ರಾಮಾಯಣ ಚಿತ್ರದಲ್ಲಿ ನಟಿ ಸಾಯಿಪಲ್ಲವಿ 
ಸಿನಿಮಾ ಸುದ್ದಿ

‘ರಾವಣ ಸಂಪೂರ್ಣ ಕೆಟ್ಟವನಲ್ಲ'; ಸಾಯಿ ಪಲ್ಲವಿ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ಭಾರತೀಯ ಸಂಸ್ಕೃತಿ ಮತ್ತು ಮಹಾಕಾವ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಲಾಸ್ ಏಂಜಲೀಸ್‌: ಲಂಕಾಧೀಶ ರಾವಣ ಸಂಪೂರ್ಣ ಕೆಟ್ಟವನಲ್ಲ ಎಂದು ರಾಮಾಯಣ ಚಿತ್ರದ ನಾಯಕ ನಟಿ ಸಾಯಿ ಪಲ್ಲವಿ ಹೇಳಿದ್ದು, ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನಟ ಯಶ್, ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ಬಿಡುಗಡೆಗೂ ಮುನ್ನ ಅಕ್ಟೋಬರ್ 27ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರೀಮಿಯರ್ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ರಾವಣನ ಕುರಿತು ಆಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.

ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಭಾರತೀಯ ಸಂಸ್ಕೃತಿ ಮತ್ತು ಮಹಾಕಾವ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ, ರಾವಣನ ಕುರಿತು ಅವರು ನೀಡಿದ ಹೇಳಿಕೆ ನೆಟ್ಟಿಗರ ಗಮನ ಸೆಳೆದಿದ್ದು, ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

‘ನಮ್ಮೊಳಗಿನ ರಾವಣನನ್ನು ಗುರುತಿಸಿಕೊಳ್ಳಬೇಕು’

“ಧರ್ಮಗ್ರಂಥವನ್ನು ನಂಬುವವರು ಅದನ್ನು ಓದುವಾಗ ತಮ್ಮೊಳಗೆ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಏನಿದೆ ಎಂಬುದನ್ನು ಗುರುತಿಸಿ, ಕಾಲಕ್ರಮೇಣ ನಮ್ಮನ್ನು ನಾವು ತಿದ್ದಿಕೊಳ್ಳಲು ಕಲಿಯಬೇಕು. ಏಕೆಂದರೆ, ರಾವಣ ಸಂಪೂರ್ಣ ಕೆಟ್ಟವನಲ್ಲ. ನಮ್ಮೊಳಗಿನ ರಾವಣನನ್ನು ಗುರುತಿಸಿ, ಕಾಲಾನಂತರದಲ್ಲಿ ನಮ್ಮಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ” ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.

ವಿಡಿಯೋ ವೈರಲ್

ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ನಟಿಯ ಮಾತುಗಳನ್ನು ಟೀಕಿಸಿದರೆ, ಇನ್ನು ಕೆಲವರು ಆಕೆಯ ಹೇಳಿಕೆಯ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಇಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು. ಇವು ನಕಾರಾತ್ಮಕತೆ ಮತ್ತು ವಿವಾದಕ್ಕೆ ಕಾರಣವಾಗುತ್ತವೆ” ಎಂದು ಒಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು, “ತನ್ನನ್ನು ಅಪಹರಿಸಿದವನನ್ನು ಹೊಗಳುವ ಮಹಿಳೆ” ಎಂದು ಟೀಕಿಸಿದ್ದಾರೆ.

ಆದರೆ, ಕೆಲವರು ಸಾಯಿ ಪಲ್ಲವಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಒಬ್ಬ ವ್ಯಕ್ತಿಯಲ್ಲಿ ಕೆಟ್ಟ ಗುಣಗಳ ಜೊತೆಗೆ ಒಳ್ಳೆಯ ಗುಣಗಳೂ ಇರಬಹುದು ಎಂಬ ಅರ್ಥದಲ್ಲಿ ಅವರು ‘ಸಂಪೂರ್ಣ ಕೆಟ್ಟವನಲ್ಲ’ ಎಂದಿದ್ದಾರೆ. ಇದರಲ್ಲಿ ವಿವಾದ ಮಾಡುವಂಥದ್ದೇನಿಲ್ಲ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

“ಪ್ರತಿಯೊಂದು ವಿಷಯದಲ್ಲೂ ವಿವಾದ ಹುಡುಕುವವರಿದ್ದಾರೆ. ಪ್ರತಿಯೊಬ್ಬರೊಳಗೂ ಒಂದು ಕೆಟ್ಟ ಗುಣ ಅಥವಾ ಒಳಗಿನ ರಾಕ್ಷಸನಿರುತ್ತಾನೆ. ಅದನ್ನು ಗುರುತಿಸಿ ಜಯಿಸಬೇಕು ಎಂಬುದನ್ನೇ ಅವರು ಹೇಳಿದ್ದಾರೆ. ಅವರ ಮಾತನ್ನು ಸಂದರ್ಭದಿಂದ ಬೇರ್ಪಡಿಸಿ ನೋಡಲಾಗುತ್ತಿದೆ” ಎಂದು ಇನ್ನೊಬ್ಬರು ನಟಿಯ ಪರವಾಗಿ ವಾದಿಸಿದ್ದಾರೆ.

ಸಾಯಿ ಪಲ್ಲವಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಹೀಗಿರುವಾಗ ಅವರ ಹೇಳಿಕೆಯನ್ನು ಮತ್ತಷ್ಟು ವಿವಾದಕ್ಕೆ ಎಳೆಯುವ ಅಗತ್ಯವಿಲ್ಲ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ನವೆಂಬರ್ 5, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಎರಡು ಭಾಗಗಳಲ್ಲಿ ‘ರಾಮಾಯಣ’ ಬಿಡುಗಡೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮೊದಲ ಭಾಗವು 2026ರ ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Namma Metro ಪಿಂಕ್ ಲೈನ್​​ ಮೇಲ್ಸೇತುವೆ ಎಲಿವೇಟೆಡ್ ಮಾರ್ಗಕ್ಕೆ CMRS ಗ್ರೀನ್ ಸಿಗ್ನಲ್

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್

ರೇಣುಕಾಸ್ವಾಮಿ ಕೊಲೆ ಕೇಸ್: ಪಟ್ಟಣಗೆರೆ ಶೆಡ್‌ಗೆ ದರ್ಶನ್, ಪವಿತ್ರಾ ಬಂದೇ ಇಲ್ಲ - ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಐ ವಿಟ್ನೆಸ್‌!

ಟೀಮ್ ಇಂಡಿಯಾಗೆ ಆಘಾತ; ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್‌ ಏಕದಿನ ಸರಣಿಯಿಂದ Prasidh Krishna ಔಟ್!