ಯಲ್ಲಾಪುರ: ರೀಲ್ಸ್ ಅಜ್ಜಿ ಎಂದೇ ಖ್ಯಾತಿರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಿವಾಸಿ 93 ವರ್ಷದ ಲಕ್ಷ್ಮಿ ನಾಯ್ಕ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು. ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸೂರಜ್ ತಮ್ಮ ಅಜ್ಜಿ ಲಕ್ಷ್ಮಿ ಜೊತೆ ರೀಲ್ಸ್ ಮಾಡುತ್ತಿದ್ದರು. ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಲಕ್ಷ್ಮೀ ನಾಯ್ಕ್ ನಟನೆ ಮಾಡುತ್ತಿದ್ದರು. ಈ ಮೂಲಕ ರಾಜ್ಯಾದ್ಯಂತ ಲಕ್ಷ್ಮೀ ನಾಯ್ಕ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಲಕ್ಷ್ಮೀ ನಾಯ್ಕ್ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.