ಮಿಸ್ಟರ್ ಜಾಕ್ ಚಿತ್ರತಂಡ 
ಸಿನಿಮಾ ಸುದ್ದಿ

'ಪ್ರೇಮದ ಊರಲಿ' ಖ್ಯಾತಿಯ ತಪಸ್ವಿನಿ ಪೂಣಚ್ಚ- ಗುರುನಂದನ್ ನಟನೆಯ 'ಮಿಸ್ಟರ್ ಜಾಕ್' ಬಿಡುಗಡೆ ದಿನಾಂಕ ನಿಗದಿ!

ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ 'ಮಂಡಿಮನೆ ಟಾಕೀಸ್' ಬ್ಯಾನರ್ ಅಡಿಯಲ್ಲಿ 'ಮಿಸ್ಟರ್ ಜಾಕ್' ಚಿತ್ರವನ್ನು ನಿರ್ಮಿಸಿದ್ದಾರೆ.

ಗುರುನಂದನ್ ಮತ್ತು 'ಪ್ರೇಮದ ಊರಲಿ' ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ನಟಿಸಿರುವ 'ಮಿಸ್ಟರ್ ಜಾಕ್' (Mr Jack) ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ದಿನಾಂವನ್ನು ಖಚಿತಪಡಿಸಿದೆ. ದಸರಾ ಹಬ್ಬದ ಸಂದರ್ಭವನ್ನು ಬಳಸಿಕೊಂಡು, ಈ ಕಾಮಿಡಿ ಡ್ರಾಮಾ ಚಿತ್ರವು ಡಿಸೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ 'ಮಂಡಿಮನೆ ಟಾಕೀಸ್' ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ 'ಮಿಸ್ಟರ್ ಜಾಕ್' ಚಿತ್ರವು, ನಟನ ವೃತ್ತಿಜೀವನದಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನವಾಗಿದೆ. ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ನಟ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ ಕಡೂರು ಮತ್ತು ಸುಶ್ಮಿತಾ ಜಗ್ಗಪ್ಪ ಅವರಂತಹ ಅನುಭವಿ ನಟರ ದಂಡೇ ಪೋಷಕ ಪಾತ್ರದಲ್ಲಿದ್ದಾರೆ.

ಚಿತ್ರತಂಡ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿತು; ಈ ಹಾಡಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಡಹಬ್ಬ ದಸರಾ ಸಂಭ್ರಮದಲ್ಲಿ ಚಿತ್ರತಂಡ ಅಕ್ಟೋಬರ್ 19 ರಂದು ಎರಡನೇ ಹಾಡನ್ನು ಬಿಡುಗಡೆ ಮಾಡಲಿದೆ.

ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ, ಶಿವ ಸೇನಾ ಛಾಯಾಗ್ರಹಣ ಮತ್ತು ವಿಜಯ್ ರಾಜ್ ಸಂಕಲನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!

ಮುಖ್ಯಮಂತ್ರಿಯೂ ಬಲಿಪಶುವಾಗಿರಬಹುದು, ರಾಜಕೀಯ ನಾಯಕತ್ವ ನಿಯಂತ್ರಣಕ್ಕೆ 'ಸ್ಟಿಂಗ್ ಆಪರೇಷನ್' ವಿಡಿಯೋ ಬಳಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಸಂಪೂರ್ಣ ನಿಷೇಧ ಬೇಡ; child mode ಜಾರಿಗೆ ಸುಪ್ರೀಂ ಕೋರ್ಟ್‌ ಸಲಹೆ!

‘ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ, ಕೇಳಿಸದ ಧ್ವನಿಗಳಿಗೂ ಕಿವಿಯಾಗಿ’: ಕಾನೂನು ಪದವೀಧರರಿಗೆ CJI ಸೂರ್ಯಕಾಂತ್‌ ಕರೆ

ದೇವರಾಯನದುರ್ಗ ಟ್ರೆಕ್ಕಿಂಗ್‌ ಹೋಗಿ ವಾಪಸ್‌ ಆಗುವಾಗ ದುರಂತ; ನೆಲಮಂಗಲ ಬಳಿ ಲಾರಿ ಡಿಕ್ಕಿಗೆ ಕೇರಳ ಮೂಲದ ಯುವತಿ ಬಲಿ