ಸೋಶಿಯಲ್ ಮೀಡಿಯಾದಲ್ಲಿ ‘ಹಳ್ಳಿ ಹುಡುಗಿ’ಎಂದು ಪ್ರಸಿದ್ದಿ ಪಡೆದಿರುವ ನಂಜನಗೂಡಿನ ಪಟಾಕಿ ಲಾವಣ್ಯ ಕುಮಾರಿ ಇದೀಗ ‘ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಅಗ್ನಿಪರೀಕ್ಷೆಯಲ್ಲಿ ನೇರ ನುಡಿಯ ಮೂಲಕವೇ ಜನರ ಮನಗೆದ್ದಿದ್ದ ಕುಮಾರಿ, ಮಾಡ್ರನ್ ಮಹಾಕವಿ ಮಂಜುನಾಥ್ ಎಲಿಮಿನೇಟ್ ಆಗಿ ಹೊರಗಡೆ ಬರ್ತಿದ್ದಂತೆ ಹೊಸ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದರು.
ಅದರಂತೆ ಅದೇ ನೇರನುಡಿಯನ್ನೇ ಅವರು ಬಿಗ್‌ಬಾಸ್ ಮನೆಯಲ್ಲಿ ಮುಂದುವರಿಸಿದ್ದರು. ಆದರೆ ಕಳೆದೊಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಟವಾಡಲು ಆಗಿರಲಿಲ್ಲ. ಇದೇ ಅವರಿಗೆ ಹಿನ್ನಡೆಯಾಗಿ ಈ ವಾರ ದೊಡ್ಮನೆಯಿಂದ ಹೊರಬಂದಿದ್ದಾರೆ.
ಈ ವಾರ ಆಸಿಯಾ, ಕಿರಣ್, ಕುಮಾರಿ, ಪ್ರಶಾಂತ್, ಧನುಶ್, ಗಗನ್, ಜಗದೀಶ್, ಪ್ರಶಾಂತ್ ಅವರುಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಮೊದಲಿಗೆ ಆಸಿಯಾ ಅವರನ್ನು ಸೇಫ್ ಮಾಡಲಾಯ್ತು. ಬಳಿಕ ಗಗನ್, ಬಳಿಕ ಧನುಶ್, ಬಳಿಕ ಕಿರಣ್ ಅವರುಗಳು ಸೇಫ್ ಆದರು. ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಉಳಿದಿದ್ದರು.
ಮತ್ತೊಮ್ಮೆ ಅದೃಷ್ಟದ ಬಾಗಿಲು ತೆಗೆದಿದೆ ಅನ್ನೋವಾಗಲೆ ಅವರಿಗೆ ಆರೊಗ್ಯ ಕೈ ಕೊಟ್ಟಿದೆ. ಹೀಗಾಗಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇನ್ನೂ ಕುಮಾರಿ ದೊಡ್ಮನೆಯಿಂದ ಹೊರಹೋಗುವುದನ್ನು ಕಂಡು ಕಿರಣ್ ಶಾಸ್ತ್ರಿ ಕಣ್ಣೀರಿಟ್ಟಿದ್ದಾರೆ.
ಒಟ್ಟಾರೇ, ವೈಲ್ಡ್‌ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿದ್ದ ಕುಮಾರಿ ಅವರ ಬಿಗ್‌ಬಾಸ್ ಕನ್ನಡ ಸೀಸನ್ 13ರ ಪಯಣ ಇದೀಗ ಅಂತ್ಯಗೊಂಡಿದೆ. ಮುಂದಿನ ವಾರ ಯಾರು ನಾಮಿನೇಷನ್‌ಗೆ ಒಳಗಾಗುತ್ತಾರೆ? ಯಾರ ಜರ್ನಿ ಕೊನೆಗೊಳ್ಳಲಿದೆ? ಎಂಬುದನ್ನು ಕಾದು ನೋಡಬೇಕಿದೆ.