ಪ್ರೇಮದ ಊರಲಿ ಚಿತ್ರ 
ಸಿನಿಮಾ ಸುದ್ದಿ

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಪ್ರೇಮದ ಊರಲಿ' ಶೀಘ್ರದಲ್ಲೇ ಒಟಿಟಿ ಮತ್ತು ಟಿವಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ ಪ್ರತಿ ದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿದೆ.

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಪ್ರೇಮದ ಊರಲಿ' ಶೀಘ್ರದಲ್ಲೇ ಒಟಿಟಿ ಮತ್ತು ಟಿವಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಸ್ಥಳೀಯ ಒಟಿಟಿ ಸಂಸ್ಥೆಯೊಂದು ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿಸಿದೆ ಎಂದು ಸಹ ವದಂತಿ ಹರಡಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ‘ಪ್ರೇಮದ ಊರಲಿ ಚಿತ್ರದ ಟಿವಿ ಹಾಗೂ ಒಟಿಟಿ ಪ್ರಸಾರ ಹಕ್ಕುಗಳ ಕುರಿತು ಅಧಿಕೃತ ಸ್ಪಷ್ಟನೆ. ಪ್ರೇಕ್ಷಕರ ಅಪಾರ ಪ್ರೀತಿ, ಅಭಿಮಾನ ಹಾಗೂ ಬೆಂಬಲದೊಂದಿಗೆ ಪ್ರೇಮದ ಊರಲಿ ಚಿತ್ರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಡಿಜಿಟಲ್(ಒಟಿಟಿ) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರ ಹಕ್ಕುಗಳ ಕುರಿತು ಚಿತ್ರತಂಡದಿಂದ ಒಂದು ಮಹತ್ವದ ಸ್ಪಷ್ಟನೆ ನೀಡಲು ಬಯಸುತ್ತೇವೆ’ ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.

‘ನಮ್ಮ ಮೊದಲ ಆದ್ಯತೆ ಚಿತ್ರಮಂದಿರಗಳೇ. ಪ್ರೇಕ್ಷಕರು ಪ್ರೇಮದ ಊರಲಿ ಚಿತ್ರವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿ, ಅದರ ಪ್ರೀತಿ, ಭಾವನೆ ಹಾಗೂ ಅನುಭವವನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು ಎಂಬುದೇ ನಮ್ಮ ಆಶಯ. ಪ್ರೇಮದ ಊರಲಿ ಚಿತ್ರದ ಒಟಿಟಿ ಅಥವಾ ಟಿವಿ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಂಸ್ಥೆ ಅಥವಾ ವೇದಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಹಾಗೂ ಯಾವುದೇ ರೀತಿಯ ಅಧಿಕೃತ ಬದ್ಧತೆಯನ್ನೂ ನೀಡಿಲ್ಲ’.

‘ಸದ್ಯಕ್ಕೆ ಚಿತ್ರದ ಒಟಿಟಿ ಅಥವಾ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಯಾವುದೇ ಅಧಿಕೃತ ಮಾಹಿತಿ ಇದ್ದಲ್ಲಿ ಅದನ್ನು ಚಿತ್ರತಂಡವೇ ನೇರವಾಗಿ ಪ್ರಕಟಿಸಲಿದೆ. ಪ್ರೇಮದ ಊರಲಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ, ಪ್ರೀತಿಸಿ, ಬೆಂಬಲಿಸುತ್ತಿರುವ ಪ್ರತಿಯೊಬ್ಬ ಪ್ರೇಕ್ಷಕರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮ್ಮ ಚಿತ್ರದ ನಿಜವಾದ ಗೆಲುವು’ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ