ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ 2024ರಲ್ಲಿ ವಿವಾಹವಾದರು. ಸದ್ಯ 'ಸತ್ಯವಾನ್ ಸಾವಿತ್ರಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿರುವ ನಟಿ, ಆಂಟನಿ ಅವರೊಂದಿಗಿನ ಸಂಬಂಧದ ಅವಧಿಯಲ್ಲಿ ತಮ್ಮನ್ನು ಇತರ ನಟರೊಂದಿಗೆ ತಳುಕು ಹಾಕಿ ಮಾತನಾಡಿದ್ದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂತಹ ವದಂತಿಗಳು ತಮಗೆ ಆಗಾಗ್ಗೆ ನೋವುಂಟುಮಾಡುತ್ತಿದ್ದವು ಎಂದು ಅವರು ಒಪ್ಪಿಕೊಂಡರು.
'ಎಸ್‌ಎಸ್ ಮ್ಯೂಸಿಕ್' (SS Music) ವಾಹಿನಿಯಲ್ಲಿ, ತಮ್ಮ ಜೀವನದಲ್ಲಿ 'ಅಯ್ಯೋ, ಇದು ನನಗೆ ನೋವುಂಟುಮಾಡಿತು' ಎಂದು ಅನಿಸುವಂತಹ ಸಂದರ್ಭ ಯಾವುದಾದರೂ ಎದುರಾಗಿದೆಯೇ ಎಂದು ಕೇಳಿದಾಗ, 'ನನ್ನ ಬಗ್ಗೆ ಮತ್ತು ಇತರ ನಟರ ಬಗ್ಗೆ ಹರಿದಾಡುವ ಅನಗತ್ಯ ವದಂತಿಗಳು ನನಗೆ ನೋವುಂಟುಮಾಡುತ್ತದೆ; ಏಕೆಂದರೆ, ನನ್ನ ಜೀವನದಲ್ಲಿ ನಾನು ಒಂದೇ ಒಂದು ಸಂಬಂಧದಲ್ಲಿದ್ದೆ ಅಷ್ಟೇ. ಅಂತಹ ಸಂದರ್ಭಗಳಲ್ಲಿ, ನಾನು ಏನಾದರೂ ಪ್ರತಿಕ್ರಿಯಿಸಲು ಬಯಸುತ್ತೇನೆಯೇ ಎಂದು ಆಂಟನಿ ನನ್ನನ್ನು ಕೇಳುತ್ತಿದ್ದರು. ಆದರೆ, ಬೇರೆ ಯಾವುದೇ ವಿಷಯದಲ್ಲಿ ಅವರು ಎಂದಿಗೂ ನನ್ನನ್ನು ಪ್ರಶ್ನಿಸಿಲ್ಲ. ಇನ್ನು, ನಾವಿಬ್ಬರೂ ಈ ಸಂಬಂಧದಲ್ಲಿ ಸಂತೋಷವಾಗಿದ್ದಾಗ, ನಾನು ಯಾರಿಗೇನು ಸಾಬೀತುಪಡಿಸಬೇಕಿದೆ? ಅಯ್ಯೋ, ಖಂಡಿತ ಇಲ್ಲ! ನನಗೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ' ಎಂದು ಕೀರ್ತಿ ಹೇಳಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.
'ಆಂಟನಿ 'ಉತ್ತಮ ವ್ಯಕ್ತಿತ್ವ' ಹೊಂದಿರುವ ಒಬ್ಬ 'ಜಂಟಲ್‌ಮ್ಯಾನ್'. ಅವರು ನನಗೆ ನನ್ನದೇ ಆದ ಸ್ವಾತಂತ್ರ್ಯವನ್ನು (space) ನೀಡುತ್ತಾರೆ. ಹಾಗೆಯೇ, ನಾನೂ ಅವರಿಗೆ ಅವರ ಸ್ವಾತಂತ್ರ್ಯವನ್ನು ನೀಡುತ್ತೇನೆ. ಅವರಿಗೆ ಸಾರ್ವಜನಿಕರ ಗಮನ ಸೆಳೆಯುವಂತಹ ಸನ್ನಿವೇಶಗಳು ಇಷ್ಟವಾಗುವುದಿಲ್ಲ, ಹಾಗಾಗಿ ನಾನು ಅವರನ್ನು ಎಂದಿಗೂ ಮುಜುಗರಕ್ಕೀಡುಮಾಡುವಂತಹ ಪರಿಸ್ಥಿತಿಯಲ್ಲಿ ಇರಿಸುವುದಿಲ್ಲ. ಅವರು ಕೂಡ ನನ್ನ ವಿಷಯದಲ್ಲಿ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತು. ಸದ್ಯಕ್ಕೆ, ನಾನು ಒಂದು ಚಿತ್ರದ ಪ್ರೀಮಿಯರ್‌ಗೆ ಹೋಗುತ್ತಿದ್ದೇನೆ, ಆದರೆ ಅವರು ಅಲ್ಲಿಗೆ ಬರುವುದಿಲ್ಲ. ನನ್ನ ಪಕ್ಕದಲ್ಲಿ ಅವರು ಇರುವುದಕ್ಕಿಂತ, ಅವರಿಗೆ ಯಾವುದು ಆರಾಮದಾಯಕವೋ (comfort) ಅದು ನನಗೆ ಹೆಚ್ಚು ಮುಖ್ಯ' ಎಂದು ಹೇಳಿದರು.
ಇದಕ್ಕೂ ಮೊದಲು, 'ಗಲಾಟಾ' (Galatta) ಜೊತೆಗಿನ ಸಂದರ್ಶನವೊಂದರಲ್ಲಿ ಕೀರ್ತಿ ತಮ್ಮ ಸಂಬಂಧ ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಮಾತನಾಡಿದರು. 'ನಾನು 12ನೇ ತರಗತಿಯಲ್ಲಿದ್ದಾಗ ನಾವು ಡೇಟಿಂಗ್ ಮಾಡಲು ಪ್ರಾರಂಭಿಸಿದೆವು. ಅವರು ನನಗಿಂತ ಏಳು ವರ್ಷ ದೊಡ್ಡವರಾಗಿದ್ದು, ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರು ವರ್ಷಗಳ ಕಾಲ ನಮ್ಮದು long-distance relationship ಆಗಿತ್ತು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮಾತ್ರ ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದೆವು' ಎಂದರು.
'ಅವರು ನನಗೆ 'ಪ್ರಾಮಿಸ್ ರಿಂಗ್' (ಭರವಸೆಯ ಉಂಗುರ) ನೀಡಿದ್ದರು; ಮದುವೆಯಾಗುವವರೆಗೂ ನಾನು ಅದನ್ನು ಎಂದಿಗೂ ಕಳಚಿರಲಿಲ್ಲ. ನನ್ನ ಎಲ್ಲ ಚಿತ್ರಗಳಲ್ಲಿಯೂ ನೀವು ಅದನ್ನು ಗಮನಿಸಬಹುದು' ಎಂದು ಕೀರ್ತಿ ತಿಳಿಸಿದ್ದರು.
ಈ ದಂಪತಿ 2024ರಲ್ಲಿ ದಕ್ಷಿಣ ಭಾರತ ಹಾಗೂ ಕ್ರೈಸ್ತ - ಹೀಗೆ ಎರಡೂ ಪದ್ಧತಿಗಳಲ್ಲಿ ವಿವಾಹವಾದರು.