ಜೈಲರ್ 2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ 'ಜೈಲರ್ 2' ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ವಿಶ್ವದಾದ್ಯಂತ ಗಳಿಸಿದ್ದೆಷ್ಟು?

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಲೇ ಇದೆ. ಅಕ್ಟೋಬರ್ 18ರ ಭಾನುವಾರದಂದು ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ನಾಲ್ಕನೇ ದಿನ ಭಾರತದಲ್ಲಿ ₹55.85 ಕೋಟಿ ಗಳಿಕೆ ಕಂಡಿದ್ದು, ಒಟ್ಟು ದೇಶೀಯ ನಿವ್ವಳ ಸಂಗ್ರಹ ₹199.90 ಕೋಟಿಗೆ ತಲುಪಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಆ್ಯಕ್ಷನ್ ಎಂಟರ್‌ಟೈನರ್ ಭಾನುವಾರ 15,473 ಪ್ರದರ್ಶನ ಕಂಡಿದ್ದು, ಒಟ್ಟಾರೆ ಶೇ 62ರಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ವಿಶ್ವದಾದ್ಯಂತ ಚಿತ್ರದ ಒಟ್ಟು ಗಳಿಕೆಯು ₹424.25 ಕೋಟಿ ತಲುಪಿದ್ದು, ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಓಟ ಮುಂದುವರಿಸಿದೆ.

ಭಾನುವಾರದ ಗಳಿಕೆ ಶನಿವಾರಕ್ಕಿಂತ ಶೇ 18.2 ರಷ್ಟು ಹೆಚ್ಚಾಗಿದೆ. ಚಿತ್ರ ಭಾರತದಲ್ಲಿ₹47.25 ಕೋಟಿ ಗಳಿಸಿದೆ. ಸದ್ಯ ಚಿತ್ರದ ಒಟ್ಟು ದೇಶೀಯ ಸಂಗ್ರಹ ₹234.25 ಕೋಟಿಗೆ ಏರಿದೆ.

ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಭಾರತದಲ್ಲಿ ಒಟ್ಟು ₹59.70 ಕೋಟಿ ಗಳಿಕೆಯೊಂದಿಗೆ ಚಿತ್ರವು ತನ್ನ ಮೊದಲ ದಿನದಂದು 16,599 ಪ್ರದರ್ಶನಗಳಲ್ಲಿ ಶೇ 55.4 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿತು.

ಅಕ್ಟೋಬರ್ 16 ರಂದು ಚಿತ್ರದ ಕಲೆಕ್ಷನ್ ಕಡಿಮೆಯಾಯಿತು. ಚಿತ್ರವು 13,157 ಪ್ರದರ್ಶನಗಳಿಂದ ಶೇ 48.2 ರಷ್ಟು ಆಕ್ಯುಪೆನ್ಸಿಯಲ್ಲಿ ₹37.10 ಕೋಟಿ ಗಳಿಸಿತು. ಈ ಚಿತ್ರವು ವಾರಾಂತ್ಯದಲ್ಲಿ ಮತ್ತೆ ವೇಗವನ್ನು ಪಡೆದುಕೊಂಡಿತು.

ಅಕ್ಟೋಬರ್ 17ರ ಶನಿವಾರದಂದು ಚಿತ್ರವು 14,604 ಪ್ರದರ್ಶನಗಳಲ್ಲಿ ₹47.25 ಕೋಟಿ ಗಳಿಕೆ ಕಂಡಿತು. ಭಾನುವಾರ ಮತ್ತಷ್ಟು ಏರಿಕೆ ಕಂಡಿತು. ಚಿತ್ರದ ಗಳಿಕೆ ₹55.85 ಕೋಟಿಗೆ ಏರಿತು.

ತನ್ನ ನಾಲ್ಕನೇ ದಿನದಂದು 36,87,269 ಜನರು ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಮೂಲಕ ಚಿತ್ರ ವೀಕ್ಷಿಸಿದವರ ಸಂಖ್ಯೆ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಒಟ್ಟು 1,30,21,526 ಕ್ಕೆ ತಲುಪಿದೆ.

ಭಾನುವಾರ 'ಜೈಲರ್ 2' ಚಿತ್ರದ ದೇಶೀಯ ಗಳಿಕೆಗೆ ತಮಿಳು ಆವೃತ್ತಿಯು ಅತಿ ಹೆಚ್ಚು ಕೊಡುಗೆ ನೀಡಿದೆ. 8,173 ಪ್ರದರ್ಶನಗಳಿಂದ ಒಟ್ಟು ₹39.95 ಕೋಟಿ ಸಂಗ್ರಹವಾಗಿದ್ದು, ಶೇ 80 ರಷ್ಟು ಗಳಿಕೆ ದಾಖಲಿಸಿದೆ.

ತೆಲುಗು ಆವೃತ್ತಿಯು 2,234 ಪ್ರದರ್ಶನಗಳಿಂದ ₹9.50 ಕೋಟಿ, ಹಿಂದಿ ಆವೃತ್ತಿಯು 4,902 ಪ್ರದರ್ಶನಗಳಿಂದ ₹5.75 ಕೋಟಿ ಗಳಿಕೆ ಕಂಡಿದೆ. ಈಮಧ್ಯೆ, ಕನ್ನಡ ಆವೃತ್ತಿಯು 164 ಪ್ರದರ್ಶನಗಳಿಂದ ₹65 ಲಕ್ಷ ಸಂಗ್ರಹಿಸಿದ್ದು, ಶೇ 61 ರಷ್ಟು ಗಳಿಕೆ ಕಂಡಿದೆ.

ಭಾನುವಾರ 'ಜೈಲರ್ 2' ಚಿತ್ರವು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ₹40 ಕೋಟಿ ಗಳಿಸಿದ್ದು, ವಿದೇಶಗಳಲ್ಲಿ ಒಟ್ಟು ಗಳಿಕೆ ₹190 ಕೋಟಿಗೆ ಏರಿಕೆಯಾಗಿದೆ. ಈ ಚಿತ್ರ ಒಟ್ಟಾರೆಯಾಗಿ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು ₹424.25 ಕೋಟಿ ಗಳಿಕೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಮೂವರ ಬಂಧನ!

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬ್ಯಾಂಡೇಜ್ ಧರಿಸಿರುವ ನಟನ ಫಸ್ಟ್ ಇಮೇಜ್; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಏಕನಾಥ್ ಶಿಂಧೆ; Video

ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್: ಸೋಷಿಯಲ್ ಮೀಡಿಯಾದಲ್ಲಿ ದಾಳಿ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್; Video

ಕಬ್ಬು ಬೆಳೆಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ: ಸಂಧಾನ ಯಶಸ್ವಿ?; Video

ವಿಜಯದಶಮಿಯೊಳಗೆ ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ಗಳನ್ನು ಬಂಧಿಸಬೇಕು-ಸರ್ಕಾರಕ್ಕೆ ಕುಮಾರಸ್ವಾಮಿ ಡೆಡ್ ಲೈನ್