

ತೆಲುಗಿನ ಖ್ಯಾತ ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ದಂಪತಿಗೆ ಅವಳಿ ಮಕ್ಕಳು ಹುಟ್ಟಿದೆ. ಕೊನಿಡೇಲಾ ಮತ್ತು ಜಿರಂಜೀವಿ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು ಸೋಷಿಯಲ್ ಮೀಡಿಯಾ ಮೂಲಕ ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.
ದಂಪತಿಗೆ ನಿನ್ನೆ ಅಂದರೆ ಜನವರಿ 31ರಂದು ಗಂಡು ಮಗು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದೆ. ಉಪಾಸನಾ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವು ಎರಡನೇ ಬಾರಿ ಗರ್ಭವತಿಯಾಗಿರುವ ವಿಚಾರ ಹಂಚಿಕೊಂಡಿದ್ದರು.
“ಅಪಾರ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ರಾಮಚರಣ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು - ಗಂಡು ಮಗು ಮತ್ತು ಹೆಣ್ಣು ಮಗು ಜನಿಸಿದ್ದಾರೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.
ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುವುದು ಅಜ್ಜ-ಅಜ್ಜಿಯರಾದ ನಮಗೆ ಶುದ್ಧ ಸಂತೋಷ ಮತ್ತು ದೈವಿಕ ಆಶೀರ್ವಾದದ ಕ್ಷಣವಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ'' ಎಂದು ಹೇಳಿಕೊಂಡಿದ್ದಾರೆ.
ಮದುವೆಯಾಗಿ 10 ವರ್ಷಗಳ ನಂತರ ರಾಮ್ ಚರಣ್ ಮತ್ತು ಉಪಾಸನಾ ಬಾಳಲ್ಲಿ 2023 ರಲ್ಲಿ ಮೊದಲ ಮಗು ಪುತ್ರಿ ಕ್ಲಿನ್ ಕಾರಾಳನ್ನು ಬರಮಾಡಿಕೊಂಡಿದ್ದರು.
Advertisement