ಕ್ಲ್ಯಾಪ್ ಮಾಡಿದ DCM ಪವನ್ ಕಲ್ಯಾಣ್ 
ಸಿನಿಮಾ ಸುದ್ದಿ

ಸೌತ್ ನಲ್ಲಿ KVN ಹೊಸ ಕ್ರಾಂತಿ! ಚಿರಂಜೀವಿಯ 158ನೇ ಸಿನಿಮಾ ನಿರ್ಮಾಣ; ಕ್ಲ್ಯಾಪ್ ಮಾಡಿದ DCM ಪವನ್ ಕಲ್ಯಾಣ್!

ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ KVN ಸಂಸ್ಥೆ ಹೊಸ ಕ್ರಾಂತಿ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ ಹಾಗೂ ವಿಜಯ್ ಜೊತೆ ಜನನಾಯಗನ್ ಸಿನಿಮಾ ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೈ ಜೋಡಿಸಿದೆ.

ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಹಣ ಹಾಕ್ತಿದ್ದಾರೆ. ಹೈದ್ರಾಬಾದ್‌ನಲ್ಲಿಂದು ಚಿತ್ರದ ಮುಹೂರ್ತ ನೆರವೇರಿದೆ. ಚಿರು ಸಹೋದರರು ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಕ್ಲ್ಯಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ಬಹುಕೋಟೆ ಬಜೆಟ್ ನಲ್ಲಿ ಕೆವಿಎನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಅಂದಹಾಗೇ ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಅಭಿಮಾನಿಗಳು ಈ ವಿಡಿಯೋ ಸಾಕಷ್ಟು ಸಂತಸಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆನೇಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕ್ರಿಕೆಟ್ ಕ್ರೀಡಾಂಗಣದಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್

ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ- ಮೋದಿ ಭೇಟಿ; ವ್ಯಾಪಾರ, ಭದ್ರತೆ, ಇಂಧನದ ಬಗ್ಗೆ ಚರ್ಚೆ

ಲೇಹ್‌ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್ ತೆಗೆದ ಸೆಲ್ಫಿ ವೈರಲ್!

ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ, ಹಾಕಿಕೊಂಡು ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ ಎಚ್ಚರಿಕೆ

SCROLL FOR NEXT