ವಾಸುಕಿ ವೈಭವ್ - ಸ್ಪಿರಿಟ್ ಪೋಸ್ಟರ್ 
ಸಿನಿಮಾ ಸುದ್ದಿ

ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ!

ಈ ಹಾಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಹಾಕಿಸುವಂತಿದೆ. ಅಲ್ಲದೆ, 'ರೋಮಾಂಚಕಂ' ನಂತರ ತೆಲುಗು ಚಿತ್ರರಂಗದಲ್ಲಿ ವಾಸುಕಿಗೆ ಹಲವು ಅವಕಾಶಗಳು ಸಿಗಲಿವೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದರು.

'ರಾಮ ರಾಮ ರೇ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಮತ್ತು 'ಬಡವ ರಾಸ್ಕಲ್' ಮುಂತಾದ ಚಿತ್ರಗಳಲ್ಲಿನ ತಮ್ಮ ಕೆಲಸಕ್ಕಾಗಿ ಗುರುತಿಸಿಕೊಂಡಿರುವ ಕನ್ನಡದ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್, ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 3 ರಂದು ಅವರ ಸಂಗೀತ ಸಂಯೋಜನೆಯ 'ರೋಮಾಂಚಕಂ' ತೆಲುಗು ಚಿತ್ರ ಬಿಡುಗಡೆಯಾಗಿದ್ದು, ಇದೀಗ ಆ ಭಾಷೆಯಲ್ಲಿ ಮತ್ತೊಂದು ಪ್ರಮುಖ ಯೋಜನೆಗೆ ಸಹಿ ಹಾಕಿದ್ದಾರೆ.

ಪ್ರಭಾಸ್ ನಟನೆಯ ತಮ್ಮ ಮುಂಬರುವ ಚಿತ್ರ 'ಸ್ಪಿರಿಟ್'ಗಾಗಿ ವಾಸುಕಿ ವೈಭವ್ ಒಂದು ಹಾಡನ್ನು ನೀಡಿದ್ದಾರೆ ಎಂದು ಚಿತ್ರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ತಮ್ಮ ಸಹೋದರ ಪ್ರಣಯ್ ವಂಗಾ ನಿರ್ಮಿಸಿ, ತಾವೇ (ಸಂದೀಪ್ ರೆಡ್ಡಿ ವಂಗಾ) ಪ್ರಸ್ತುತಪಡಿಸುತ್ತಿರುವ 'ರೋಮಾಂಚಕಂ' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ವಾಸುಕಿ ಅವರ ಕೆಲಸದ ಕುರಿತು ಮಾತನಾಡಿದ ಸಂದೀಪ್, ಈ ಹಾಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಹಾಕಿಸುವಂತಿದೆ. ಅಲ್ಲದೆ, 'ರೋಮಾಂಚಕಂ' ನಂತರ ತೆಲುಗು ಚಿತ್ರರಂಗದಲ್ಲಿ ವಾಸುಕಿಗೆ ಹಲವು ಅವಕಾಶಗಳು ಸಿಗಲಿವೆ ಎಂದೂ ಅವರು ಹೇಳಿದರು.

ವೇಣುಗೋಪಾಲ್ ರೆಡ್ಡಿ ನಿರ್ದೇಶನದ 'ರೋಮಾಂಚಕಂ' ಸುಮಂತ್ ಪ್ರಭಾಸ್ ಮತ್ತು ಅನಂತಿಕಾ ಸುನಿಲ್‌ಕುಮಾರ್ ನಟನೆಯ ರೊಮ್ಯಾಂಟಿಕ್ ಚಿತ್ರವಾಗಿದೆ. ಈ ಚಿತ್ರದ ಮೂಲಕ ವೇಣುಗೋಪಾಲ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕರು ಕಥೆಯನ್ನು ಎರಡು ಗಂಟೆಗಳ ಕಾಲ ವಿವರಿಸಿದ ನಂತರ ವಂಗಾ ಸಹೋದರರು ಈ ಯೋಜನೆಗೆ ಕೈಜೋಡಿಸಿದರು.

ಕನ್ನಡದಲ್ಲಿ ಸಂಗೀತ ಸಂಯೋಜಕ ಮತ್ತು ಗಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ, ವಾಸುಕಿ ಅವರು ತೆಲುಗು ಚಿತ್ರರಂಗಕ್ಕೆ ಇಟ್ಟಿರುವ ಇತ್ತೀಚಿನ ಹೆಜ್ಜೆ 'ರೋಮಾಂಚಕಂ'. 'ಬಿಗ್ ಬಾಸ್ ಕನ್ನಡ'ದ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿರುವ ಅವರು ಪೋಷಕ ಪಾತ್ರಗಳಲ್ಲೂ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

Asian Games 2026: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಹಾಸನ: KSRTC ಬಸ್, ATM ವಾಹನದ ನಡುವೆ ಭೀಕರ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

NALSAR row: ಕಾನೂನು ವಿದ್ಯಾರ್ಥಿಗಳ ನಡವಳಿಕೆ ನಿಯಂತ್ರಿಸುವ ಅಧಿಕಾರ ಬಾರ್ ಕೌನ್ಸಿಲ್‌ಗೆ ಇಲ್ಲ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಗೆ ಭಾರಿ ಹಿನ್ನಡೆ: ಚುನಾವಣಾ ಅಕ್ರಮ ಆರೋಪ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್!