ಸಿನಿಮಾ ಸುದ್ದಿ

ರಾಮಾಯಣದ ಬಳಿಕ ಸಾಗರ್ ಪಿಕ್ಚರ್ಸ್‌ನಿಂದ ಮತ್ತೊಂದು ಸಾಹಸ: 7 ಭಾಗಗಳಲ್ಲಿ ಬರಲಿದೆ 'ಶ್ರೀಮದ್ಭಾಗವತಂ'!

ಭಾರತೀಯ ಸಿನಿರಂಗದಲ್ಲಿ ಪೌರಾಣಿಕ ಕಥೆಗಳಿಗೆ ಹೊಸ ರೂಪ ನೀಡಿದ್ದ ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್, ಇದೀಗ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಿರುತೆರೆಯಲ್ಲ, ನೇರವಾಗಿ ಬಿಗ್ ಸ್ಕ್ರೀನ್‌ನಲ್ಲಿ ‘ಶ್ರೀಮದ್ಭಾಗವತಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಭಾರತೀಯ ಸಿನಿರಂಗದಲ್ಲಿ ಪೌರಾಣಿಕ ಕಥೆಗಳಿಗೆ ಹೊಸ ರೂಪ ನೀಡಿದ್ದ ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್, ಇದೀಗ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಿರುತೆರೆಯಲ್ಲ, ನೇರವಾಗಿ ಬಿಗ್ ಸ್ಕ್ರೀನ್‌ನಲ್ಲಿ ‘ಶ್ರೀಮದ್ಭಾಗವತಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಶ್ರೀಮದ್ಭಾಗವತ ಮಹಾಪುರಾಣದಿಂದ ಪ್ರೇರಣೆ ಪಡೆದ ಈ ಚಿತ್ರವನ್ನು ಸಾಮಾನ್ಯ ಸಿನಿಮಾದಂತೆ ಒಂದೇ ಭಾಗದಲ್ಲಿ ಮುಗಿಸುವ ಬದಲು ಏಳು ಭಾಗಗಳ ಭವ್ಯ ಸಿನಿಮ್ಯಾಟಿಕ್ ಭಾಗಾವಾಗಿ ರೂಪಿಸಲಾಗುತ್ತಿದೆ. ಹೀಗಾಗಿ ಚಿತ್ರದ ಘೋಷಣೆಯಲ್ಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ಸಾಗರ್ ಪಿಕ್ಚರ್ಸ್ ಎಂದರೆ ಮೊದಲು ನೆನಪಾಗುವುದು ‘ರಾಮಾಯಣ’. ಭಾರತೀಯ ದೂರದರ್ಶನದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಈ ಪೌರಾಣಿಕ ಕೃತಿ ಸಾಗರ್ ಕುಟುಂಬದ ಹೆಸರನ್ನು ಮನೆಮನೆಗೂ ತಲುಪಿಸಿತ್ತು. ಇದೀಗ ಹಲವು ವರ್ಷಗಳ ಬಳಿಕ ಅದೇ ಪೌರಾಣಿಕ ಕಥನ ಪರಂಪರೆ ಹೊಸ ತಲೆಮಾರಿನ ಸಿನಿಮ್ಯಾಟಿಕ್ ದೃಷ್ಟಿಕೋನದೊಂದಿಗೆ ಮರಳುತ್ತಿದೆ.

ಏಳು ಭಾಗಗಳಲ್ಲಿ ಭವ್ಯ ಸಿನಿಮಾ!

ಶ್ರೀಮದ್ಭಾಗವತದ ವಿಶಾಲ ಕಥಾ ಪ್ರಪಂಚವನ್ನು ಒಂದೇ ಸಿನಿಮಾದಲ್ಲಿ ಸೀಮಿತಗೊಳಿಸದೆ. ಏಳು ಭಾಗಗಳಾಗಿ ಕಟ್ಟಿಕೊಡುವ ಯೋಜನೆ ಈ ಪ್ರಾಜೆಕ್ಟ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು. ಕಥೆಯ ವಿವಿಧ ಪಾತ್ರಗಳು, ಘಟನೆಗಳು ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ವಿಸ್ತಾರವಾಗಿ ತೋರಿಸಲು ಈ ಮಾದರಿ ಅವಕಾಶ ನೀಡಲಿದೆ. ಹೀಗಾಗಿ ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲದೆ, ದೊಡ್ಡ ಸಿನಿಮಾಟಿಕ್ ಯೂನಿವರ್ಸ್ ಆಗಿ ರೂಪುಗೊಳ್ಳುವ ಸಾಧ್ಯತೆಯಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಸಾರಥ್ಯವನ್ನು ಆಕಾಶ್ ಸಾಗರ್ ಚೋಪ್ರಾ ಮತ್ತು ಅಮೃತ್ ಸಾಗರ್ ವಹಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಾಲನೆ ದೊರೆತಿರುವುದು ಸಿನಿಮಾದ ಪ್ರಮಾಣದ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ. ಭವ್ಯ ಸೆಟ್‌ಗಳು, ದೊಡ್ಡ ಮಟ್ಟದ ಪ್ರೊಡಕ್ಷನ್, ಆಧುನಿಕ VFX ಮತ್ತು ಅತ್ಯಾಧುನಿಕ ಸಿನಿಮಾಟಿಕ್ ತಂತ್ರಜ್ಞಾನಗಳ ಮೂಲಕ ಶ್ರೀಮದ್ಭಾಗವತದ ಜಗತ್ತನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಡೆಯುತ್ತಿದೆ. ಇದರ ಜೊತೆಗೆ Game of Thrones ಸೇರಿದಂತೆ ಜಾಗತಿಕ ಮಟ್ಟದ ಚಿತ್ರಗಳು ಮತ್ತು ಸರಣಿಗಳಲ್ಲಿ ಕೆಲಸ ಮಾಡಿರುವ ತಾಂತ್ರಿಕ ಪರಿಣತರ ತಂಡವೂ ಈ ಸಿನಿಮಾದಲ್ಲಿ ಕಾರ್ಯನಿರ್ವಹಿಸಿರುವುದು ಚಿತ್ರದ ದೃಶ್ಯ ವೈಭವದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!

ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಗೆ ಮೋದಿ ಹೇಳಿದ್ದೇನು? MEA ಹೇಳಿದ್ದಿಷ್ಟು...

ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ

ಡ್ರಾಮಾ ಬಿಡಿ, ಎರಡು ವಾರದಲ್ಲಿ 2 ಕೋಟಿ ರೂ. ಠೇವಣಿ ಇಡಿ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ

'ಯಾರನ್ನೂ ಸ್ಟಾಪ್ ಮಾಡೋಕೆ ಆಗಲ್ಲ, ಯಾವ ದಾಖಲೆ ಬೇಕಾದ್ರೂ ಬಿಡುಗಡೆ ಮಾಡಿಕೊಳ್ಳಲಿ: ಸಿಎಂ ಶಿವಕುಮಾರ್; Video