ವರ್ಕೌಟ್ ನಲ್ಲಿ ಯಶ್  
ಸಿನಿಮಾ ಸುದ್ದಿ

'ಟಾಕ್ಸಿಕ್' ಗೆ ಯಶ್ ಬಾಡಿ ಟ್ರಾನ್ಸ್‌ಫಾರ್ಮೇಷನ್ ವರ್ಕೌಟ್ ವಿಡಿಯೊ ನೋಡಿ !

ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕಥೆ, ಅದ್ದೂರಿ ನಿರ್ಮಾಣ, ಫೋಟೋಗ್ರಫಿ, ಯಶ್ ಅಭಿನಯ, ನಿರ್ದೇಶಕಿ ಬಗ್ಗೆ ಇನ್ನೂ ಚರ್ಚೆ, ವಿಮರ್ಶೆಗಳು ನಡೆಯುತ್ತಲೇ ಇವೆ. ಯಶ್ ನಟನೆ ಬಗ್ಗೆ, ಅವರ ಬಾಡಿ ಲ್ಯಾಂಗ್ವೇಜ್, ಚಿತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ಹುರಿಗೊಳಿಸಿದ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟಿಸಿ, ಸಹ ನಿರ್ಮಾಣದ ಸಿನಿಮಾ 'ಟಾಕ್ಸಿಕ್'. ಚಿತ್ರಕಥೆಯಲ್ಲಿ ಕೂಡ ಕೈಯಾಡಿಸಿರುವ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ಬಿಡುಗಡೆಯಾಗಿ ಹಲವರಿಗೆ ಇಷ್ಟವಾಗಿದ್ದರೆ ಇನ್ನು ಕೆಲವರಿಗೆ ಇಷ್ಟವಾಗಿಲ್ಲ,ಮಿಶ್ರ ಪ್ರತಿಕ್ರಿಯೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಂತೂ ಚಿತ್ರದ ಕಥೆ, ಅದ್ದೂರಿ ನಿರ್ಮಾಣ, ಫೋಟೋಗ್ರಫಿ, ಯಶ್ ಅಭಿನಯ, ನಿರ್ದೇಶಕಿ ಬಗ್ಗೆ ಇನ್ನೂ ಚರ್ಚೆ, ವಿಮರ್ಶೆಗಳು ನಡೆಯುತ್ತಲೇ ಇವೆ. ಆದರೆ ಯಶ್ ನಟನೆ ಬಗ್ಗೆ, ಅವರ ಬಾಡಿ ಲ್ಯಾಂಗ್ವೇಜ್, ಚಿತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ಹುರಿಗೊಳಿಸಿದ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ.

ಟಾಕ್ಸಿಕ್ ಚಿತ್ರದಲ್ಲಿ ರಾಯ ಆಗಿ, ಟಿಕೆಟ್ ಆಗಿ ಯಶ್‌ ಉತ್ತಮ ಅಭಿನಯ ನೀಡಿದ್ದಾರೆ ಎಂದೇ ಚಿತ್ರ ನೋಡಿದವರು ಹೇಳುತ್ತಿದ್ದಾರೆ. ಸಿನಿಮಾದ ಉದ್ದಕ್ಕೂ ವಿಭಿನ್ನ ಶೇಡ್‌ಗಳಲ್ಲಿ ಯಶ್‌ ಕಾಣಿಸಿಕೊಂಡಿದ್ದಾರೆ. ತಮ್ಮ ಲುಕ್‌ಗಾಗಿ ಯಶ್‌ ತಮ್ಮ ದೇಹವನ್ನ ತಿಂಗಳುಗಟ್ಟಲೆ ದಂಡಿಸಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿನ ಯಶ್‌ ಅವರ ಸಾಲಿಡ್‌ ಹಾಗೂ ಕಟ್ಟುಮಸ್ತಾದ ಫಿಟ್‌ನೆಸ್‌ ಟ್ರಾನ್ಸ್‌ಫಾರ್ಮೇಷನ್‌ ಹಿಂದಿರೋದು ಖ್ಯಾತ ಫಿಟ್‌ನೆಸ್ ಗುರು, ಬಾಡಿ ಬಿಲ್ಡರ್ ಪಾನಿಪುರಿ ಕಿಟ್ಟಿ.

ಯಶ್ ಮಾಡಿರೋ ವರ್ಕೌಟ್ ಹಾಗೂ ಕಠಿಣ ದೈಹಿಕ ತರಬೇತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರವಾದ ತೂಕ ಎತ್ತುವುದು ಮತ್ತು ವಿವಿಧ ಮಾದರಿಯ ವರ್ಕೌಟ್‌ಗಳನ್ನು ಮಾಡಿ ಅವರು ತಮ್ಮ ದೇಹವನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಪಾನಿಪುರಿ ಕಿಟ್ಟಿ ಮಾರ್ಗದರ್ಶನದಲ್ಲಿ ಯಶ್ ಅವರು ಟ್ರೇನ್ ಆಗಿದ್ದರು. ಸೆಟ್‌ನಲ್ಲಿ ಹಾಗೂ ಶೂಟಿಂಗ್ ವೇಳೆಯೂ ಯಶ್ ಅವರು ವರ್ಕೌಟ್ ಮಾಡುತ್ತಿದ್ದರು. ಯಶ್ ಅವರ ಈ ಕಠಿಣ ಪರಿಶ್ರಮಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಲವು ವರ್ಷಗಳಿಂದ ಯಶ್ ಅವರ ಪರ್ಸನಲ್ ಜಿಮ್ ಟ್ರೇನರ್ ಆಗಿ ಪಾನಿಪುರಿ ಕಿಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಪಾತ್ರಕ್ಕೆ ತಕ್ಕಂತೆ ವಿಭಿನ್ನ ರಗಡ್ ಆದ ಲುಕ್ ಕಟ್ಟಿಕೊಡುವಲ್ಲಿ ಪಾನಿಪುರಿ ಕಿಟ್ಟಿ ಅವರ ಕಸ್ಟಮೈಸ್ಡ್ ವರ್ಕೌಟ್ ಪ್ಲಾನ್ ಮತ್ತು ಡಯಟ್ ಪ್ಲಾನ್ ವರ್ಕ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!