Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

ಕಳೆದ ವಾರ ಅಮೆರಿಕ ನಡೆಸಿದ ದಾಳಿಗಳ ಬಳಿಕ ಆರಂಭವಾದ ಸಂಘರ್ಷ ಇದೀಗ ಆರನೇ ತಿಂಗಳಿಗೆ ಕಾಲಿಟ್ಟಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
A US airstrike on an IRGC crude oil carrier off the coast of Iran's Kharg Island, Sept. 05, 2026.
ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿರುವುದು.
Updated on

ಟೆಹ್ರಾನ್: ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳಿಗೆ ಅಮೆರಿಕ ಭೀಕರ ತಿರುಗೇಟು ನೀಡಿದೆ. ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕಾ ಪಡೆಗಳು ಕಾರ್ಯಾಚರಣೆ ನಡೆಸಿ ಇರಾನ್‌ನ ಎರಡು ಪ್ರಮುಖ ತೈಲ ಟ್ಯಾಂಕರ್‌ಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ್ದು, ಮತ್ತೊಂದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.

ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದ್ದು, ದಾಳಿಗೊಳಗಾದ ನೌಕೆಗಳನ್ನು ಎಂ/ಟಿ ಡೌನಿ (M/T Downy), ಎಂ/ಟಿ ಸ್ಟಾರ್ಕ್ 1 (M/T Stark 1) ಮತ್ತು ಎಂ/ಟಿ ಕೈಲೋ (M/T Kylo) ಎಂದು ಗುರುತಿಸಲಾಗಿದೆ.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ಅಮೆರಿಕದ ದಾಳಿಗಳು ಮುಂದುವರಿದರೆ ಇನ್ನಷ್ಟು ಕಠಿಣ ಪ್ರತೀಕಾರ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಕಳೆದ ವಾರ ಅಮೆರಿಕ ನಡೆಸಿದ ದಾಳಿಗಳ ಬಳಿಕ ಆರಂಭವಾದ ಸಂಘರ್ಷ ಇದೀಗ ಆರನೇ ತಿಂಗಳಿಗೆ ಕಾಲಿಟ್ಟಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.

ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಮುಂದುವರಿಸಿದ್ದು, ಇರಾನ್‌ನ ಬಂದರುಗಳ ವಿರುದ್ಧ ಅಮೆರಿಕ ಪ್ರತಿಬಂಧಕ ಕ್ರಮಗಳನ್ನು ತೀವ್ರಗೊಳಿಸಿದೆ.

ಇದರ ನಡುವೆಯೇ ಅಮೆರಿಕ ಇರಾನ್‌ನ ಆರ್ಥಿಕತೆಯ ಮೇಲಿನ ಒತ್ತಡವನ್ನೂ ಹೆಚ್ಚಿಸಿದೆ. ಇರಾನ್‌ನೊಂದಿಗೆ ಹಣಕಾಸು ಸಂಬಂಧ ಹೊಂದಿರುವ ಸಂಸ್ಥೆಗಳ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿರುವ ವಾಷಿಂಗ್ಟನ್, ಆ ಮೂಲಕ ಇರಾನ್ ಅನ್ನು ಮತ್ತಷ್ಟು ಪ್ರತ್ಯೇಕಿಸಿ ಶರಣಾಗುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದೆ.

A US airstrike on an IRGC crude oil carrier off the coast of Iran's Kharg Island, Sept. 05, 2026.
‘ಒಂದು ಹನಿ ತೈಲವೂ ರಫ್ತಾಗಲ್ಲ': ಅಮೆರಿಕಾ 'ಎಕನಾಮಿಕ್ ಡಿ-ಡೇ'ಗೆ ಇರಾನ್ ತಿರುಗೇಟು; ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡುವುದಾಗಿ ಬೆದರಿಕೆ..!

ಮೂರು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC)ಗೆ ಸಂಬಂಧಿಸಿದ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇರಾನ್ ಸೇನೆಯ ಅತ್ಯಂತ ಪ್ರಭಾವಶಾಲಿ ಘಟಕವಾದ IRGC, ಅಮೆರಿಕದ ಯುದ್ಧನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ವಿಫಲವಾಗಿ ಯತ್ನಿಸಿತ್ತು ಎಂದು CENTCOM ಆರೋಪಿಸಿದೆ.

ಇರಾನ್ ನಡೆಸಿದ ವಿಫಲ ದಾಳಿಗಳ ಬಳಿಕ, ಖಾರ್ಗ್ ದ್ವೀಪದ ಕರಾವಳಿಯಲ್ಲಿ M/T Downy ಹಾಗೂ ಜಾಸ್ಕ್ ಸಮೀಪ M/T Stark 1 ಎಂಬ IRGCಗೆ ಸೇರಿದ ಕಚ್ಚಾ ತೈಲ ಸಾಗಣೆ ಹಡಗುಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ" ಎಂದು CENTCOM ಹೇಳಿದೆ.

ಇದಲ್ಲದೆ, ಗಲ್ಫ್ ಆಫ್ ಓಮನ್‌ನಲ್ಲಿದ್ದ ಖಾಲಿ ಕಚ್ಚಾ ತೈಲ ಸಾಗಣೆ ಹಡಗು M/T Kylo ಮೇಲೂ ದಾಳಿ ನಡೆಸಲಾಗಿದೆ. ಹಡಗಿನ ಸಿಬ್ಬಂದಿಗೆ ಹಡಗು ತೊರೆಯುವಂತೆ ಸೂಚಿಸಿದ ಬಳಿಕ, ಅದರ ಪ್ರಮುಖ ಭಾಗಗಳಿಗೆ ಹಲವು ಬಾರಿ ದಾಳಿ ನಡೆಸಿ ಹಡಗನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತೆ ಮಾಡಲಾಗಿದೆ ಎಂದು ಅಮೆರಿಕ ತಿಳಿಸಿದೆ.

CENTCOM ಬಿಡುಗಡೆ ಮಾಡಿದ ವಿಡಿಯೊದಲ್ಲಿ ಕ್ಷಿಪಣಿಗಳು ಹಡಗುಗಳಿಗೆ ಅಪ್ಪಳಿಸಿದ ಬಳಿಕ ಭಾರಿ ಬೆಂಕಿಯ ಜ್ವಾಲೆಗಳು ಮತ್ತು ಹೊಗೆ ಕಾಣಿಸಿಕೊಂಡಿರುವುದು ಕಂಡು ಬಂದಿದೆ.

ಈ ಮೂರು ಹಡಗುಗಳು IRGC ಹಾಗೂ ಅದರ ಪ್ರಾದೇಶಿಕ ಬೆಂಬಲಿಗ ಸಂಘಟನೆಗಳಿಗೆ ಹಣಕಾಸು ಒದಗಿಸುವ ಬಹುಕೋಟಿ ಡಾಲರ್‌ಗಳ "ನೆರಳು ಜಾಲ"ದ ಭಾಗವಾಗಿದ್ದವು ಎಂದು ಅಮೆರಿಕ ಆರೋಪಿಸಿದೆ.

CENTCOM ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರು ಮಾತನಾಡಿ, "ನಮ್ಮ ಎರಡು ಹಡಗುಗಳ ಮೇಲೆ ಗುಂಡು ಹಾರಿಸಿದರೆ, ನಿಮ್ಮ ಮೂರು ಹಡಗುಗಳನ್ನು ನಾಶಪಡಿಸುವ ಮೂಲಕ ಇನ್ನಷ್ಟು ದೊಡ್ಡ ಆರ್ಥಿಕ ಬೆಲೆ ತೆರಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಅಮೆರಿಕದ ದಾಳಿಗೆ ಇರಾನ್ ಆಕ್ರೋಶ

ಅಮೆರಿಕದ ದಾಳಿಯನ್ನು ಇರಾನ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಇರಾನ್‌ನ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನಡೆಸಿದ ದಾಳಿ "ಕಾನೂನುಬಾಹಿರ ಮತ್ತು ಆಕ್ರಮಣಕಾರಿ ಕ್ರಮ" ಎಂದು ಅದು ಹೇಳಿದೆ.

ದಕ್ಷಿಣ ಇರಾನ್‌ನ ಹೋರ್ಮೊಜ್ಗಾನ್ ಪ್ರಾಂತ್ಯದ ಜಾಸ್ಕ್‌ನಲ್ಲಿರುವ ಇರಾನ್ ಸರ್ಕಾರಿ ಟಿವಿ ವರದಿಗಾರರ ಪ್ರಕಾರ, ದಾಳಿಗೊಳಗಾದ ಟ್ಯಾಂಕರ್‌ಗಳಲ್ಲಿ ಒಂದು ಖಾಲಿಯಾಗಿತ್ತು. ಮತ್ತೊಂದು ಹಡಗು ತೈಲ ಸಾಗಿಸುತ್ತಿತ್ತು. ಹಡಗುಗಳ ಸಿಬ್ಬಂದಿಯನ್ನು ಲೈಫ್‌ಬೋಟ್‌ಗಳ ಮೂಲಕ ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು.

ಖಾರ್ಗ್ ದ್ವೀಪದಲ್ಲಿರುವ ಮತ್ತೊಬ್ಬ ಸರ್ಕಾರಿ ಟಿವಿ ವರದಿಗಾರ, ಅಲ್ಲಿನ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕದ ದಾಳಿಗಳು ಮುಂದುವರಿದರೆ, ಅಮೆರಿಕದ ಯುದ್ಧನೌಕೆಗಳ ವಿರುದ್ಧ ಇರಾನ್ ನಡೆಸುವ ಪ್ರತೀಕಾರ "ಹಿಂದಿಗಿಂತಲೂ ಹೆಚ್ಚು ತೀವ್ರವಾಗಿರಲಿದೆ ಮತ್ತು ಅದು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ" ಎಂದು ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಸೇನಾ ಕಮಾಂಡ್ ಎಚ್ಚರಿಸಿದೆ.

A US airstrike on an IRGC crude oil carrier off the coast of Iran's Kharg Island, Sept. 05, 2026.
ಮತ್ತೊಂದು ಮಹಾಯುದ್ಧ?: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

‘ಇದು ದೊಡ್ಡ ವಿಷಯವೇ ಅಲ್ಲ’ ಎಂದ ಟ್ರಂಪ್

ಆರು ತಿಂಗಳ ಸಂಘರ್ಷದ ತೀವ್ರತೆಯನ್ನು ಕಡಿಮೆ ಮಾಡಿ ಬಿಂಬಿಸಲು ಟ್ರಂಪ್ ಆಡಳಿತ ಪ್ರಯತ್ನಿಸುತ್ತಿದೆ. ಅಮೆರಿಕದಲ್ಲಿ ಈ ಸಂಘರ್ಷಕ್ಕೆ ಜನಬೆಂಬಲ ಕಡಿಮೆಯಾಗುತ್ತಿರುವ ನಡುವೆಯೇ ಮುಂಬರುವ ಮಧ್ಯಂತರ ಚುನಾವಣೆಗಳು ಆಡಳಿತದ ಮೇಲೆ ಒತ್ತಡ ಹೆಚ್ಚಿಸಿವೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇತ್ತೀಚೆಗೆ, "ನಾನು ಇದನ್ನು ಯುದ್ಧ ಎಂದು ಕರೆಯುವುದಿಲ್ಲ" ಎಂದು ಹೇಳಿದ್ದರು. ಸದ್ಯ ಯಾವುದೇ ಸಕ್ರಿಯ ಗುಂಡಿನ ದಾಳಿ ನಡೆಯುತ್ತಿಲ್ಲ ಎಂದೂ ಅವರು ಹೇಳಿಕೊಂಡಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಶುಕ್ರವಾರ ವ್ಯಾನ್ಸ್ ಅವರ ಹೇಳಿಕೆಯನ್ನು ಬೆಂಬಲಿಸಿ, ಇರಾನ್‌ನೊಂದಿಗಿನ ಯುದ್ಧವನ್ನು "ಸಣ್ಣ ವಿಷಯ" ಎಂದು ಬಣ್ಣಿಸಿದ್ದರು. "ಇದು ದೊಡ್ಡ ವಿಷಯವೇನಲ್ಲ" ಎಂದು ಅವರು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಝಾಯಿ, ಅಮೆರಿಕದ ವಿರುದ್ಧ ಇರಾನ್ "ಹೊಸ ತಂತ್ರಗಾರಿಕೆ" ಅಳವಡಿಸಿಕೊಂಡಿದ್ದು, ಅದು ಅಮೆರಿಕದ ಅಡಿಪಾಯವನ್ನೇ ಅಲುಗಾಡಿಸಲಿದೆ ಎಂದು ಎಚ್ಚರಿಸಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ಹಿಡಿತವನ್ನು ದುರ್ಬಲಗೊಳಿಸಲು ಅಮೆರಿಕ ನಿರಂತರವಾಗಿ ಒತ್ತಡ ಹೇರುತ್ತಿದೆ. ಯುದ್ಧಕ್ಕೂ ಮುನ್ನ ಜಗತ್ತಿನ ಸುಮಾರು ಐದನೇ ಒಂದು ಭಾಗದಷ್ಟು ತೈಲ ಪೂರೈಕೆ ಈ ಪ್ರಮುಖ ಜಲಮಾರ್ಗದ ಮೂಲಕ ಸಾಗುತ್ತಿತ್ತು.

ಆಯಕಟ್ಟಿನ ಈ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳ ಬಳಿಕ ಜುಲೈನಲ್ಲಿ ಜಾರಿಯಲ್ಲಿದ್ದ ದುರ್ಬಲ ಕದನ ವಿರಾಮ ಕುಸಿದಿತ್ತು.

ಇತ್ತೀಚಿನ ವಾರಗಳಲ್ಲಿ ಟ್ರಂಪ್ ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಾರ್ವಭೌಮತ್ವ ಸಾಧಿಸುವ ಬೆದರಿಕೆಯನ್ನೂ ಹಲವು ಬಾರಿ ಹಾಕಿದ್ದಾರೆ. ಅದನ್ನು "ಹೊಸ ಅಮೆರಿಕದ ಪ್ರದೇಶ" ಎಂದು ಗುರುತಿಸಿರುವ ನಕ್ಷೆಯೊಂದನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಹಾರ್ಮುಜ್ ಮೂಲಕ ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ಇರಾನ್ ನಿಲ್ಲಿಸುವವರೆಗೆ ಅಮೆರಿಕವು ತೆಹ್ರಾನ್ ಜೊತೆ ಮಾತುಕತೆ ಪುನರಾರಂಭಿಸುವುದಿಲ್ಲ ಎಂದು ವ್ಯಾನ್ಸ್ ಕೂಡ ಹೇಳಿದ್ದಾರೆ.

ಆದರೆ, ಇಂಧನ ಬೆಲೆ ಏರಿಕೆ ಮುಂಬರುವ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಆತಂಕದ ನಡುವೆ, ಹೋರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಇದೀಗ ಯುದ್ಧಕ್ಕೂ ಮುನ್ನದ ಮಟ್ಟಕ್ಕೆ ಮರಳುತ್ತಿದೆ ಎಂಬ ಸಂದೇಶವನ್ನು ಅಮೆರಿಕ ಆಡಳಿತ ನೀಡುತ್ತಿದೆ.

"ಹಾರ್ಮುಜ್ ಜಲಸಂಧಿಯ ಮೇಲಿನ ಅವರ ನಿಯಂತ್ರಣ ಪರಿಣಾಮಕಾರಿಯಾಗಿ ಕೊನೆಗೊಂಡಿದೆ" ಎಂದು ವ್ಯಾನ್ಸ್ ಗುರುವಾರ ಇರಾನ್ ಕುರಿತು ಹೇಳಿದ್ದರು.

ಆರ್ಥಿಕ ಒತ್ತಡ ಹೆಚ್ಚಿಸಿದ ಅಮೆರಿಕ

ಇತ್ತೀಚಿನ ಸಂಘರ್ಷಕ್ಕೂ ಮುನ್ನ ಅಮೆರಿಕ ಸೇನಾ ಕಾರ್ಯಾಚರಣೆಗಳ ಬದಲು ಇರಾನ್ ವಿರುದ್ಧ ಆರ್ಥಿಕ ಸಮರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಕಂಡುಬಂದಿತ್ತು.

ಶುಕ್ರವಾರ ಅಮೆರಿಕದ ಖಜಾನೆ ಇಲಾಖೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳೊಂದಿಗಿನ ಸಂಪರ್ಕದ ಆರೋಪದ ಮೇಲೆ ಟರ್ಕಿಯ ಬ್ಯಾಂಕ್‌ವೊಂದರ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತು.

ಇದಕ್ಕೂ ಮುನ್ನ ಪ್ರಮುಖ ಈಜಿಪ್ಟ್ ಬ್ಯಾಂಕ್‌ನ ಯುಎಇ ಕಾರ್ಯಾಚರಣೆಗಳನ್ನು ಅಮೆರಿಕದ ಹಣಕಾಸು ವ್ಯವಸ್ಥೆಯಿಂದ ದೂರವಿಡುವ ಕ್ರಮವನ್ನೂ ವಾಷಿಂಗ್ಟನ್ ಕೈಗೊಂಡಿತ್ತು.

ಇರಾನ್‌ನ ಮೇಲೆ "ಆರ್ಥಿಕ ಉಸಿರುಗಟ್ಟಿಸುವಿಕೆ" ತಂತ್ರ ಅನುಸರಿಸುವ ಯೋಜನೆಯನ್ನು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈಗಾಗಲೇ ವಿವರಿಸಿದ್ದಾರೆ. ಅಮೆರಿಕದ ಒತ್ತಡ ಅಭಿಯಾನಕ್ಕೆ ಬೆಂಬಲ ನೀಡದ ರಾಷ್ಟ್ರಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com