ರಾಕಿಂಗ್ ಸ್ಟಾರ್ ಯಶ್‌ 
ಸಿನಿಮಾ ಸುದ್ದಿ

'ಚಿಂತೆ ಮಾಡುತ್ತ ಕೂರಬೇಡಿ'; ಟಾಕ್ಸಿಕ್ ಸೋಲು ಒಪ್ಪಿಕೊಂಡ ಯಶ್‌: ಆಪ್ತನ ಬಳಿ ರಾಕಿಂಗ್ ಸ್ಟಾರ್ ಹೇಳಿದ್ದೇನು?

ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬಾಕ್ಸ್‌ಆಫೀಸ್‌ ನಲ್ಲಿ ಯಶಸ್ಸು ಕಂಡಿಲ್ಲ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ 15ನೇ ದಿನವಾದ ಬುಧವಾರವೂ ಥಿಯೇಟ್ರಿಕಲ್ ಪ್ರದರ್ಶನ ಮುಂದುವರೆಸಿದೆ. ಆದರೆ ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಸಿನಿಮಾ ಭರ್ಜರಿ ಓಪನಿಂಗ್ ಪಡೆದರೂ, ಬಳಿಕ ಮಿಶ್ರ ಪ್ರತಿಕ್ರಿಯೆಯಿಂದ ಕಲೆಕ್ಷನಲ್ಲಿ ಕುಸಿತವಾಗಿದೆ.

ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬಾಕ್ಸ್‌ಆಫೀಸ್‌ ನಲ್ಲಿ ಯಶಸ್ಸು ಕಂಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.

ಟಾಕ್ಸಿಕ್ ಸೋಲಿನ ಬಗ್ಗೆ ಯಶ್ ಹೇಳಿದ್ದೇನು?

ಟಾಕ್ಸಿಕ್ ಸೋಲಿನ ಬಗ್ಗೆ ಮತ್ತು ಟಾಕ್ಸಿಕ್ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆದ ಬಗ್ಗೆ ನಟ ಯಶ್ ಅವರು ತಮ್ಮ ಆಪ್ತ ಗೆಳೆಯ, ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಚಿಂತೆ ಮಾಡುತ್ತ ಕೂರಬೇಡಿ ಎಂದು ಯಶ್ ಅವರು ತಮ್ಮ ತಂಡಕ್ಕೆ ಧೈರ್ಯ ತುಂಬಿದ್ದಾರೆ. ಯಾರೂ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈಗ ಎಲ್ಲವನ್ನೂ ಪ್ರೇಕ್ಷಕರ ತೀರ್ಪಿಗೆ ಬಿಟ್ಟು ಬಿಡೋಣ. ನಾವು ಅತ್ಯಂತ ಪ್ರಾಮಾಣಿಕತೆಯಿಂದ ಸಿನಿಮಾ ಮಾಡಿದ್ದೇವೆ ಮತ್ತು ಅದನ್ನು ಜನರಿಗೆ ತಲುಪಿಸಿದ್ದೇವೆ. ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾ ಕೂರಬೇಡಿ. ಮುಂದೆ ನಮಗಾಗಿ ಸಾಕಷ್ಟು ಕೆಲಸಗಳಿವೆ. ಮುಂದಿನ ಪ್ರಾಜೆಕ್ಟ್ ಕಡೆಗೆ ಗಮನ ಹರಿಸಿ ಎಂದು ಹೇಳಿರುವುದಾಗಿ ಜೈದೇವ್ ಮೋಹನ್ ತಿಳಿಸಿದ್ದಾರೆ.

ನಟ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಿಷಭ್ ಶೆಟ್ಟಿ ಸೇರಿದಂತೆ ಹಲವು, ನಟರು ಮತ್ತು ನಿರ್ದೇಶಕರು ಯಶ್ ಅವರ ಧೈರ್ಯವನ್ನು ಮೆಚ್ಚಿರುವುದಾಗಿ ಮೋಹನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕನ ರಾಜೀನಾಮೆ; ಸುರಕ್ಷತಾ ಕಾರ್ಯನಿರ್ವಾಹಕರಿಂದಲೂ ಬೆಂಬಲ!

ಸೆಪ್ಟೆಂಬರ್ 12 ರಂದು ತಮಿಳುನಾಡಿನಾದ್ಯಂತ DMK ಪ್ರತಿಭಟನೆ! ಕಾರಣವೇನು ಗೊತ್ತಾ?

'ದೊಡ್ಡ ತಂಡ ನಿಜ, ಆದರೆ ಅಸಾಧ್ಯವೇನಲ್ಲ'.. 'ಏಷ್ಯಾಕಪ್ ಗೆಲ್ಲಬೇಕಾದರೆ ಭಾರತವನ್ನು ಮಣಿಸಲೇಬೇಕು'

ಸಂಘರ್ಷ ಮತ್ತಷ್ಟು ತೀವ್ರ: ಇಂಧನ ಟ್ಯಾಂಕರ್ ಗಳ ಮೇಲಿನ ದಾಳಿಗೆ ಸೇಡು, ಅಮೆರಿಕದ Submarine ಸೀಜ್ ಮಾಡಿದ ಇರಾನ್!