ಸಿಂಗೀತಂ ಶ್ರೀನಿವಾಸ್ 
ಸಿನಿಮಾ ಸುದ್ದಿ

'ಹಾಲು ಜೇನು- ದೇವತಾ ಮನುಷ್ಯ' ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಿಧನ

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು, ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡಿ ಸೈ ಅನಿಸಿಕೊಂಡಿದ್ದ ನಿರ್ದೇಶಕರಾಗಿದ್ದರು.

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್(94) ನಿಧನ ಹೊಂದಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಯಲ್ಲಿಯೂ ಅವರು ಸಿನಿಮಾ ನಿರ್ದೇಶಿಸಿದ್ದರು. 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನಂದಿ ಪ್ರಶಸ್ತಿ ಮತ್ತು ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು, ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡಿ ಸೈ ಅನಿಸಿಕೊಂಡಿದ್ದ ನಿರ್ದೇಶಕರಾಗಿದ್ದರು.

ಆನಂದ್ ಸಿನಿಮಾ ಮೂಲಕ ಶಿವರಾಜ್​ಕುಮಾರ್​ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ತಮ್ಮ 95ನೇ ವಯಸಿನಲ್ಲೂ ಗೀತo ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಮೂಖಿ, ಪುಷ್ಕಕ ವಿಮಾನಮ್, ಶಿವಣ್ಣ ಅಭಿನಯದ ಆನಂದ್, ಆದಿತ್ಯ 369, ಬೈರವ ದ್ವೀಪಮ್ ಸೇರಿದಂತೆ ಹಲವು ಇವರ ನಿರ್ದೇಶನದ ಪ್ರಮುಖ ಸಿನಿಮಾಗಳಾಗಿವೆ.

ಸಿಂಗೀತಂ ಶ್ರೀನಿವಾಸ ರಾವ್ ಅವರು ಡಾ.ರಾಜ್​ಕುಮಾರ್ ಅವರ ಹಲವು ಸಿನಿಮಾಗಳಿಗೂ ಆ್ಯಕ್ಷನ್​​ ಕಟ್​​ ಹೇಳಿದ್ದರು. ಚಲಿಸುವ ಮೋಡಗಳು, ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, 2 ನಕ್ಷತ್ರಗಳು, ಶ್ರಾವಣ ಬಂತು, ಶ್ರುತಿ ಸೇರಿದಾಗ ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ರಾಘವೇಂದ್ರ ರಾಜ್​ಕುಮಾರ್​​ ಅವರ ‘ಚಿರಂಜೀವಿ ಸುಧಾಕರ್’ ಸೇರಿ ಜಗ್ಗೇಶ್​​ ಅಭಿನಯದ ‘ಮೇಕಪ್’ ಸಿನಿಮಾಗೂ ಕೂಡ ಇವರದ್ದೇ ನಿರ್ದೇಶನವಾಗಿತ್ತು.1988ರಲ್ಲಿ ಸಂಭಾಷಣೆ ರಹಿತ ಪುಷ್ಪಕ ವಿಮಾನ ಸಿನಿಮಾ ನಿರ್ದೇಶಿಸಿಯೂ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು

ಕನ್ನಡದ ‘ಹಾಲು ಜೇನು’, ‘ದೇವತಾ ಮನುಷ್ಯ’, ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಸೇರಿ 60ಕ್ಕೂ ಅಧಿಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನದಿಂದ, ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಸಿಂಗೀತಂ ಶ್ರೀನಿವಾಸ ರಾವ್ ಅವರು ಹಲವು ಹಿಟ್​​ ಸಿನಿಮಾ ಚಿತ್ರಗಳನ್ನ ನೀಡಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಮಾಡಿದ್ರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ