ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇನ್ನು ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಿದ್ದು ಹಣಕಾಸಿನ ವಿಚಾರವಾಗಿ ನಟ ಧನ್ವೀರ್ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಧನ್ವೀರ್ ವಿರುದ್ಧ ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಈ ಮಧ್ಯೆ ದರ್ಶನ್ ಅವರ ರಾಜರಾಜೇಶ್ವರಿ ನಗರದ ಮನೆಯ ಮುಂದೆ ನವೆಂಬರ್ 1ರಂದು ಹೈಡ್ರಾಮಾ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದರ್ಶನ ಮನೆ ಮುಂದೆ ಒಂದರ ಹಿಂದೊಂದರಂತೆ ಹಲವು ಆಟೋಗಳನ್ನು ನಿಲ್ಲಿಸಲಾಗಿತ್ತು. ತಾನು ಧನ್ವೀರ್ ಮ್ಯಾನೇಜರ್ ಅಂತ ಹೇಳಿಕೊಂಡು ಕಾರ್ತಿಕ್ ಎಂಬಾತ ಆಟೋಗಳನ್ನು ಬುಕ್ ಮಾಡಿದ್ದನು. ಆಟೋ ಚಾಲಕನೊಬ್ಬನಿಗೆ ಕರೆ ಮಾಡಿ ತಾವು ಧ್ವನೀರ್ ಮ್ಯಾನೇಜರ್ ಅಂತ ಹೇಳಿ ಮನೆ ಒಳಗೆ ಬಿಡುವಂತೆ ಹೇಳುವಂತೆ ಹೇಳಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಯಾರನ್ನು ಒಳಗೆ ಬಿಡದಿದ್ದಾಗ ಆ ಅನಾಮಿಕ ಧನ್ವೀರ್ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದೆಲ್ಲವನ್ನೂ ದರ್ಶನ್ ಭದ್ರತೆ ಸಿಬ್ಬಂದಿ ತಮ್ಮ ಕ್ಯಾಮೆರಾನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆಟೋ ಬುಕ್ ಮಾಡಿದ ವ್ಯಕ್ತಿ ಪದೇ ಪದೇ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ದರ್ಶನ್ ಮ್ಯಾನೇಜರ್, ದರ್ಶನ್ ಅವರ ಸೆಕ್ಯುರಿಟಿ ಮತ್ತು ಕುಟುಂಬವನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದು ವಿಡಿಯೋನಲ್ಲಿ ದಾಖಲಾಗಿದೆ.