ಕಾವ್ಯಾ ಹಾಗೂ ಕುಮಾರಿ 
ಸಿನಿಮಾ ಸುದ್ದಿ

ನಿಮಗೆ ತಲೆ ಇಲ್ಲ, ಮೆದುಳಿಲ್ಲ: ಕಾವ್ಯಾಗೆ ಚಾಟಿ ಬೀಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ, ದೊಡ್ಮನೆಯಲ್ಲಿ ಹೈಡ್ರಾಮಾ..!

ಕಳಪೆ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಕಾವ್ಯ ಅವರನ್ನೇ ಗುರಿಯಾಗಿಸಿಕೊಂಡ ಕುಮಾರಿ, ಮೊದಲ ವಾರದಿಂದಲೂ ಮನೆಯಲ್ಲಿದ್ದರೂ ಆಟದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯ, ವಾಗ್ವಾದ ಹಾಗೂ ಜಗಳಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.

ಇತ್ತೀಚಿನ ಸಂಚಿಕೆಯಲ್ಲಿ ನಡೆದ ಕಳಪೆ ಆಯ್ಕೆ ಪ್ರಕ್ರಿಯೆ ಮತ್ತು ಟಾಸ್ಕ್‌ನಲ್ಲಿನ ವೈಫಲ್ಯ ಮನೆಯೊಳಗೆ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಅದರಲ್ಲೂ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಕುಮಾರಿ, ಕಾವ್ಯ ಅವರ ಆಟದ ವೈಖರಿಯನ್ನು ನೇರವಾಗಿ ಪ್ರಶ್ನಿಸಿ ಕಳಪೆ ಪಟ್ಟ ನೀಡಿದ್ದಾರೆ.

ಕಳಪೆ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಕಾವ್ಯ ಅವರನ್ನೇ ಗುರಿಯಾಗಿಸಿಕೊಂಡ ಕುಮಾರಿ, ಮೊದಲ ವಾರದಿಂದಲೂ ಮನೆಯಲ್ಲಿದ್ದರೂ ಆಟದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ನಿಮಗೆ ಮನಬಂದಂತೆ ನಿಯಮಗಳನ್ನು ಬದಲಾಯಿಸದೆ ಆಟವಾಡಬೇಕು ಎಂಬ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ. ನಿಮ್ಮಲ್ಲಿ ಮಾತು ಮಾತ್ರ ಹೆಚ್ಚಾಗಿದೆ. ಆದರೆ, ಆಟದಲ್ಲಿ ಯಾವುದೇ ಶ್ರಮ ಅಥವಾ ಉತ್ತಮ ಪ್ರದರ್ಶನ ಕಾಣಿಸುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

ಕುಮಾರಿಯ ನೇರ ಆರೋಪದಿಂದ ಅಸಮಾಧಾನಗೊಂಡ ಕಾವ್ಯ, “ನಾನು ಈ ಮನೆಯಲ್ಲಿ ಹೇಗಿರಬೇಕು ಎಂದು ನೀವು ಹೇಳಿಕೊಡುವ ಅಗತ್ಯವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಿ, ಕಾವ್ಯ ಅವರ ಆಟದಲ್ಲಿ ಬುದ್ಧಿವಂತಿಕೆಯಾಗಲಿ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಾಗಲಿ ಕಾಣಿಸುತ್ತಿಲ್ಲ ಎಂದು ಮತ್ತಷ್ಟು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಹೊಸದಾಗಿ ಬಂದ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಹಳೆಯ ಸ್ಪರ್ಧಿಯೊಬ್ಬರಿಗೆ ಈ ಮಟ್ಟಿಗೆ ನೇರವಾಗಿ ಮಾತಿನ ಬಾಣ ಬಿಟ್ಟಿರುವುದನ್ನು ನೋಡಿ ಇಡೀ ದೊಡ್ಮನೆಯ ಸದಸ್ಯರು ಒಂದು ಕ್ಷಣ ದಂಗಾಗಿದ್ದಾರೆ.

ಈ ವಾಗ್ವಾದಕ್ಕೆ ‘ಪಜಲ್ ಪೈಪೋಟಿ’ ಟಾಸ್ಕ್‌ನ ವೈಫಲ್ಯವೂ ಪ್ರಮುಖ ಕಾರಣವಾಗಿದೆ. ಈ ಟಾಸ್ಕ್‌ನ ಉಸ್ತುವಾರಿಯನ್ನು ಕಾವ್ಯ ಮತ್ತು ಗಾನವಿ ವಹಿಸಿಕೊಂಡಿದ್ದರು. ಆದರೆ, ಆಟ ಆರಂಭವಾದ ಬಳಿಕ ಸ್ಪರ್ಧಿಗಳು ಹಾಗೂ ಉಸ್ತುವಾರಿಗಳು ತಮಗೆ ಅನುಕೂಲವಾಗುವಂತೆ ನಿಯಮಗಳನ್ನು ಬದಲಾಯಿಸಿಕೊಂಡು ಆಟವಾಡಿದ್ದರು, ಇದರಿಂದ ಅಸಮಾಧಾನಗೊಂಡ ಬಿಗ್ ಬಾಸ್, ಇಡೀ ಟಾಸ್ಕ್ ಅನ್ನೇ ರದ್ದುಗೊಳಿಸಿದ್ದರು. ಇದರ ಪರಿಣಾಮವಾಗಿ ನಾಲ್ವರು ಸ್ಪರ್ಧಿಗಳು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗುಳಿಯುವಂತಾಯಿತು.

ಮನೆಯೊಳಗಿನ ಕಳಪೆ ಪಟ್ಟದ ವಿಚಾರ ಕೇವಲ ಕುಮಾರಿ ಮತ್ತು ಕಾವ್ಯ ನಡುವಿನ ಸಂಘರ್ಷಕ್ಕೆ ಸೀಮಿತವಾಗಿಲ್ಲ. ಇತರ ಸ್ಪರ್ಧಿಗಳ ನಡುವೆಯೂ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುವಂತೆ ಮಾಡಿದೆ.

ತಾಂಡವ್ ರಾಮ್ ಅವರು ಕಿರಣ್‌ಗೆ ಕಳಪೆ ಪಟ್ಟ ನೀಡಿದರೆ, ಯಶಸ್ ಕೂಡ ಕಿರಣ್ ಅವರನ್ನೇ ಗುರಿಯಾಗಿಸಿಕೊಂಡು, “ಮಾತುಮಾತಿಗೂ ಸುಳ್ಳು ಹೇಳುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು