ವಿಜಯ್ ದಳಪತಿ ಮತ್ತು ತ್ರಿಷಾ ತನ್ನ ತಾಯಿ ಉಮಾ ಜೊತೆ  
ಸಿನಿಮಾ ಸುದ್ದಿ

ತ್ರಿಷಾ ಬರ್ತ್ ಡೇ ದಿನವೇ ದಳಪತಿ ವಿಜಯ್ ರಾಜಕೀಯ ಭವಿಷ್ಯ ನಿರ್ಧಾರ: ಇಬ್ಬರ ರಿಲೇಷನ್ ಶಿಪ್ ವದಂತಿಗೆ ಪುಷ್ಠಿ ನೀಡಿದರೇ ತಾಯಿ ಉಮಾ?

ಈ ಮಧ್ಯೆ, ವಿಜಯ್ ಅವರು ಚುನಾವಣೆಗೂ ಮೊದಲೇ ಡಿವೋರ್ಸ್ ಪಡೆದುಕೊಂಡು ಚುನಾವಣೆ ಮುಗಿದ ಕೂಡಲೇ ನಟಿ ತ್ರಿಷಾ ಕೃಷ್ಣನ್ ಜೊತೆ ಮದುವೆಯಾಗುತ್ತಾರಾ ಎಂಬ ಸಂಶಯ ಕಾಣುತ್ತಿದೆ.

ತಮಿಳು ನಾಡು ವಿಧಾನಸಭೆ ಚುನಾವಣೆಯ ಗದ್ದಲದ ನಡುವೆ ಟಿವಿಕೆ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಅವರ ಡಿವೋರ್ಸ್ ಮತ್ತು ಮದುವೆ ವಿಚಾರ ಭಾರೀ ಸುದ್ದಿಯಾಗುತ್ತಿದೆ. ಏಪ್ರಿಲ್ 23ರಂದು ತಮಿಳು ನಾಡಿನ 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರ ಟಿವಿಕೆ (ತಮಿಳಗ ವೆಟ್ರಿ ಕಳಗಮ್) ಪಕ್ಷ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಈ ಮಧ್ಯೆ, ವಿಜಯ್ ಅವರು ಚುನಾವಣೆಗೂ ಮೊದಲೇ ಡಿವೋರ್ಸ್ ಪಡೆದುಕೊಂಡು ಚುನಾವಣೆ ಮುಗಿದ ಕೂಡಲೇ ನಟಿ ತ್ರಿಷಾ ಕೃಷ್ಣನ್ ಜೊತೆ ಮದುವೆಯಾಗುತ್ತಾರಾ ಎಂಬ ಸಂಶಯ ಕಾಣುತ್ತಿದೆ.

ವಿಜಯ್ ಅವರ ಪತ್ನಿ ಸಂಗೀತಾ ವಿಜಯ್​​ಗೆ ನಟಿ ಜೊತೆ ಅಕ್ರಮ ಸಂಬಂಧ ಇದೆ, ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿ ಈಗಾಗಲೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಸಲ್ಲಿಕೆ ಮಾಡಿರುವ ಡಿವೋರ್ಸ್ ಅರ್ಜಿ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ಏಪ್ರಿಲ್ 20ರಂದು ನಡೆಯಲಿದೆ.

ಈ ವಿಚಾರಣೆ ಮುಗಿದ ಮೂರೇ ದಿನಕ್ಕೆ ಅಂದರೆ, ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 20ರಂದು ವಿಜಯ್ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇರುವುದರಿಂದ ಅವರು ಇಲ್ಲಿಗೆ ಹಾಜರಿ ಹಾಕುತ್ತಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅವರು ಈ ವಿಚಾರಣೆಯನ್ನು ಮುಂದಕ್ಕೆ ಹಾಕಿಕೊಳ್ಳುವಂತೆ ಮನವಿ ಮಾಡಬಹುದು.

ಇನ್ನು, ಮೇ 4 ತ್ರಿಷಾ ಜನ್ಮದಿನ. ಇದೇ ದಿನದಂದು ತಮಿಳುನಾಡು ಚುನಾವಣೆ ಫಲಿತಾಂಶ ಹೊರ ಬೀಳಲಿದೆ ಎಂಬುದು ವಿಶೇಷ. ಈ ದಿನ ವಿಜಯ್ ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ವಿಜಯ್ ಸ್ಪರ್ಧಿಸುತ್ತಿದ್ದಾರೆ. ಒಂದೊಮ್ಮೆ ಅವರು ಗೆಲುವು ಕಂಡರೆ ಮುಂದಿನ ಸಿಎಂ ಆಗಿ ವಿಜಯ್ ಆಯ್ಕೆ ಆಗುತ್ತಾರೆ.

ಕುತೂಹಲ ಮೂಡಿಸಿದ ತ್ರಿಷಾ ತಾಯಿಯ ಲೈಕ್ ಬಟನ್

ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ರೀಲ್ಸ್ ವೊಂದಕ್ಕೆ ತ್ರಿಷಾ ತಾಯಿ ಲೈಕ್ ಬಟನ್ ಒತ್ತಿರುವುದು. ಅಂದರೆ ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧ ನಿಜ ಅದನ್ನು ಅವರ ತಾಯಿ ಒಪ್ಪಿಕೊಂಡಿದ್ದಾರೆ, ಮುಂದೆ ಊಹೆಯಂತೆ ಮದುವೆಯಾಗಬಹುದು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ವಿಜಯ್ ಮೌನ

ಇಷ್ಟೆಲ್ಲಾ ವದಂತಿ, ಊಹಾಪೋಹ, ಆರೋಪಗಳು ಕೇಳಿಬರುತ್ತಿದ್ದರೂ ನಟಿ ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡುತ್ತಿದ್ದರೆ ವಿಜಯ್ ಮಾತ್ರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರತಿಕ್ರಿಯೆ ನೀಡದೆ ಸದ್ಯ ಚುನಾವಣೆಯತ್ತ ಮಾತ್ರ ಗಮನ ಹರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ