ಅನಿರುದ್ಧ್ ರವಿಚಂದರ್- ಕಾವ್ಯಾ ಮಾರನ್ ಆರತಕ್ಷತೆಯಲ್ಲಿ ಸಿಎಂ ವಿಜಯ್- ಪತ್ನಿ ಸಂಗೀತಾ 
ಸಿನಿಮಾ ಸುದ್ದಿ

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ; ತ್ರಿಶಾ ಕೃಷ್ಣನ್ ಗೈರು?

ವಿಜಯ್ ಮತ್ತು ಸಂಗೀತಾ ಅವರು 1999ರ ಆಗಸ್ಟ್‌ನಲ್ಲಿ ವಿವಾಹವಾದರು; ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಸಂಗೀತ ಸಂಯೋಜಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಹಾಗೂ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮವು ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಸಿ ಜೋಸೆಫ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಭಾಗವಹಿಸಿದ್ದರು. ಆದರೆ, ಇವರಿಬ್ಬರೂ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಆಗಮಿಸಿದ್ದರು. ಈ ಬಾರಿ ವಿಜಯ್ ಜೊತೆ ನಟಿ ತ್ರಿಶಾ ಕಾಣಿಸಿಕೊಳ್ಳಲಿಲ್ಲ.

ಕಳೆದ ಬಾರಿ ತಮ್ಮ ಪುತ್ರ ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನದ ಚಿತ್ರ ವೀಕ್ಷಣೆಗೆಂದು ಚೆನ್ನೈಗೆ ಆಗಮಿಸಿದ್ದ ಸಂಗೀತಾ, ಅದಾದ ಹಲವು ತಿಂಗಳುಗಳ ನಂತರ ಮತ್ತೆ ಈ ಸಮಾರಂಭದಲ್ಲಿ ಇದೇ ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇದು ಅಲ್ಲಿ ನೆರೆದಿದ್ದವರು ಹಾಗೂ ಛಾಯಾಗ್ರಾಹಕರ ಗಮನ ಸೆಳೆಯಿತು.

ಇತ್ತ, ವಿಜಯ್ ಸಾಂಪ್ರದಾಯಿಕ ಉಡುಪನ್ನು ಧರಿಸಿ ಒಬ್ಬರೇ ಆರತಕ್ಷತೆ ಸಮಾರಂಭಕ್ಕೆ ಆಗಮಿಸಿದರು. ನಟನಿಂದ ರಾಜಕಾರಣಿಯಾಗಿ ಬದಲಾದ ಅವರು, ವೇದಿಕೆಯ ಮೇಲೆ ನವ ದಂಪತಿಗೆ ಶುಭಾಶಯ ಕೋರಿದರು ಮತ್ತು ಅನಿರುದ್ಧ್ ಹಾಗೂ ಕಾವ್ಯ ಅವರೊಂದಿಗೆ ನಿಂತು ಫೋಟೊಗಳಿಗೆ ಪೋಸ್ ನೀಡಿದರು. ಸಂಗೀತಾ ಕೂಡ ಪ್ರತ್ಯೇಕವಾಗಿಯೇ ನವದಂಪತಿ ಜೊತೆಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.

ವಿಜಯ್ ಮತ್ತು ಸಂಗೀತಾ ಅವರು 1999ರ ಆಗಸ್ಟ್‌ನಲ್ಲಿ ವಿವಾಹವಾದರು; ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸಂಗೀತಾ ಅವರು ರಾಜಕೀಯ ಪ್ರಚಾರಗಳು ಮತ್ತು ಚಲನಚಿತ್ರ ಸಂಬಂಧಿತ ಕಾರ್ಯಕ್ರಮಗಳಿಂದ ಬಹುತೇಕ ದೂರವೇ ಉಳಿದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸಂಗೀತಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ, ವಿಜಯ್ ಅವರು ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು. ತಮ್ಮ ವಿರೋಧದ ನಡುವೆಯೂ ವಿಜಯ್ ಈ ಸಂಬಂಧವನ್ನು ಮುಂದುವರಿಸಿದ್ದರಿಂದ ತಮಗೆ ಮಾನಸಿಕ ವೇದನೆಯುಂಟಾಯಿತು ಎಂದೂ ಅವರು ದೂರಿದ್ದರು.

ನ್ಯಾಯಾಲಯದಲ್ಲಿ ಕೆಲವು ವಿಚಾರಣೆಗಳು ನಡೆದ ನಂತರ, ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದರು. ಜೇಸನ್ ಸಂಜಯ್ ಅವರ 'ಸಿಗ್ಮಾ' (Sigma) ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ತಮ್ಮ ಮಕ್ಕಳೊಂದಿಗೆ ಕಾಣಿಸಿಕೊಂಡ ನಂತರ, ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡ ಎರಡನೇ ಸಂದರ್ಭ ಇದಾಗಿದೆ.

ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದ ನಂತರ ಅನಿರುದ್ಧ್ ಮತ್ತು ಕಾವ್ಯಾ ಅವರ ಆರತಕ್ಷತೆ ಚೆನ್ನೈನಲ್ಲಿ ನಡೆಯಿತು. ಮದುವೆಯಲ್ಲಿ ಕುಟುಂಬದ ಆಪ್ತರು ಮತ್ತು ಆಯ್ದ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಐಟಿಸಿ ಗ್ರ್ಯಾಂಡ್ ಚೋಳದಲ್ಲಿ ನಡೆದ ಈ ಆರತಕ್ಷತೆ ಸಂಭ್ರಮಾಚರಣೆಯಲ್ಲಿ ನಟ ಸಿದ್ಧಾರ್ಥ್, ಅದಿತಿ ರಾವ್ ಹೈದರಿ, ಕೇನ್ ವಿಲಿಯಮ್ಸನ್, ಡೇಲ್ ಸ್ಟೇನ್ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸೇರಿದಂತೆ ಭಾರತೀಯ ಸಿನಿಮಾ, ಕ್ರೀಡೆ ಮತ್ತು ರಾಜಕೀಯದ ಪ್ರಮುಖ ವ್ಯಕ್ತಿಗಳು ಒಟ್ಟುಗೂಡಿದರು.

ಅನಿರುದ್ಧ್ ಮತ್ತು ಕಾವ್ಯಾ ತಮ್ಮ ಮದುವೆಗೆ ಮೊದಲು ತಮ್ಮ ಸಂಬಂಧವನ್ನು ಹೆಚ್ಚಾಗಿ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಆದರೂ, ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯಗಳು ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಸಾಂದರ್ಭಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದು ಊಹಾಪೋಹಗಳಿಗೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ನಾನಲ್ಲ: ವಿಜಯೇಂದ್ರಗೆ ಜನಾರ್ದನ ರೆಡ್ಡಿ ಪರೋಕ್ಷ ಟಾಂಗ್!

ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಚೆನ್ನೈ: ದೇಶದಲ್ಲೇ ಅತ್ಯಂತ ಕಲುಷಿತ ನಗರವಾದ ಗುಮ್ಮಿಡಿಪೂಂಡಿ; ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ಏರಿಕೆ..!

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ