ಅವಿನಾಶ್ ಶತಮರ್ಷನ (ಎಲ್), ಬಿಗ್ ಬಾಸ್ ಕನ್ನಡ ಹೋಸ್ಟ್ ಸುದೀಪ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಆ ಆಟದ ವಾತಾವರಣ ನನಗೆ ಹೊಂದಿಕೆಯಾಗಲಿಲ್ಲ, ಇನ್ನು ಮುಂದೆ Bigg Boss ನೋಡಲ್ಲ: ಅವಿನಾಶ್ ಶತಮರ್ಷನ

ಬಿಗ್‌ಬಾಸ್ ಮನೆಯ ವಾತಾವರಣ ತಮ್ಮ ಸಹಜ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. “ನಾನು ಬಿಗ್‌ಬಾಸ್ ಮನೆಗೆ ಯಾವುದೇ ರೀತಿಯ ಪೂರ್ವಾಭ್ಯಾಸ ಮಾಡಿಕೊಂಡು ಹೋಗಿರಲಿಲ್ಲ. ಪೂರ್ವಾಭ್ಯಾಸ ಎನ್ನುವುದು ರಂಗಭೂಮಿಯ ನಾಟಕಗಳಿಗೆ, ನೈಜವಾಗಿರುವುದಕ್ಕೆ ಅಲ್ಲ.

ಬಿಗ್‌ಬಾಸ್ ಕನ್ನಡ ಸೀಸನ್ 13ರಿಂದ ಎಲಿಮಿನೇಟ್ ಆದ ಬಳಿಕ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಶತಮರ್ಷಣ ಅವರು ಕಾರ್ಯಕ್ರಮದಲ್ಲಿನ ತಮ್ಮ ಮೂರು ವಾರಗಳ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಬಿಗ್‌ಬಾಸ್ ಮನೆಯ ಆಟದ ಸ್ವರೂಪ ಹಾಗೂ ಅಲ್ಲಿನ ವಾತಾವರಣ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಎಲಿಮಿನೇಷನ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಬಿಗ್‌ಬಾಸ್ ಕಾರ್ಯಕ್ರಮವನ್ನು ನೋಡುವ ಯಾವುದೇ ಉದ್ದೇಶವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇನ್ನು ಮುಂದೆ ನಾನು ಖಂಡಿತವಾಗಿಯೂ ಬಿಗ್‌ಬಾಸ್ ಕಾರ್ಯಕ್ರಮವನ್ನು ನೋಡುವುದಿಲ್ಲ. ಇಂದಿನವರೆಗೂ ನಾನು ವೀಕ್ಷಕನಾಗಿ ಟಿವಿಯನ್ನೇ ಹಾಕಿ ನೋಡುವ ಅಭ್ಯಾಸ ಹೊಂದಿಲ್ಲ. ಈ ಕಾರ್ಯಕ್ರಮ ಮಾತ್ರವಲ್ಲ, ನಾನು ಧಾರಾವಾಹಿಗಳಲ್ಲಿ ನಟಿಸಿದಾಗಲೂ ಅವುಗಳನ್ನು ನೋಡುತ್ತಿರಲಿಲ್ಲ. ನಾನು ನಟಿಸಿರುವ ಸಿನಿಮಾಗಳನ್ನೂ ಒಂದೆರಡು ಬಾರಿಗಿಂತ ಹೆಚ್ಚು ನೋಡಿರುವುದು ಅಪರೂಪ” ಎಂದು ಹೇಳಿದ್ದಾರೆ.

ಬಿಗ್‌ಬಾಸ್ ಮನೆಯ ವಾತಾವರಣ ತಮ್ಮ ಸಹಜ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. “ನಾನು ಬಿಗ್‌ಬಾಸ್ ಮನೆಗೆ ಯಾವುದೇ ರೀತಿಯ ಪೂರ್ವಾಭ್ಯಾಸ ಮಾಡಿಕೊಂಡು ಹೋಗಿರಲಿಲ್ಲ. ಪೂರ್ವಾಭ್ಯಾಸ ಎನ್ನುವುದು ರಂಗಭೂಮಿಯ ನಾಟಕಗಳಿಗೆ, ನೈಜವಾಗಿರುವುದಕ್ಕೆ ಅಲ್ಲ. ನನ್ನ ಸ್ವಭಾವವನ್ನು ನಾನು ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಸಂಘರ್ಷದ ಬಗ್ಗೆಯೂ ಮಾತನಾಡಿರುವ ಅವರು, “ಅಲ್ಲಿ ಸ್ಪರ್ಧಿಗಳು ನಿಯಮಗಳನ್ನು ಪಾಲಿಸುವುದಿಲ್ಲ, ಕೆಟ್ಟ ಪದಗಳನ್ನು ಬಳಸುತ್ತಾರೆ, ಯಾರಿಗೂ ಗೌರವ ನೀಡುವುದಿಲ್ಲ, ಊಟವನ್ನೂ ಕದಿಯುತ್ತಾರೆ. ಅಂತಹ ಜನರ ನಡುವೆ ಹೇಗೆ ಬದುಕಬೇಕು? ಅಲ್ಲಿ ಯಾರೊಂದಿಗೂ ನನಗೆ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ, ಯಾರನ್ನೂ ಇಷ್ಟಪಡಲಿಲ್ಲ. ಆದರೆ, ಬಿಗ್‌ಬಾಸ್ ವೇದಿಕೆಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದಾರೆ.

ತಮ್ಮೊಂದಿಗೆ ನಿಜವಾಗಿಯೂ ಸಂಪರ್ಕ ಸಾಧಿಸಬಹುದಾದಂತಹ ಅಸಾಧಾರಣ ವ್ಯಕ್ತಿತ್ವದ ಸ್ಪರ್ಧಿಯೊಬ್ಬರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೆ ಮಾತ್ರ ಬಿಗ್‌ಬಾಸ್ ನೋಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅವಿನಾಶ್ ಅವರ ಎಲಿಮಿನೇಷನ್ ಬಳಿಕ ವೇದಿಕೆಯಲ್ಲಿ ಮಾತನಾಡಿದ ನಿರೂಪಕ ಕಿಚ್ಚ ಸುದೀಪ್, ಇಂತಹ ಕಾರ್ಯಕ್ರಮದ ಸ್ವರೂಪಕ್ಕೆ ಅವಿನಾಶ್ ಅವರ ವ್ಯಕ್ತಿತ್ವ ಮೂಲತಃ ಹೊಂದಿಕೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಈ ಮಾತನ್ನು ಅವಿನಾಶ್ ಕೂಡ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ‘ಭೀಮ’ ಖ್ಯಾತಿಯ ನಟಿ ಹಾಗೂ ಅವಿನಾಶ್ ಅವರ ಪತ್ನಿ ಪ್ರಿಯಾ ಶತಮರ್ಷನ ಅವರು ವೇದಿಕೆಯಲ್ಲಿ ಭಾವುಕರಾದರು.

ಸಂತ ಶಿಶುನಾಳ ಶರೀಫರ ತಾತ್ವಿಕ ಕೃತಿ ‘ತರವಲ್ಲ ತಗಿ ನಿನ್ನ ತಂಬೂರಿ’ಯ ಸಾಲುಗಳನ್ನು ಉಲ್ಲೇಖಿಸಿದ ಅವರು, ಆಟದ ಭಾಗವಾಗಿರುವ ತಂತ್ರಗಾರಿಕೆ ಹಾಗೂ ಕುತಂತ್ರದ ಸ್ವರೂಪಗಳು ತಮ್ಮ ಪತಿಯ ಜೀವನದ ದೃಷ್ಟಿಕೋನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

ಮರುತನಿಖೆಗೂ ಮುನ್ನ ಸೌಜನ್ಯ ಪ್ರಕರಣಕ್ಕೆ ಹಿನ್ನಡೆ: SIT ತಂಡದಿಂದ ಕೈಬಿಡುವಂತೆ ಎಎಸ್ ಪಿ ಪತ್ರ

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!