ದರ್ಶನ್, ವಿಜಯಲಕ್ಷ್ಮೀ, ಧನ್ವೀರ್ ಗೌಡ 
ಸಿನಿಮಾ ಸುದ್ದಿ

'ಮನೆಯವರಿಗೆ ಬೇಗ ಕೊಡು ಅಂದಿದ್ನಲ್ಲ ಚಿನ್ನ': ಧನ್ವೀರ್​ಗೆ ಸ್ವತಃ ದರ್ಶನ್ ಹೇಳಿದ್ರೂ ಹಣ ಕೊಟ್ಟಿಲ್ಲ: ವೇಲು ನಾಯ್ಕರ್ ಆರೋಪ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದ ಇದೀಗ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದ ಇದೀಗ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗಗೊಂಡಿದೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಗಳದ ಅಸಲಿ ಸತ್ಯವನ್ನು ದರ್ಶನ್ ಆಪ್ತ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ.

ಇದು ಒಂದೆರೆಡು ವರ್ಷದ ಹಿಂದಿನ ಹಣಕಾಸಿನ ವಿಚಾರ. ವಿಜಯಲಕ್ಷ್ಮಿ ಹಣ ವಾಪಸ್ ಕೊಡುವಂತೆ ಧನ್ವೀರ್ ಗೆ ಕೇಳಿದ್ದರು. ಆ ನಂತರ ವಿಜಯಲಕ್ಷ್ಮಿ ಕರೆ ಮಾಡಿದರೂ ಧನ್ವೀರ್ ಕಾಲ್ ಪಿಕ್ ಮಾಡ್ತಿಲ್ಲ. ಅಷ್ಟೇ ಅಲ್ಲದೆ ಅಂತರ ಕಾಯ್ದುಕೊಳ್ಳುತ್ತಿದ್ದರು. ಹೀಗಾಗಿ ವಿಜಯಲಕ್ಷ್ಮೀ ನನಗೆ ಧನ್ವೀರ್ ಜೊತೆ ಮಾಡುವಂತೆ ಹೇಳಿದ್ದರು. ನಾನು ಧನ್ವೀರ್ ತಂದೆಯ ಜೊತೆ ಸಹ ಮಾತನಾಡಿದ್ದೆ. ಅವರು ಮಗನಿಗೆ ಹೇಳುವುದಾಗಿ ಹೇಳಿದ್ದರು.

ಈ ವಿಷಯ ದರ್ಶನ್‌ಗೂ ಗೊತ್ತಾಯ್ತು. ಹೀಗಾಗಿ ಧನ್ವೀರ್, ವಿಜಯಲಕ್ಷ್ಮೀ ಮತ್ತು ನಾನು ಮೂವರು ಜೈಲಿನಲ್ಲಿ ದರ್ಶನ್ ನ ಭೇಟಿಯಾದೆವು. ಮಾತುಕತೆಯ ಸಂದರ್ಭದಲ್ಲಿ ಹಣವನ್ನು ಏಕೆ ವಾಪಸ್ ಕೊಡಲಿಲ್ಲ ಎಂದು ದರ್ಶನ್ ಪ್ರಶ್ನಿಸಿದ್ದು ಇದಕ್ಕೆ ಧನ್ವೀರ್ ಮರುದಿನವೇ ಹಣ ನೀಡುವುದಾಗಿ ಹೇಳಿದ್ದರು. ಅಲ್ಲದೆ ಹಣವನ್ನು ವೇಲು ನಾಯ್ಕರ್ ಮೂಲಕ ನೀಡುವಂತೆ ದರ್ಶನ್ ಸೂಚಿಸಿದ್ದರು.

ಮತ್ತೆ ಹಣ ಕೇಳಿದಾಗ ಧನ್ವೀರ್ ಈ ವಿಷಯದಲ್ಲಿ ಯಾರೂ ಮಧ್ಯಪ್ರವೇಶಿಸಬಾರದು ಎಂದು ಹೇಳಿದ್ದರು. ಹಣವನ್ನು ವಾಪಸ್ ಕೇಳಿದಾಗ ಕೋಪದಿಂದ ಮಾತನಾಡಿದ್ದು ಏಕವಚನದಲ್ಲಿ ನಿಂದಿಸಿದರು ಎಂದು ವೇಲು ನಾಯ್ಕರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video

ಫ್ರಾನ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಭುಗಿಲೆದ್ದ ಸಂಘರ್ಷ; 1,000 ಮಂದಿ ಬಂಧನ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟ ಸಿಎಂ ಡಿಕೆಶಿ! ಎಚ್ ಡಿಕೆ ಹೊಸ ಬಾಂಬ್

'ಮತ ಗಳ್ಳತನ' ಪ್ರತಿಭಟನೆ ನಡುವೆ ಅ. 30 ರಿಂದ ನ. 1 ರವರೆಗೆ ದೆಹಲಿಯಲ್ಲೇ ಇರುವಂತೆ ಕಾಂಗ್ರೆಸ್ ಸಂಸದರಿಗೆ ಸೂಚನೆ!

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್