'ಯಾರಿಗೆ ಯಾವ ಸಿನಿಮಾ ಮಾಡಬೇಕು ಅಂತ ನಮಗೆ ಗೊತ್ತು..': ಕಾಂಡೋಮ್ ಆ್ಯಡ್ ಎಂದವರಿಗೆ ನಟ ಯಶ್‌ ತಿರುಗೇಟು!

ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಟ್ರೈಲರ್‌ ಲಾಂಚ್‌ ಈವೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಿನಿಮಾ ಜಗತ್ತನ್ನ ಸವಾಲು ಮಾಡಬೇಕಾದರೆ, ಪ್ರೇಕ್ಷಕರ ಬೆಂಬಲ..
Yash Gives a Strong Reply to Critics Questioning His Film Choices
ರಾಮಾಯಣ ಈವೆಂಟ್ ನಲ್ಲಿ ನಟ ಯಶ್
Updated on: 

ಬೆಂಗಳೂರು: ಟಾಕ್ಸಿಕ್ ಚಿತ್ರವನ್ನು ಕಾಂಡೋಮ್ ಜಾಹಿರಾತಿಗೆ ಹೋಲಿಕೆ ಮಾಡಿದ್ದ ಟೀಕಾಕರಿಗೆ ಬಟ್ಟೆ ಸುತ್ತಿ ಹೊಡೆದಿರುವ ನಟ ಯಶ್, ತಮ್ಮ 'ರಾಮಾಯಣ ಚಿತ್ರ 'ಕುಟುಂಬ ಸಮೇತ ಮಕ್ಕಳೊಂದಿಗೆ ನೋಡುವ ಚಿತ್ರ' ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಟ್ರೈಲರ್‌ ಲಾಂಚ್‌ ಈವೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಿನಿಮಾ ಜಗತ್ತನ್ನ ಸವಾಲು ಮಾಡಬೇಕಾದರೆ, ಪ್ರೇಕ್ಷಕರ ಬೆಂಬಲ ಮತ್ತು ಏಕತೆ ಅತ್ಯಗತ್ಯ ಎಂದು ಹೇಳಿದರು.

ಭಾರತೀಯ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಭೇದಭಾವಗಳನ್ನ ಮರೆತು, ಒಳ್ಳೆಯ ಸಿನಿಮಾಗಳನ್ನ ಒಟ್ಟಾಗಿ ಬೆಂಬಲಿಸಬೇಕು ಎಂಬ ಮಹತ್ವದ ಸಂದೇಶವನ್ನು ರಾಕಿಂಗ್ ಸ್ಟಾರ್ ಯಶ್ ನೀಡಿದರು.

Yash Gives a Strong Reply to Critics Questioning His Film Choices
Video: 'ಪ್ರೇಮದ ಊರಲಿ' ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದೆ, ಅವರ ಕಣ್ಣಲ್ಲಿ...! ರಾಕಿಂಗ್‌ ಸ್ಟಾರ್‌ ಯಶ್ ಹೇಳಿದ್ದೇನು?
Yash Gives a Strong Reply to Critics Questioning His Film Choices
'Toxic' ಟ್ರೋಲಿಗರಿಗೆ ಯಶ್ ತಿರುಗೇಟು: ಕಾಂಡೋಮ್ ಜಾಹಿರಾತು ಮಾಡೋದಿದ್ರೆ ದುಡ್ಡು ತಗೊಂಡೇ ಮಾಡ್ತೀನಿ, ಉಚಿತವಾಗಲ್ಲ!

ಯಾರಿಗೆ ಯಾವ ಸಿನಿಮಾ ಮಾಡಬೇಕು ಅಂತ ನಮಗೆ ಗೊತ್ತು

ಇದೇ ವೇಳೆ “ಎಂಟೈರ್‌ ಕನ್ನಡಿಗರಿಗೆ ನನ್ನ ಕಡೆಯಿಂದ ರಿಕ್ವೆಸ್ಟ್‌ ಮಾಡಿಕೊಳ್ತೇನೆ - ಯಾರು ಏನೇ ಮಾತಾಡ್ಲಿ, ಈ ಸಿನಿಮಾ ಮನೆಮಂದಿಯೆಲ್ಲಾ, ಮಕ್ಕಳೆಲ್ಲಾ ಕೂತುಕೊಂಡು ನೋಡುವಂತಹ ಸಿನಿಮಾ. ಯಾವ ಯಾವ ಸಿನಿಮಾ, ಯಾರ್ಯಾರಿಗೆ ಮಾಡಬೇಕು ಅಂತ ನಮಗೆ ಗೊತ್ತಿರುತ್ತೆ” ಎಂದು ಹೇಳುವ ಮೂಲಕ ಟೀಕಾಕಾರರಿಗೆ ಬಟ್ಟೆ ಸುತ್ತಿ ಹೊಡೆದಿದ್ದಾರೆ.

“ಕೆಲವೊಮ್ಮೆ ಗಡಿ ದಾಟಿ, ಪಣಕಿಟ್ಟು ಸೋಲು-ಗೆಲುವು ಮೀರಿ ಪ್ರಯತ್ನಗಳನ್ನ ಮಾಡಬೇಕಾಗುತ್ತೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತೆ. ಹೆಜ್ಜೆ ಗುರುತಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತೋರಿಗೆ ಮೆಟ್ಟಿಲು ಆಗುತ್ತೆ. ಆ ಮೆಟ್ಟಿಲು ಕೆತ್ತುವ ಕೆಲಸ, ಆ ಕಾಲದಲ್ಲಿ ಪ್ರತಿಯೊಬ್ಬರು ಮಾಡಬೇಕು. ನಿಮ್ಮೆಲ್ಲರ ಜವಾಬ್ದಾರಿ ಅದು ಇದೆ. ನಾನು ನೋಡ್ತಾ ಇದ್ದೇನೆ' ಎಂದರು.

ಅಂತೆಯೇ ಕೆಲವೊಮ್ಮೆ ಸೋಶಿಯಲ್‌ ಮೀಡಿಯಾಗದಲ್ಲಿ ಆಗಿರ್ಬಹುದು, ಯಾವುದಾದರೂ ಒಂದು ಸಿನಿಮಾ ಬಂದಾಗ, ವಿಎಫ್‌ಎಕ್ಸ್‌ ಹಂಗಿದೆ, ಈ ಆಕ್ಟರ್‌ ಹಾಗಿರ್ಬಹುದಿತ್ತು. ಇದೇ ಆಗಿರೋದು ಕಾಲ ಕಾಲದಿಂದಲೂ. ನಾವು ಯಾವತ್ತಾದರೂ ಹೊರಗಡೆ ಹೋಗ್ತೀವಿ ಅಂದಾಗ, ಟೀಕೆಗಳು ಎದುರಾಗುತ್ತವೆ. ಬ್ರಿಟಿಷರು ಮಾಡಿದ್ದು ಇದೇ ಕೆಲಸ. ಡವೈಡ್‌ ಆಂಡ್‌ ರೂಲ್‌ ಅಂತ. ಇಂಟರ್ನಲ್‌ ಫೈಟ್‌ ಮಾಡಿಕೊಂಡು ಕೂತಿದ್ರೆ, ನಾವು ಜಗತ್ತಿಗೆ ಯಾವತ್ತೂ ಚಾಲೆಂಜ್‌ ಮಾಡೋಕೆ ಆಗಲ್ಲ. ನಾವು ಏನಾದರೂ ಮಾಡ್ತಿರ್ಬೇಕಾದರೆ, ನಾವೆಲ್ಲಾ ಒಂದಾಗಬೇಕು, ಕ್ರ್ಯಾಫ್ಟ್‌ನ ಅರ್ಥ ಮಾಡಿಕೊಂಡು, ಅಪ್ರಿಷಿಯೇಟ್‌ ಮಾಡಬೇಕು” ಎಂದು ಯಶ್ ಹೇಳಿದರು.

ಅಂದಹಾಗೆ ಈ ಹಿಂದೆ ಬಿಡುಗಡೆಯಾಗಿದ್ದ ನಟ ಯಶ್ ಅಭಿನಯದ ಟಾಕ್ಸಿಕ್ ಚಿತ್ರವನ್ನು ನಟಿ ರಿಷಿಕಾ ಸಿಂಗ್, ಬಾಲಿವುಡ್ ವಿಮರ್ಶಕ ಕಮಾಲ್ ಆರ್ ಖಾನ್ ಸೇರಿದಂತೆ ಹಲವರು ವ್ಯಾಪಕವಾಗಿ ಟೀಕಿಸಿದ್ದರು. ಇದೀಗ ಯಶ್ ಟೀಕಾಕಾರರಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ಅಂದಹಾಗೆ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯ ರಾಮಾಯಣಕ್ಕೆ ಎ.ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com