ಕಿರಣ್ ಶಾಸ್ತ್ರಿ-ಮಂಜ 
ಸಿನಿಮಾ ಸುದ್ದಿ

ಒಂದೇ ವಾರ ಇಬ್ಬರು ಔಟ್; ಕಿರಣ್ ಶಾಸ್ತ್ರಿ-ಮಂಜಗೆ 'ಬಿಗ್' ಶಾಕ್; ಎಲಿಮಿನೇಷನ್ ಹಿಂದೆ ಭಾರೀ ಟ್ವಿಸ್ಟ್..!

ಕಿರಣ್ ಶಾಸ್ತ್ರಿ ಹಾಗೂ ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರನಡೆದಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಅಸಲಿ ಟ್ವಿಸ್ಟ್ ಇರುವುದು ಇಲ್ಲೇ. ಇಬ್ಬರೂ ಮನೆಯಿಂದ ಹೊರಬಂದಿದ್ದರೂ, ಅವರು ನಿಜವಾಗಿಯೂ ಎಲಿಮಿನೇಟ್ ಆಗಿದ್ದಾರೆಯೇ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಯಾರೂ ನಿರೀಕ್ಷಿಸದ ತಿರುವೊಂದು ಎದುರಾಗಿದೆ. ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಹೊರಬಂದಿದ್ದಾರೆ.

ಕಿರಣ್ ಶಾಸ್ತ್ರಿ ಹಾಗೂ ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರನಡೆದಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಅಸಲಿ ಟ್ವಿಸ್ಟ್ ಇರುವುದು ಇಲ್ಲೇ. ಇಬ್ಬರೂ ಮನೆಯಿಂದ ಹೊರಬಂದಿದ್ದರೂ, ಅವರು ನಿಜವಾಗಿಯೂ ಎಲಿಮಿನೇಟ್ ಆಗಿದ್ದಾರೆಯೇ ಎಂಬುದು ಇನ್ನೂ ಕುತೂಹಲ ಮೂಡಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾದ ದಿನದಿಂದಲೂ ಒಂದರ ಮೇಲೊಂದು ರೋಚಕ ತಿರುವುಗಳು ಹಾಗೂ ವಿವಾದಗಳ ಮೂಲಕ ಗಮನ ಸೆಳೆಯುತ್ತಿದೆ.

ಅದರಲ್ಲೂ ‘ಅಗ್ನಿಪರೀಕ್ಷೆ’ ಮೂಲಕ ಸಾಮಾನ್ಯ ಜನರ ಕೋಟಾದಲ್ಲಿ ದೊಡ್ಮನೆ ಪ್ರವೇಶಿಸಿರುವ ಸ್ಪರ್ಧಿಗಳ ನಡೆ, ಆಟ ಹಾಗೂ ಕಿತ್ತಾಟಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಇದೀಗ ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರಬಂದಿರುವುದು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನೂ ‘ಬಿಗ್ ಬಾಸ್’ ವಿಭಿನ್ನ ರೀತಿಯಲ್ಲಿ ನಡೆಸಿದ್ದಾರೆ. ನಾಮಿನೇಟ್ ಆಗಿದ್ದ ಸ್ಪರ್ಧಿಗಳ ಪೈಕಿ ಅವಿನಾಶ್, ವೈಷ್ಣವಿ, ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ ಅವರನ್ನು ಆಯ್ಕೆ ಮಾಡಿ, ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳುವಂತೆ ಸೂಚಿಸಲಾಯಿತು.

ಕನ್ನಡಿಯ ಮುಂದೆ ನಿಂತ ಅವಿನಾಶ್ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು. ಬಳಿಕ ವೈಷ್ಣವಿ ಕೂಡ ಕನ್ನಡಿಯ ಮುಂದೆ ನಿಂತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ವಿಶೇಷವೆಂದರೆ, ಈ ಇಬ್ಬರ ಕನ್ನಡಿಗಳೂ ಒಡೆಯಲಿಲ್ಲ. ಹೀಗಾಗಿ ಅವಿನಾಶ್ ಮತ್ತು ವೈಷ್ಣವಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ ‘ಬಿಗ್ ಬಾಸ್’, ಇಬ್ಬರನ್ನೂ ಮತ್ತೆ ಮನೆಯೊಳಗೆ ಕಳುಹಿಸಿದರು.

ಇದಾದ ಬಳಿಕ ಮಾಡ್ರನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಅವರ ಸರದಿ ಬಂದಿತು. ಇಬ್ಬರೂ ಕನ್ನಡಿಯ ಮುಂದೆ ನಿಂತು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ, ಅವರಿಬ್ಬರ ಕನ್ನಡಿಗಳೂ ಒಡೆದು ಚೂರುಚೂರಾದವು. ಕನ್ನಡಿ ಒಡೆಯುತ್ತಿದ್ದಂತೆ ಇಬ್ಬರೂ ಆಟದಿಂದ ಹೊರಬರಬೇಕಾಯಿತು. ಕಿರಣ್ ಶಾಸ್ತ್ರಿ ಭಾವುಕರಾಗಿ ಮನೆಯಿಂದ ಹೊರನಡೆದರೆ, ಮಂಜ ‘ಮತ್ತೆ ಬರ್ತೇನೆ’ ಎಂದು ಹೇಳುತ್ತಾ ಎಕ್ಸಿಟ್ ಆದರು.

ಆದರೆ, ಇಲ್ಲಿಯೇ ‘ಬಿಗ್ ಬಾಸ್’ ಆಟದ ದೊಡ್ಡ ಟ್ವಿಸ್ಟ್ ಅಡಗಿದೆ ಎನ್ನಲಾಗುತ್ತಿದೆ. ಮನೆಯ ಸದಸ್ಯರ ಎದುರು ಇಬ್ಬರನ್ನೂ ಹೊರಗೆ ಕಳುಹಿಸಲಾಗಿದ್ದರೂ, ಈ ವಾರ ಯಾವುದೇ ಅಧಿಕೃತ ಎಲಿಮಿನೇಷನ್ ನಡೆದಿಲ್ಲ.

ಇದಕ್ಕೆ ಕಾರಣ, ಮನೆಯಿಂದ ಹೊರಬಂದ ಕಿರಣ್ ಶಾಸ್ತ್ರಿ ಮತ್ತು ಮಂಜ ನೇರವಾಗಿ ಮುಖ್ಯ ವೇದಿಕೆಗೇ ಬರಲಿಲ್ಲ. ಅವರ ಎಕ್ಸಿಟ್ ಕೂಡ ಇತರ ಎಲಿಮಿನೇಟ್ ಆದ ಸ್ಪರ್ಧಿಗಳಂತಿರಲಿಲ್ಲ. ಹೀಗಾಗಿ ಇಬ್ಬರನ್ನೂ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಚರ್ಚೆ ಶುರುವಾಗಿದೆ.

ಕಳೆದ ಸೀಸನ್‌ನಲ್ಲಿಯೂ ಇದೇ ರೀತಿಯಲ್ಲಿ ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಿ, ಅಲ್ಲಿಂದಲೇ ಮನೆಯೊಳಗಿನ ಆಟವನ್ನು ವೀಕ್ಷಿಸುವ ಅವಕಾಶ ನೀಡಲಾಗಿತ್ತು. ಇದೀಗ ಕಿರಣ್ ಶಾಸ್ತ್ರಿ ಮತ್ತು ಮಂಜ ಅವರಿಗೂ ಅಂತಹ ಅವಕಾಶ ಸಿಕ್ಕಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ನಿಜವಾಗಿಯೂ ಇಬ್ಬರೂ ಸೀಕ್ರೆಟ್ ರೂಮ್‌ನಲ್ಲಿದ್ದಾರಾ? ಅಥವಾ ಇದು ‘ಬಿಗ್ ಬಾಸ್’ನ ಮತ್ತೊಂದು ಆಟದ ತಂತ್ರವೇ? ಕಿರಣ್ ಶಾಸ್ತ್ರಿ ಮತ್ತು ಮಂಜ ಅವರ ಮುಂದಿನ ಹೆಜ್ಜೆ ಏನು ಎಂಬುದಕ್ಕೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!