ನಟಿ ಅನುಪಮಾ ಪರಮೇಶ್ವರನ್ 
ಸಿನಿಮಾ ಸುದ್ದಿ

'narcissistic ಕಿರುಕುಳದಿಂದ ನಟನೆಗೇ ವಿದಾಯ ಹೇಳಲು ಮುಂದಾಗಿದ್ದೆ, ಬದುಕುಳಿಯುವುದೇ ಸವಾಲಾಗಿತ್ತು': ಕರಾಳ ದಿನಗಳ ನೆನೆದ ನಟಿ ಅನುಪಮಾ ಪರಮೇಶ್ವರನ್‌-Video

‘ಸ್ಕ್ರೀನ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನುಪಮಾ, ಆ ಸಮಯದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಪ್ರತಿದಿನ ಜೀವನವನ್ನು ಆನಂದಿಸುವ ಬದಲು, ದಿನವನ್ನು ಹೇಗಾದರೂ ದಾಟಿಸುವುದೇ ದೊಡ್ಡ..

ಬೆಂಗಳೂರು: ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ಅನುಪಮಾ ಪರಮೇಶ್ವರನ್‌ ತಮ್ಮ ಜೀವನದ ಕಠಿಣ ಹಂತದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಾರ್ಸಿಸಿಸ್ಟಿಕ್‌ ಕಿರುಕುಳದಿಂದ (Narcissistic Abuse) ತಮ್ಮ ಮಾನಸಿಕ ಆರೋಗ್ಯ, ಆತ್ಮವಿಶ್ವಾಸ ಮತ್ತು ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಒಂದು ಹಂತದಲ್ಲಿ ನಟನೆಯನ್ನೇ ತೊರೆಯುವ ಯೋಚನೆ ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

‘ಸ್ಕ್ರೀನ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನುಪಮಾ, ಆ ಸಮಯದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಪ್ರತಿದಿನ ಜೀವನವನ್ನು ಆನಂದಿಸುವ ಬದಲು, ದಿನವನ್ನು ಹೇಗಾದರೂ ದಾಟಿಸುವುದೇ ದೊಡ್ಡ ಸವಾಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

‘ಕನ್ನಡಿಯಲ್ಲಿ ನೋಡಿದರೂ ನನ್ನ ಮುಖ ಕಾಣುತ್ತಿರಲಿಲ್ಲ’

ತಮ್ಮ ಮಾನಸಿಕ ಸ್ಥಿತಿಯನ್ನು ವಿವರಿಸಿದ ಅನುಪಮಾ, ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದೂ ವಿಚಿತ್ರ ಅನುಭವವಾಗಿತ್ತು ಎಂದು ಹೇಳಿದ್ದಾರೆ.

“ನೀವು ಕನ್ನಡಿಯಲ್ಲಿ ನೋಡಿದಾಗ ನಿಮಗೆ ನೀವೇ ಕಾಣಿಸುವುದಿಲ್ಲ. ನಿಮ್ಮನ್ನೂ ಮೀರಿ ಬೇರೇನೋ ಕಾಣಿಸುತ್ತದೆ. ಕನ್ನಡಿಯಲ್ಲಿ ನಿಮ್ಮ ಮುಖವನ್ನೇ ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಪ್ರತಿದಿನ ನಾನು ಮೇಕಪ್‌ ಮಾಡಿಕೊಳ್ಳುತ್ತೇನೆ. ಆಗ ನನ್ನ ಮುಖವನ್ನೇ ನೋಡುತ್ತಿದ್ದೇನೆಯೇ ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ನನ್ನ ಮುಖವನ್ನೇ ನೋಡುತ್ತಿದ್ದೇನೆಯೇ? ಇಲ್ಲ” ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆ ಅವಧಿಯಲ್ಲಿ ಜೀವನವನ್ನು ಪೂರ್ಣವಾಗಿ ಬದುಕುವುದಕ್ಕಿಂತ ದಿನವನ್ನು ಹೇಗಾದರೂ ಮುಗಿಸುವುದರಲ್ಲೇ ತಮ್ಮ ಶಕ್ತಿ ವ್ಯಯವಾಗುತ್ತಿತ್ತು ಎಂದು ಹೇಳಿದ್ದಾರೆ.

“ಪ್ರತಿದಿನವೂ ಬದುಕುಳಿಯುವ ಸ್ಥಿತಿಯಲ್ಲಿರುತ್ತಿದ್ದೆ. ಜೀವನವನ್ನು ಬದುಕುವುದೇ ಇರಲಿಲ್ಲ. ದಿನವನ್ನು ಹೇಗಾದರೂ ದಾಟಿಸುವುದಷ್ಟೇ ಆಗಿತ್ತು. ದಿನದ ಕೊನೆಯಲ್ಲಿ, ‘ಅಬ್ಬಾ, ಇವತ್ತಿನ ದಿನವನ್ನಾದರೂ ದಾಟಿದೆ’ ಎಂದು ನಿಟ್ಟುಸಿರು ಬಿಡುತ್ತಿದ್ದೆ. ನಂತರ ಮಲಗುವಾಗ ನಾಳೆ ಯಾವ ದುಃಸ್ವಪ್ನ ಎದುರಾಗುತ್ತದೆಯೋ ಎಂದು ಯೋಚಿಸುತ್ತಿದ್ದೆ. ಜೀವನ ನಡೆಸುವುದೇ ತುಂಬಾ ಆಯಾಸದ ಕೆಲಸವಾಗಿತ್ತು” ಎಂದು ಅನುಪಮಾ ಹೇಳಿದ್ದಾರೆ.

‘ಆ ಸಮಯದಲ್ಲಿ ನಟಿಸಿದ್ದ ಚಿತ್ರಗಳಲ್ಲಿ ಶೇ.50ರಷ್ಟು ಉತ್ತಮವಾಗಿ ನಟಿಸಬಹುದಿತ್ತು’

ಮಾನಸಿಕ ಒತ್ತಡ ತಮ್ಮ ನಟನೆಯ ಮೇಲೂ ಪರಿಣಾಮ ಬೀರಿತ್ತು ಎಂದು ಅನುಪಮಾ ತಿಳಿಸಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದೆ. ಆದರೆ ಆ ಸಮಯದಲ್ಲಿ ನಟಿಸಿದ ಚಿತ್ರಗಳನ್ನು ಮತ್ತೊಮ್ಮೆ ಮಾಡುವ ಅವಕಾಶ ಸಿಕ್ಕರೆ ಇನ್ನೂ ಉತ್ತಮವಾಗಿ ನಟಿಸಬಹುದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕ್ರೇಜಿ ಕಲ್ಯಾಣಂ ಬಗ್ಗೆ ಅನುಪಮ ಮಾತು

ತಮ್ಮ ಮುಂಬರುವ ತೆಲುಗು ಕೌಟುಂಬಿಕ ಮನರಂಜನಾ ಚಿತ್ರ ‘ಕ್ರೇಜಿ ಕಲ್ಯಾಣಂ’ ಕುರಿತು ಮಾತನಾಡಿದ ಅವರು, “ನಾನು ‘ಕ್ರೇಜಿ ಕಲ್ಯಾಣಂ’ ಅಥವಾ ಆ ಅವಧಿಯಲ್ಲಿ ಚಿತ್ರೀಕರಿಸಿದ ಯಾವುದೇ ಚಿತ್ರವನ್ನು ಮತ್ತೆ ಮಾಡಬೇಕೆಂದರೆ, ಈಗ ಮಾಡಿದ್ದಕ್ಕಿಂತ ಕನಿಷ್ಠ ಶೇ.50ರಷ್ಟು ಉತ್ತಮವಾಗಿ ನಟಿಸುತ್ತಿದ್ದೆ” ಎಂದಿದ್ದಾರೆ.

ಆದರೆ, ಅಷ್ಟೊಂದು ಕಷ್ಟದ ನಡುವೆಯೂ ಕೆಲಸ ಮುಂದುವರಿಸಿದ್ದಕ್ಕೆ ತಮ್ಮನ್ನು ತಾವೇ ಶ್ಲಾಘಿಸಿಕೊಂಡಿದ್ದಾರೆ. “ನಾನು ನಟನೆಯನ್ನು ಬಿಡುವ ಹಂತಕ್ಕೆ ತಲುಪಿದ್ದೆ. ಆದರೆ ಹಾಗೆ ಮಾಡಲಿಲ್ಲ. ಅದಕ್ಕಾಗಿ ನನಗೆ ನಾನೇ ಕ್ರೆಡಿಟ್‌ ನೀಡಲು ಬಯಸುತ್ತೇನೆ. ಕೆಲವೊಮ್ಮೆ ಕೆಲಸಕ್ಕೆ ಹಾಜರಾಗುವುದೇ ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ.

“ನಾನು ಆ ಸಮಯದಲ್ಲಿ ಅನುಭವಿಸಿದ ಕಷ್ಟಕ್ಕಾಗಿ ನನ್ನನ್ನೇ ದೂಷಿಸಿಕೊಳ್ಳುವುದಿಲ್ಲ. ಅಷ್ಟೊಂದು ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಧೈರ್ಯವಾಗಿ ಎದ್ದು, ಕೆಲಸಕ್ಕೆ ಹಾಜರಾಗಿ, ನನ್ನಿಂದ ಸಾಧ್ಯವಾದದ್ದನ್ನು ಮಾಡಿದ್ದೇನೆ” ಎಂದು ಅನುಪಮಾ ತಿಳಿಸಿದ್ದಾರೆ.

ತಮ್ಮ ಅನುಭವ ಹಂಚಿಕೊಂಡಿದ್ದರಿಂದ ಹಲವರಿಗೆ ನೆರವು

ನಾರ್ಸಿಸಿಸ್ಟಿಕ್‌ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಳಿಕ ಜನರಿಂದ ಬಂದ ಪ್ರತಿಕ್ರಿಯೆಗಳ ಬಗ್ಗೆಯೂ ಅನುಪಮಾ ವಿವರಿಸಿದ್ದಾರೆ. ತಮಗೆ ಇನ್ನಷ್ಟು ಟೀಕೆ ಎದುರಾಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ತಮ್ಮ ಬಳಿ ಬಂದು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡವರನ್ನು ಕಂಡು ಭಾವುಕಳಾದೆ ಎಂದು ಹೇಳಿದ್ದಾರೆ.

“ನನ್ನನ್ನು ನಿರೀಕ್ಷಿಸಿದಷ್ಟು ಜನರು ಟೀಕಿಸಲಿಲ್ಲ. ಜಗತ್ತಿನ ಶೇ.90ರಷ್ಟು ಜನರು ನನ್ನನ್ನು ಟೀಕಿಸುತ್ತಾರೆ ಎಂದುಕೊಂಡಿದ್ದೆ. ಹಾಗಾಗಿದ್ದರೂ ನನಗೆ ಆಶ್ಚರ್ಯವಾಗುತ್ತಿರಲಿಲ್ಲ. ಕೆಲವೇ ದಿನಗಳ ಹಿಂದೆ ಚಿತ್ರೀಕರಣದ ವೇಳೆ ಇಬ್ಬರು ಯುವತಿಯರು ನನ್ನ ಬಳಿ ಬಂದು ತಬ್ಬಿಕೊಂಡು ಅಳಲು ಪ್ರಾರಂಭಿಸಿದರು.

ಅವರು ನನ್ನನ್ನು ತಮ್ಮ ಅಕ್ಕನಂತೆ ನೋಡುತ್ತಾರೆ. ಇಂತಹ ಘಟನೆಗಳು ತಮ್ಮ ಮನಸ್ಸಿಗೆ ನೋವುಂಟುಮಾಡುತ್ತವೆ. ಅಂಥವರನ್ನು ಭೇಟಿಯಾದಾಗ ನನಗೆ ಸಂತೋಷವಾಗುವುದಿಲ್ಲ; ಬದಲಿಗೆ ತುಂಬಾ ದುಃಖವಾಗುತ್ತದೆ. ಅವರು ಅನುಭವಿಸುತ್ತಿರುವ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದಿದ್ದಾರೆ.

ತಮ್ಮ ಅನುಭವದ ಬಗ್ಗೆ ಮಾತನಾಡಿರುವುದರಿಂದ ದಕ್ಷಿಣ ಭಾರತದ ಅನೇಕ ಜನರಿಗೆ ನಾರ್ಸಿಸಿಸ್ಟಿಕ್‌ ಕಿರುಕುಳದ ಬಗ್ಗೆ ಅರಿವು ಮೂಡಿದೆ. ತಮ್ಮ ಸಂಬಂಧಗಳಲ್ಲಿಯೂ ಇಂತಹ ವರ್ತನೆಯ ಮಾದರಿಗಳನ್ನು ಗುರುತಿಸಲು ಕೆಲವರಿಗೆ ಸಹಾಯವಾಗಿದೆ.

ಪುರುಷರೂ ತಮ್ಮ ಅಥವಾ ತಮ್ಮ ಆಪ್ತರ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನಾನು ಈ ಅನುಭವ ಎದುರಿಸುವ ಮೊದಲು ನಾರ್ಸಿಸಿಸ್ಟಿಕ್‌ ಅಬ್ಯೂಸ್‌ ಎಂಬುದರ ಬಗ್ಗೆ ನನಗೂ ತಿಳಿದಿರಲಿಲ್ಲ. ಈಗ ದಕ್ಷಿಣ ಭಾರತದ ಅನೇಕ ಜನರಿಗೆ ಇದರ ಬಗ್ಗೆ ತಿಳಿದಿದೆ. ನನ್ನ ಅನುಭವ ಹಂಚಿಕೊಳ್ಳುವುದರಿಂದ ಹಲವರಿಗೆ ಸಹಾಯವಾಗುತ್ತಿದ್ದರೆ, ಇನ್ನಷ್ಟು ಟೀಕೆಗಳನ್ನು ಎದುರಿಸಲೂ ನಾನು ಸಿದ್ಧ” ಎಂದು ಅನುಪಮಾ ಹೇಳಿದ್ದಾರೆ.

ಥೆರಪಿ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನ

ಮಾನಸಿಕವಾಗಿ ಚೇತರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಅನುಪಮಾ ಥೆರಪಿಯ ಮೊರೆ ಹೋಗಿದ್ದರು. ಆರಂಭದಲ್ಲಿ ಎರಡು ಬಾರಿ ಥೆರಪಿ ಪ್ರಯತ್ನಿಸಿದರೂ ತಮಗೆ ಸೂಕ್ತವಾದ ಚಿಕಿತ್ಸಕಿಯನ್ನು ಕಂಡುಕೊಳ್ಳಲು ಸಮಯ ಹಿಡಿಯಿತು ಎಂದು ಅವರು ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಸೂಕ್ತವಾಗುವ ಬೆಂಬಲ ಮತ್ತು ಚಿಕಿತ್ಸೆಯ ವಿಧಾನ ವಿಭಿನ್ನವಾಗಿರಬಹುದು ಎಂಬುದನ್ನು ತಮ್ಮ ಅನುಭವದ ಮೂಲಕ ವಿವರಿಸಿದ್ದಾರೆ.

ಧ್ರುವ್‌ ವಿಕ್ರಮ್‌ ಜೊತೆಗಿನ ಸಂಬಂಧದ ವದಂತಿ

2025ರ ಆರಂಭದಲ್ಲಿ ‘ಬೈಸನ್‌ ಕಾಲಮಾಡನ್‌’ ಚಿತ್ರದ ಚಿತ್ರೀಕರಣದ ವೇಳೆ ಅನುಪಮಾ ಪರಮೇಶ್ವರನ್‌ ಮತ್ತು ನಟ ಧ್ರುವ್‌ ವಿಕ್ರಮ್‌ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ತಾವು ಸಂಬಂಧದಲ್ಲಿದ್ದೆವು ಅಥವಾ ಬಳಿಕ ಬೇರೆಯಾಗಿದ್ದೇವೆ ಎಂದು ಇಬ್ಬರೂ ಸಾರ್ವಜನಿಕವಾಗಿ ದೃಢಪಡಿಸಿಲ್ಲ.

‘ಕ್ರೇಜಿ ಕಲ್ಯಾಣಂ’ ಚಿತ್ರದಲ್ಲಿ ಅನುಪಮಾ

ಅನುಪಮಾ ಕೊನೆಯದಾಗಿ ‘ಲಾಕ್‌ಡೌನ್‌’ ಮತ್ತು ‘ಮರೀಚಿಕಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ತೆಲುಗಿನ ‘ಕ್ರೇಜಿ ಕಲ್ಯಾಣಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಬದ್ರಪ್ಪ ಗಜುಲಾ ನಿರ್ದೇಶಕರಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅನುಪಮಾ ಮತ್ತು ಅಖಿಲ್‌ ರಾಜ್‌ ಉದ್ದೇಮರಿ ಜೊತೆಗೆ ಡಾ. ನರೇಶ್‌ ವಿಜಯಕೃಷ್ಣ ಹಾಗೂ ತರುಣ್‌ ಭಾಸ್ಕರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ ವೇಳೆ ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ..!

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

'ಬಾಷಾ’, ‘ಅಣ್ಣಾಮಲೈ’ ಸೇರಿ ಹಲವು ಹಿಟ್‌ ಚಿತ್ರಗಳಿಗೆ ಸಂಗೀತ ನೀಡಿದ್ದ ದೇವಾ ನಿಧನ

ಬಾಲಿವುಡ್ ನಟ ಅಜಯ್ ದೇವಗನ್`ಗೆ BMC ಶಾಕ್: ಜುಹು ಬಂಗಲೆ ಅಕ್ರಮ ಒತ್ತುವರಿ ತೆರವು!