ಸಂತೋಷ್ ವರ್ಕಿ - ಮಮಿತಾ ಬೈಜು 
ಸಿನಿಮಾ ಸುದ್ದಿ

'ನಟಿ ಮಮಿತಾ ಬೈಜುರನ್ನೇ ಮದುವೆಯಾಗುತ್ತೇನೆ, ಬೇರೆ ಮಹಿಳೆಗೆ ಜಾಗವಿಲ್ಲ, ವಯಸ್ಸಿನ ಅಂತರ ಇರಬಹುದು, ಆದ್ರೆ...'

ನಟಿ ಮಮಿತಾ ಬೈಜು ಅವರ ಮೇಲಿನ ಪ್ರೀತಿ ಮತ್ತು ಅವರನ್ನು ಮದುವೆಯಾಗುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. "ಐ ಲವ್ ಮಮಿತಾ ಬೈಜು."

ಸಿನಿಮಾಗಳ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಂಗ್ಯಾತ್ಮಕ ಹಾಗೂ ವಿವಾದಾತ್ಮಕ ವಿಮರ್ಶೆಗಳಿಂದ ಸದ್ದು ಮಾಡುವ ಸಿನಿಮಾ ಕ್ರಿಟಿಕ್ ಸಂತೋಷ್ ವರ್ಕಿ ಅವರು ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಸಾಮಾಜಿಕ ಮಾಧ್ಯಮಕ್ಕೆ ಭಾರೀ ಚರ್ಚೆಗೆ ಕಾರಣವಾಗಿದೆ.

ಸಂತೋಷ್ ವರ್ಕಿ ಅವರು ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ನಟಿಸಿದ್ದ 'ಆರಟ್ಟು' ಸಿನಿಮಾದ ವಿಮರ್ಶೆಯಿಂದ ಒಂದೇ ಬಾರಿಗೆ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಅಂದಿನಿಂದ ಅವರನ್ನು ಎಲ್ಲರೂ 'ಆರಟ್ಟು ಅನ್ನನ್' ಎಂದು ಕರೆಯುತ್ತಿದ್ದಾರೆ. ಯೂಟ್ಯೂಬ್‌ನಲ್ಲಿನ ಅವರ ವಿಡಿಯೋಗಳು ಹಾಗೂ ಇನ್‌ಸ್ಟಾಗ್ರಾಂನಲ್ಲಿನ ಮೀಮ್ಸ್‌ಗಳು ಕೂಡ ಸಾಕಷ್ಟು ಜನಪ್ರಿಯವಾಗಿವೆ.

ಇದೀಗ ಮಲಯಾಳಂ ನಟಿ ಮಮಿತಾ ಬೈಜು ಕುರಿತು ಸಂತೋಷ್ ವರ್ಕಿ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿವೆ.

ನಟಿ ಮಮಿತಾ ಬೈಜು ಅವರ ಮೇಲಿನ ಪ್ರೀತಿ ಮತ್ತು ಅವರನ್ನು ಮದುವೆಯಾಗುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. "ಐ ಲವ್ ಮಮಿತಾ ಬೈಜು. ನಾನು ಅವರನ್ನು ಮದುವೆಯಾಗಲು ಬಯಸುತ್ತೇನೆ. ಅವರು ನಟಿಸಿರುವ 'ಬೆತ್ಲೆಹೆಂ ಕುಟುಂಬ ಯೂನಿಟ್' ಸಿನಿಮಾವನ್ನು ಈಗ ಮೂರನೇ ಬಾರಿ ನೋಡುತ್ತಿದ್ದೇನೆ. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಇರಬಹುದು. ಆದರೆ ನಾನು ಅವರ ಮೋಹಕ್ಕೆ ಸಿಲುಕಿದ್ದೇನೆ. ಅವರನ್ನು ಮದುವೆಯಾಗಲು ಬಯಸುತ್ತೇನೆ. ಇನ್ನು ಮುಂದೆ ನನ್ನ ಜೀವನದಲ್ಲಿ ಮಮಿತಾ ಹೊರತುಪಡಿಸಿ ಬೇರೆ ಯಾವುದೇ ಮಹಿಳೆಗೆ ಜಾಗವಿಲ್ಲ. ನಾನು ಅವರನ್ನು ಅಷ್ಟರಮಟ್ಟಿಗೆ ಇಷ್ಟಪಡುತ್ತೇನೆ" ಎಂದು ಫಿಲ್ಮ್ ಕ್ರಿಟಿಕ್ ಸಂತೋಷ್ ವರ್ಕಿ ತಮ್ಮದೇ ಶೈಲಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂತೋಷ್ ವರ್ಕಿ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ಯುದ್ಧದ ಕಿಡಿ ಹೊತ್ತಿಸಲು ಬಂದಿತ್ತಾ ಪಾಕ್ ನೌಕಾಪಡೆ ಹಡಗು? ಭಾರತೀಯ ಕ್ಯಾಪ್ಟನ್ ಚಾಣಾಕ್ಷತನದಿಂದ ತಪ್ಪಿದ ಭಾರೀ ದುರಂತ!

ಮಕ್ಕಳೊಂದಿಗೆ ತನ್ನ ಜಾಹೀರಾತು ನೋಡಿದಾಗ ಮುಜುಗರಕ್ಕೊಳಗಾದ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೆಬೋ ಬೇಸ್ತು!

D Bossಗೆ ಬಿಗ್​ ಶಾಕ್​; ಪ್ರದೋಷ್ ಮಾಫಿ ಸಾಕ್ಷಿಗೆ ಮತ್ತೆ ಕೋರ್ಟ್ ಒಪ್ಪಿಗೆ, ದರ್ಶನ್ ಅರ್ಜಿ ವಜಾ

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4 ರಷ್ಟು MDR ಶುಲ್ಕ! ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಕೆ