ಬಿಗ್ ಬಾಸ್ ಕನ್ನಡ ಸ್ಪರ್ಧಿಗಳು 
ಸಿನಿಮಾ ಸುದ್ದಿ

Bigg Boss Kannada 13: ದೊಡ್ಮನೆಗೆ ಬರೋ ಕಂಟೆಸ್ಟೆಂಟ್‌ಗಳು ಇವರೇ ನೋಡಿ!

ರಿಯಾಲಿಟಿ ಶೋ ತಾರೆ ಸೌಂದರ್ಯ ಶೆಟ್ಟಿ, ಆರ್‌ಜೆ-ನಟ ಪೃಥ್ವಿ ಅಂಬಾರ್, ನಟ ತಾಂಡವ್ ರಾಮ್, ನಟಿ-ಮಾದರಿ ರೇಚಲ್ ಡೇವಿಡ್ ಮತ್ತು ನಟಿ ಆಸಿಯಾ ಫಿರ್ದೋಸ್ ಸೇರಿದಂತೆ ಹಲವರು ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವುದು ಬಹುತೇಕ ನಿಶ್ಚಿತವಾಗಿದೆ.

ಸತತ 13ನೇ ವರ್ಷವೂ ಕಿಚ್ಚ ಸುದೀಪ್ ನಿರೂಪಕರಾಗಿ ಮರಳುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 13' ಇಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಸ್ಪರ್ಧಿಗಳಾಗಿ ಯಾರು ಮನೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಬಹುತೇಕ ತೆರೆ ಬಿದ್ದಿದೆ.

ರಿಯಾಲಿಟಿ ಶೋ ತಾರೆ ಸೌಂದರ್ಯ ಶೆಟ್ಟಿ, ಆರ್‌ಜೆ-ನಟ ಪೃಥ್ವಿ ಅಂಬಾರ್, ನಟ ತಾಂಡವ್ ರಾಮ್, ನಟಿ-ಮಾದರಿ ರೇಚಲ್ ಡೇವಿಡ್ ಮತ್ತು ನಟಿ ಆಸಿಯಾ ಫಿರ್ದೋಸ್ ಸೇರಿದಂತೆ ಹಲವರು ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವುದು ಬಹುತೇಕ ನಿಶ್ಚಿತವಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಂತಿದೆ:

ಮಂಗಳೂರು ಮೂಲದ ನಟಿ ಸೌಂದರ್ಯಾ ಶೆಟ್ಟಿ ಅವರ ಹೆಸರು ಕೂಡ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಸ್ಪ್ಲಿಟ್ಸ್‌ವಿಲ್ಲಾ’ದಲ್ಲೂ ಅವರು ಕಾಣಿಸಿಕೊಂಡಿದ್ದರು.

ಸೌಂದರ್ಯ ಶೆಟ್ಟಿ

ಇನ್ನೂ ನಟ ಪೃಥ್ವಿ ಅಂಬಾರ್ ಕೂಡಾ ಈ ಬಾರಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಪ್ರಧಾನವಾಗಿ ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಬಾಯ್ಸ್’ ಸಿನಿಮಾದಲ್ಲಿ ನಟಿಸಿರುವ ಸೋನಿ ಮುಲೆವಾ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟನೆಯ ಜೊತೆಗೆ ಅವರು ಇನ್‌ಸ್ಟಾಗ್ರಾಂ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ನಟಿ ಹಾಗೂ ಗಾಯಕಿ ಅಂಕಿತಾ ಅಮರ್ ಅವರ ಸಹೋದರಿ ಅನನ್ಯಾ ಅಮರ್ ಈ ಬಾರಿ ಬಿಗ್‌ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ಹಾಡುಗಾರಿಕೆ ಮತ್ತು ನೃತ್ಯದಲ್ಲೂ ಅವರು ಪ್ರತಿಭೆ ಹೊಂದಿದ್ದಾರೆ.

ಉಳಿದಂತೆ ಕನ್ನಡ ಚಿತ್ರರಂಗದ ಪರಿಚಿತ ನಟಿ ಸಂಗೀತಾ ಭಟ್ ಅವರ ಹೆಸರೂ ಈ ಬಾರಿ ಬಿಗ್‌ಬಾಸ್‌ಗಾಗಿ ಕೇಳಿಬರುತ್ತಿದೆ. ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕ್ವಾಟ್ಲೆ ಕಿಚನ್’, ‘ಭರ್ಜರಿ ಬ್ಯಾಚ್ಯುಲರ್’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಆಸಿಯಾ ಬೇಗಂ ಕೂಡ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ನಟ ಪೃಥ್ವಿ ಅಂಬಾರ್

ಡ್ರ್ಯಾಗನ್ ಮಂಜು: ತಮ್ಮ ದೈತ್ಯ ದೇಹ ಮತ್ತು ಫಿಟ್‌ನೆಸ್‌ನಿಂದಲೇ ಗಮನ ಸೆಳೆದಿರುವ ಡ್ರ್ಯಾಗನ್ ಮಂಜು ಈ ಬಾರಿ ಬಿಗ್‌ಬಾಸ್ ಮನೆ ಎಂಟ್ರಿ ಕೊಡ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮಾ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಜಗ್ಗ ಮಮ್ಮಿ ‘ಲವ್ ಮಾಕ್ಟೇಲ್ 2’ ಸಿನಿಮಾದ ಹಾಸ್ಯಪಾತ್ರದ ಮೂಲಕ ಗುರುತಿಸಿಕೊಂಡಿರುವ ಜಗ್ಗ ಮಮ್ಮಿ ಅವರ ಹೆಸರು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಹಾಸ್ಯಕಲಾವಿದರಾಗಿರುವ ಅವರು ದೊಡ್ಮನೆಯಲ್ಲಿ ನಗುವಿನ ಅಲೆ ಎಬ್ಬಿಸುತ್ತಾರಾ ಎಂಬ ಕುತೂಹಲ ಮೂಡಿದೆ.ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸೂರಜ್ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

ತಾಂಡವ್ ರಾಮ್: ಕಿರುತೆರೆಯ ಜನಪ್ರಿಯ ನಟ ತಾಂಡವ್ ರಾಮ್ ಅವರ ಹೆಸರೂ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ‘ಜೋಡಿ ಹಕ್ಕಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಹಾಗೂ ‘ಕ್ವಾಟ್ಲೆ ಕಿಚನ್’ನಂತಹ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ಮೂಲಕ ಜನಪ್ರಿಯರಾಗಿರುವ ಆಸಿಯಾ ಫಿರ್ದೋಸ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ‘ಕನ್ಯಾಕುಮಾರಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ.

ಆಸಿಯಾ ಫಿರ್ದೋಸ್

ಕೋಲಾರ ಜಿಲ್ಲೆಯ ರೈತ ಸಜೀವ್ ಕೂಡ ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಕೃಷಿಯ ಜೊತೆಗೆ ಹೂವಿನ ವ್ಯಾಪಾರ ಹಾಗೂ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅವರು ಐಷಾರಾಮಿ ಜೀವನಶೈಲಿಯಿಂದ ಗಮನ ಸೆಳೆದಿದ್ದಾರೆ. ಹಯಾಬುಸಾ ಬೈಕ್, ಪೋರ್ಷೆ ಮತ್ತು ಲ್ಯಾಂಬೋರ್ಗಿನಿಯಂತಹ ದುಬಾರಿ ವಾಹನಗಳನ್ನು ಹೊಂದಿರುವ ಸಜೀವ್, ವಾಹನಗಳು ಮತ್ತು ಬಂಗಾರದ ಆಭರಣಗಳ ಮೇಲಿನ ತಮ್ಮ ಆಸಕ್ತಿಯಿಂದಲೂ ಗುರುತಿಸಿಕೊಂಡಿದ್ದಾರೆ.

ಒಟ್ಟು 18 ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದ್ದರೂ, ಉಳಿದ ಸ್ಪರ್ಧಿಗಳ ಹೆಸರುಗಳು ಇನ್ನೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಸಿನಿಮಾ, ಕಿರುತೆರೆ, ಕಾಮಿಡಿ ಮತ್ತು ಸೋಷಿಯಲ್ ಮೀಡಿಯಾ ಕ್ಷೇತ್ರದಿಂದ ಮತ್ತಷ್ಟು ಜನರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಹಾಸ್ಯ ನಟ ಸೂರಜ್

.ಈ ವರ್ಷ, 'ಬಿಗ್ ಬಾಸ್ ಕನ್ನಡ'ವು 'ಅಗ್ನಿಪರೀಕ್ಷೆ' ಎಂಬ ಹೊಸ ಸ್ವರೂಪವನ್ನು ಪರಿಚಯಿಸಿದೆ. ಇದು ಮುಖ್ಯ ಬಿಗ್ ಬಾಸ್ ಮನೆಯಲ್ಲಿ ಸ್ಥಾನ ಪಡೆಯುವ ಮೊದಲು ಸಾಮಾನ್ಯ ಜನರು ಮತ್ತು ಆಕಾಂಕ್ಷಿ ಸ್ಪರ್ಧಿಗಳು ಸರಣಿ ಸವಾಲುಗಳನ್ನು ಎದುರಿಸಬೇಕಾದ ಪ್ರಾಥಮಿಕ ಹಂತವಾಗಿದ್ದು, ಇದರ ಗ್ರ್ಯಾಂಡ್ ಫಿನಾಲೆ ನಡೆದಿದೆ.

15 ಅಂತಿಮ ಸ್ಪರ್ಧಿಗಳೊಂದಿಗೆ ಆರಂಭವಾದ ಈ ಪ್ರಕ್ರಿಯೆಯಲ್ಲಿ, ಅಂತಿಮವಾಗಿ 10 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಈ 10 ಸ್ಪರ್ಧಿಗಳು ಕಿಚ್ಚ ಸುದೀಪ್‌ ಅವರ ಮುಂದೆ ಮತ್ತೊಂದು ಸುತ್ತಿನ ಪರೀಕ್ಷೆ ಎದುರಿಸಲಿದ್ದಾರೆ. ಅಲ್ಲಿ ಸುದೀಪ್‌ ಅವರು ವೋಟಿಂಗ್‌ ಆಧಾರದ ಮೇಲೆ ಮೂವರನ್ನ ಮಾತ್ರ ಬಿಗ್‌ ಬಾಸ್‌ ಮನೆಗೆ ಗೃಹಪ್ರವೇಶ ಮಾಡಿಸುತ್ತಾರೆ. ಉಳಿದ 8 ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ.

ಸುದೀಪ್ ಅವರು 'ಕ್ಯಾಪ್ಟನ್' ಆಗಿ ಕಾರ್ಯನಿರ್ವಹಿಸುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 13', ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ SBI Good News : 12,000 ಸಿಬ್ಬಂದಿ ನೇಮಕ, 250 ಶಾಖೆ ತೆರೆಯುವುದಾಗಿ ಘೋಷಣೆ

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್‌ ಕ್ರಿಯೇಟರ್ಸ್‌ ಹಾವಳಿ: ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?