ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ; ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ; Live Video

ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ತಾಯಿ ಚಾಮುಂಡಿ ಆಶೀರ್ವಾದದಿಂದ ನನಗೆ ಅವಕಾಶ ಸಿಕ್ಕಿದೆ, ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ...
CM DK Shivakumar Performs Nandi Dwaja Puja
ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ ಡಿಕೆ ಶಿವಕುಮಾರ್
Updated on: 

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಮುಖ್ಯಮಂತ್ರಿ ಚಾಲನೆ ನೀಡಿರುವ ಸಿಎಂ ಡಿಕೆ ಶಿವಕುಮಾರ್‌ ಅವರು ನಂದಿಧ್ವಜಕ್ಕೆ ಪೂಜೆ (Nandivada Puja) ಸಲ್ಲಿಸಿದ್ದಾರೆ.

ಮೈಸೂರು ಪೇಟ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ ಶಿವಕುಮಾರ್‌, ತಮಗಾಗಿ ತಂದಿದ್ದ ಹೂವಿನ ಹಾರವನ್ನ ಧರಿಸಲು ನಿರಾಕರಿಸಿದರು.

ಬದಲಾಗಿ, ತಮಗೆ ತಂದಿದ್ದ ಹಾರವನ್ನ ನಂದಿಧ್ವಜಕ್ಕೆ ಹಾಕಿಸುವಂತೆ ಸೂಚಿಸಿದರು. ಇದೇ ವೇಳೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ಮುಖ್ಯಮಂತ್ರಿಗಳಿಗೆ ನೀಡಲಾಯಿತು.

ಇನ್ನೂ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ತಾಯಿ ಚಾಮುಂಡಿ ಆಶೀರ್ವಾದದಿಂದ ನನಗೆ ಅವಕಾಶ ಸಿಕ್ಕಿದೆ, ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ – ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

CM DK Shivakumar Performs Nandi Dwaja Puja
ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ: ಗಜಪಡೆಗೆ ಸಿಂಗಾರ, ಅಂಬಾರಿ ಹೊರಲು ಪ್ರಶಾಂತ ಸಜ್ಜು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com