ರಶ್ಮಿಕಾ ಮಂದಣ್ಣ ಮತ್ತು ಎಂ,ಎಸ್ ಸುಬ್ಬುಲಕ್ಷ್ಮಿ 
ಸಿನಿಮಾ ಸುದ್ದಿ

ಸಂಗೀತ ದಿಗ್ಗಜೆ M S ಸುಬ್ಬುಲಕ್ಷ್ಮಿ ಜೀವನ ಚರಿತ್ರೆಯಲ್ಲಿ ರಶ್ಮಿಕಾ ಮಂದಣ್ಣ: ಅಧಿಕೃತ ಘೋಷಣೆ

ಈ ಮಹತ್ವದ ಪಾತ್ರಕ್ಕಾಗಿ ಹಲವು ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಈ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಖಚಿತವಾಗಿದೆ.

ಶಾಸ್ತ್ರೀಯ ಸಂಗೀತದ ದಂತಕಥೆ, ‘ಭಾರತರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಪ್ಯಾನ್ ಇಂಡಿಯಾ ಬಯೋಪಿಕ್ ಚಿತ್ರಕ್ಕೆ ಕೊನೆಗೂ ನಾಯಕಿ ಅಂತಿಮಗೊಂಡಿದ್ದಾರೆ.

ಈ ಮಹತ್ವದ ಪಾತ್ರಕ್ಕಾಗಿ ಹಲವು ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅವರೇ ಈ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಖಚಿತವಾಗಿದೆ.

ರಶ್ಮಿಕಾ ಮಂದಣ್ಣ, ತಾವೇ ಈ ಪಾತ್ರವನ್ನು ಮಾಡುತ್ತಿರುವುದಾಗಿ ಅಧಿಕೃತವಾಗಿ ಪೋಸ್ಟ್‌ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನೋತ್ಸವದ ವಿಶೇಷ ಸಂದರ್ಭದಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಜೆರ್ಸಿ’ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಧಿಕೃತ ಪ್ರಕಟಣೆಯ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅವರು ಸುಬ್ಬುಲಕ್ಷ್ಮಿ ರೂಪದಲ್ಲಿರುವ ತಮ್ಮ ಲುಕ್ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಂಗೀತ ದಿಗ್ಗಜೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ವ್ಯಕ್ತಿತ್ವ ಹಾಗೂ ಸಂಗೀತ ಸಾಧನೆಯನ್ನು ತೆರೆಯ ಮೇಲೆ ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ತೀವ್ರ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ ಮಸೂದೆಗೆ ಅಮೆರಿಕ ಸಂಸತ್ತಿನಲ್ಲಿ ಮುನ್ನಡೆ

ಶಾಲಾ ಸಹಪಾಠಿ ನೆರವಿಗೆ ಧಾವಿಸಿದ ಪ್ರಧಾನಿ ಮೋದಿ; ಬಿಜೆಪಿ ಶಾಸಕನ ಸಂಸ್ಥೆ ಶಾಮೀಲಾಗಿದ್ದ ಕೋಟ್ಯಂತರ ರೂ ಮೌಲ್ಯದ ಭೂಮಿ ವಿವಾದಕ್ಕೆ ಪರಿಹಾರ!

ಗಣಪತಿ ವಿಸರ್ಜನೆ: ಉಲ್ಟಾ ಆರತಿ ಮಾಡಿದ ಸಲ್ಮಾನ್ ಖಾನ್; ಸರಿಪಡಿಸಿದ ತಂಗಿ ಅರ್ಪಿತಾ: ವಿಡಿಯೋ ವೈರಲ್