಕಿಂತ ಹೆಚ್ಚಾಗಿ ನನ್ನ ಹೊಕ್ಕಳು ತೋರಿಸಲಾಗಿದೆ ಎಂದು ರಾಗಿಣಿ ಅಂದುಬಿಟ್ಟರು.

ರಾಗಿಣಿ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಚ್ಚ ಸುದೀಪ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಜಮೌಳಿಯ ‘ವಿಕ್ರಮಾರ್ಕುಡು’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಏನಿದೆಯೋ ಅದನ್ನೇ ಕನ್ನಡದಲ್ಲಿ ತೋರಿಸಲಾಗಿದೆ. ಏಕೆ ಆ ರೀತಿ ತೋರಿಸಿದಿರಿ ಎಂದು ರಾಜಮೌಳಿಯನ್ನು ಪ್ರಶ್ನೆ ಮಾಡಬೇಕು ಎಂದು ಅನೇಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ