ನೋಯ್ಡಾದ 33 ವರ್ಷದ ಮಹಿಳೆ ತ್ವಿಶಾ ಶರ್ಮಾ, ಮೇ 12ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತನ್ನ ಪತಿ ವಕೀಲ ಸಮರ್ಥ್ ಸಿಂಗ್ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಪತಿ ಮತ್ತು ಅವರ ತಾಯಿ ನಿವೃತ್ತ ನ್ಯಾಯಾಧೀಶೆಯಾಗಿರುವ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ಈಮಧ್ಯೆ, ಸಮರ್ಥ್ ಸಿಂಗ್ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯಲ್ಲಿ ತ್ವಿಶಾ ಮಾದಕ ವ್ಯಸನಿಯಾಗಿದ್ದು, ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸುವ ಮೊದಲು ತ್ವಿಶಾ ತೆಲುಗು ಚಿತ್ರ 'ಮುಗ್ಗುರು ಮೊನಗಲ್ಲು' (2021) ಮತ್ತು ಹಿಂದಿ ಚಿತ್ರ 'ಜರಾ ಸಂಭಾಲ್ ಕೇ' (2018) ನಲ್ಲಿ ಕೆಲಸ ಮಾಡಿದ್ದರು. ಅವರು ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ಮಿಸ್ ಪುಣೆ ಪ್ರಶಸ್ತಿಯನ್ನು ಗೆದ್ದಿದ್ದರು.
ಇತ್ತೀಚೆಗೆ 'ದಿ ಗರ್ಲ್‌ಫ್ರೆಂಡ್' (2025) ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿ ಖ್ಯಾತಿ ಪಡೆದ ದೀಕ್ಷಿತ್ ಶೆಟ್ಟಿ, ತ್ವಿಶಾ ಅವರ ಹಠಾತ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದರು.
'ಇದು ತುಂಬಾ ಆಘಾತಕಾರಿ ಸುದ್ದಿ. ನಾನು ಅವರನ್ನು ಯಾವಾಗಲೂ ಈ ಬದ್ಧತೆ, ಕಷ್ಟಪಟ್ಟು ದುಡಿಯುವ ಹುಡುಗಿ ಎಂದು ತಿಳಿದಿದ್ದೆ, ಅವರು ತಾವು ಮಾಡುವ ಯಾವುದೇ ಕೆಲಸದಲ್ಲಿ ಉತ್ಸಾಹ ಹೊಂದಿದ್ದರು. ಅವರು ತಮ್ಮ ಪ್ರಾಣವನ್ನೇ ತೆಗೆದುಕೊಂಡಿದ್ದಾರೆ ಎಂದು ತಿಳಿದು ಆಘಾತಕಾರಿಯಾಗಿದೆ' ಎಂದು ನಟ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಅವರು ನನ್ನ ಸಂಪರ್ಕದಲ್ಲಿ ಇರಲಿಲ್ಲ ಮತ್ತು ಅವರು ಕೊನೆಯ ಬಾರಿಗೆ ನಾಲ್ಕು ವರ್ಷಗಳ ಹಿಂದೆ ಮಾತನಾಡಿದ್ದರು ಎಂದು ದೀಕ್ಷಿತ್ ಶೆಟ್ಟಿ ಹೇಳಿದರು.
'ಅವರು ಮದುವೆಯಾಗಿದ್ದಾರೆಂದು ಸಹ ನನಗೆ ತಿಳಿದಿರಲಿಲ್ಲ. ನಾವು ಆ ಒಂದು ಚಿತ್ರದಲ್ಲಿ ಕೆಲಸ ಮಾಡಿದ್ದೇವೆ ಮತ್ತು ನಂತರ ಅವರು ತನ್ನ ಊರಿಗೆ ಹಿಂತಿರುಗಿದರು. ಅವರು ಸ್ನಾತಕೋತ್ತರ ಪದವಿ ಮಾಡಲು ಬಯಸಿದ್ದರು ಮತ್ತು ನಟನೆ ಅವರು ನಿರೀಕ್ಷಿಸಿದ ಮಟ್ಟಕ್ಕೆ ಹೊಂದಿಕೆಯಾಗಲಿಲ್ಲ ಎಂದು ನನಗೆ ಅವರು ಹೇಳಿದಳು. ಅವಳ ಸಹೋದರ ಸೇನೆಯಲ್ಲಿದ್ದಾರೆ ಮತ್ತು ನಟನೆ ತನಗೆ ಆಗಿ ಬರುತ್ತಿಲ್ಲ ಎಂದು ಅವರು ಅರಿತುಕೊಂಡರು. ಆದ್ದರಿಂದಲೇ ಅವರು ಊರಿಗೆ ಹಿಂತಿರುಗಿ ತನ್ನ ಕುಟುಂಬದೊಂದಿಗೆ ನೆಲೆಸಲು ಬಯಸಿದ್ದರು' ಎಂದು ಅವರು ಹೇಳಿದರು.
'ಮುಗ್ಗುರು ಮೊನಗಲ್ಲು' ಚಿತ್ರದ ನಿರ್ದೇಶಕ ಅಭಿಲಾಷ್ ರೆಡ್ಡಿ, ಚಿತ್ರ ಪ್ರದರ್ಶನದ ದಿನದಂದು ಆಕೆಯ ಪೋಷಕರನ್ನು ಭೇಟಿಯಾಗಿದ್ದಾಗಿ ಹೇಳಿದರು. 'ನಮ್ಮ ಚಿತ್ರ ಪ್ರದರ್ಶನದ ದಿನದಂದು ನಾನು ಆಕೆಯ ಪೋಷಕರನ್ನು ಭೇಟಿಯಾದೆ ಮತ್ತು ಅವರೆಲ್ಲರೂ ತುಂಬಾ ಪ್ರೀತಿಯ ವ್ಯಕ್ತಿಗಳಾಗಿದ್ದರು. ಆಕೆಯ ನಿಧನದ ಸುದ್ದಿ ತುಂಬಾ ದುಃಖಕರ ಮತ್ತು ಆಘಾತಕಾರಿ' ಎಂದರು.