ಒಂದು ಸರಳ ಪ್ರೇಮಕಥೆ ಸ್ಟಿಲ್ 
ಸಿನಿಮಾ ವಿಮರ್ಶೆ

'ಒಂದು ಸರಳ ಪ್ರೇಮಕಥೆ' ಸಿನಿಮಾ ವಿಮರ್ಶೆ: ಟೈಟಲ್ ನಷ್ಟು 'ಸಿಂಪಲ್' ಆಗಿಲ್ಲ ಚಿತ್ರಕಥೆ!

'ಒಂದು ಸರಳ ಪ್ರೇಮಕಥೆ' ಟೈಟಲ್‌ನಷ್ಟು ಸಿಂಪಲ್ ಆಗೇನು ಇಲ್ಲ. ಫಸ್ಟ್ ಹಾಫ್ಟ್ ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತೆ. ಆದರೆ, ನಾಯಕ ಲವ್‌ಸ್ಟೋರಿ ಸರಳವಾಗಿಲ್ಲ ಅಂತ ಅನಿಸೋದು ಸೆಕೆಂಡ್ ಹಾಫ್‌ನಲ್ಲಿ.

Shilpa D

ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮೂಲಕ ಪ್ರಸಿದ್ಧರಾದ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಸಿನಿಮಾ ಬಿಡುಗಡೆಯಾಗಿದೆ. ವಿನಯ್ ರಾಜ್ ಕುಮಾರ್ ಗೆ ಸ್ವಾತಿಷ್ಟ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಟಿಸಿದ್ದಾರೆ, ಇದೊಂದು ತ್ರಿಕೋನ ಪ್ರೇಮಕಥೆ, ಸಂಗೀತ ನಿರ್ದೇಶನಕನಾಗಬೇಕೆಂಬ ಮಹತ್ವಕಾಂಕ್ಷೆ ಹೊತ್ತ ಅತಿಶಯನ ಜೀವನದಲ್ಲಿ ನಡೆಯುವ ಹಲವು ಘಟನಾವಳಿಗಳ ಸಮ್ಮಿಳಿತವೇ ಒಂದು ಸರಳ ಪ್ರೇಮಕಥೆ.

ಒಂದು ಸರಳ ಪ್ರೇಮಕಥೆ' ಟೈಟಲ್‌ನಷ್ಟು ಸಿಂಪಲ್ ಆಗೇನು ಇಲ್ಲ. ಫಸ್ಟ್ ಹಾಫ್ಟ್ ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತೆ. ಆದರೆ, ನಾಯಕನ ಲವ್‌ಸ್ಟೋರಿ ಸರಳವಾಗಿಲ್ಲ ಅಂತ ಅನಿಸೋದು ಸೆಕೆಂಡ್ ಹಾಫ್‌ನಲ್ಲಿ. ದಿಢೀರನೇ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್‌ಗಳು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತವೆ. ಜೊತೆ ಎಮೋಷನಲ್ ಸೀನ್‌ಗಳು ಕಿಕ್ ಕೊಡುತ್ತವೆ.

ಕಥೆ ಉದಯೋನ್ಮುಖ ಸಂಗೀತ ನಿರ್ದೇಶಕ ಅತಿಶಯ್ (ವಿನಯ್ ರಾಜ್‌ಕುಮಾರ್) ಸುತ್ತ ಸುತ್ತುತ್ತದೆ. ಸಂಗೀತದಲ್ಲಿ ಸಾಧನೆ ಮಾಡಬೇಕು, ದೊಡ್ಡ ಸಂಗೀತ ನಿರ್ದೇಶಕನಾಗಬೇಕು ಎಂದು ಕನಸು ಕಾಣುವ ಚಿತ್ರದ ನಾಯಕ ಅತಿಶಯ್‌. ಹಿನ್ನೆಲೆ ಗಾಯಕಿಯಾಗಬೇಕು ಎಂಬ ಕನಸಿನಲ್ಲಿರುವ ನಾಯಕಿ ಮಧುರ. ಬಾಲ್ಯದಿಂದಲೂ ಅತಿಶಯನೊಂದಿಗೆ ಬೆಳೆದು, ಆತನನ್ನು ಪ್ರೀತಿಸುವ ಅನುರಾಗ. ಈ ಮೂವರ ನಡುವಿನ ಸರಳವೆನಿಸಿದರೂ ವಿರಳವಾಗಿರುವ ಪ್ರೇಮವೇ ಚಿತ್ರದ ಒಟ್ಟಾರೆ ಜೀವಾಳ.

ಈ ಸಿನಿಮಾದ ಟೈಟಲ್ 'ಒಂದು ಸರಳ ಪ್ರೇಮ ಕಥೆ' ಎಂದಿದ್ದರೂ, ಇಲ್ಲಿರುವ ಲವ್ ಸ್ಟೋರಿ ಅಷ್ಟೇನೂ ಸರಳವಾಗಿಲ್ಲ. ಧುತ್ತನೇ ಎದುರಾಗುವ ಟ್ವಿಸ್ಟ್‌ಗಳು ಇದನ್ನು 'ಒಂದು ವಿರಳ ಪ್ರೇಮಕಥೆ' ಎನಿಸುವಂತೆಯೂ ಮಾಡಿಬಿಡುತ್ತದೆ. ವಿನಯ್ ರಾಜ್‌ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರುವ ಪಾತ್ರಗಳೆಲ್ಲವೂ ಸಾಫ್ಟ್ ಶೈಲಿಯ ಲವರ್ ಬಾಯ್ ಥರದ ಪಾತ್ರಗಳು. 'ಒಂದು ಸರಳ ಪ್ರೇಮಕಥೆ' ಸಿನಿಮಾದಲ್ಲೂ ಅದು ಮುಂದುವರಿದಿದೆ. ನಟನೆ ವಿಚಾರಕ್ಕೆ ಬಂದರೆ, ಅವರು ಸಾಕಷ್ಟು ಮಾಗಿದ್ದಾರೆ.

ನಿರ್ದೇಶಕ ಸಿಂಪಲ್‌ ಸುನಿ ಸರಳವಾದ ಕಥೆಯನ್ನು ನಗಿಸುತ್ತ ಹೇಳುತ್ತಾರೆ. ಅವರ ಹಿಂದಿನ ಸಿನಿಮಾಗಳ ಸೂತ್ರವೇ ಇಲ್ಲಿಯೂ ಇದೆ. ಕೆಲವಷ್ಟು ಕಡೆ ಮಾತು, ಸನ್ನಿವೇಶಗಳಿಂದ ನಗಿಸುವಲ್ಲಿ ಸುನಿ ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ನವಿರಾದ ಹಾಸ್ಯವಿದ್ದು ಸಿನಿಮಾ ಕೆಲವು ಕಡೆ ಬೇಸರವಾಗದಂತೆ ನೋಡಿಸಿಕೊಂಡು ಹೋಗುತ್ತದೆ. ಕೆಲವು ಕಡೆ ಅನಗತ್ಯ  ದೃಶ್ಯಗಳು ಪುನರಾವರ್ತನೆಯಾಗಿದೆ, ಚಿತ್ರದುದ್ದಕ್ಕೂ ಭಾವನೆಗಳು ಮತ್ತು ಅಭಿವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ತಿಳಿಸುವುದು ಒಂದು ಮಹತ್ವದ ಸವಾಲಾಗಿದೆ, ಆದರೆ ಸುನಿ ಈ ವಿಷಯದಲ್ಲಿ ಎಂದಿನಂತೆ ಕೌಶಲ್ಯ ಪ್ರದರ್ಶಿಸಿರುವುದು ಶ್ಲಾಘನೀಯ.

ನಾಯಕ ಅತಿಶಯನಾಗಿ ವಿನಯ್‌ ರಾಜ್‌ಕುಮಾರ್‌ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಹುಡುಗನ ಪಾತ್ರದಲ್ಲಿ ನೋಡುಗರಿಗೆ ಇಷ್ಟವಾಗುವಂತೆ ನಟಿಸಿದ್ದಾರೆ ವಿನಯ್. ಇನ್ನು, ಹೀರೋ ತಂದೆ ಪಾತ್ರ ಮಾಡಿರುವ ರಾಜೇಶ್ ನಟರಂಗ ಅವರದ್ದು ತೂಕದ ಅಭಿನಯ. ಸಾಧು ಕೋಕಿಲ ಅವರು ಈ ಸಿನಿಮಾದಲ್ಲಿ ಸಾಧು ಕೋಕಿಲ ಆಗಿಯೇ ಕಾಣಿಸಿಕೊಂಡಿದ್ದಾರೆ. ತಮ್ಮ ಹಾಸ್ಯದ ಮೂಲಕ ಮನರಂಜಿಸಿದ್ದಾರೆ. ಅನುರಾಗ ಪಾತ್ರ ಮಾಡಿರುವ ನಟಿ ಸ್ವಾದಿಷ್ಟಗೆ ಸಾಕಷ್ಟು ಸ್ಕ್ರೀನ್‌ಸ್ಪೇಸ್ ಸಿಕ್ಕಿದೆ. ಅದನ್ನು ಅವರು ಚೆನ್ನಾಗಿಯೇ ಸದ್ಬಳಕೆ ಮಾಡಿಕೊಂಡಿದ್ದಾರೆ. ಮಲ್ಲಿಕಾ ಸಿಂಗ್ ತೆರೆಮೇಲೆ ಇದ್ದಷ್ಟು ಹೊತ್ತು ಮನಸ್ಸಿನಲ್ಲಿ ಉಳಿಯುತ್ತಾರೆ.

ಕಾರ್ತಿಕ್ ಮಹೇಶ್ ಮತ್ತು ಶ್ವೇತಾ ಶ್ರೀವಾತ್ಸವ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಸಸ್ಪೆನ್ಸ್ ರೀತಿಯ ತಿರುವು ನೀಡಿದ ಅಂಶವನ್ನು ಸೇರಿಸಿದ್ದಾರೆ. ಅಮ್ಮನಾಗಿ ಅರುಣಾ ಬಾಲರಾಜ್, ಅಜ್ಜಿಯಾಗಿ ಸಂಧ್ಯಾ ಮಧು ರಾವ್ ಪಾತ್ರ ಗಮನ ಸೆಳೆಯುತ್ತದೆ. ಸನ್ನಿವೇಶಕ್ಕೆ ತಕ್ಕ ಹಾಡುಗಳನ್ನು ನೀಡುವಲ್ಲಿ ವೀರ್‌ ಸಮರ್ಥ್‌ ಯಶಸ್ವಿಯಾಗಿದ್ದಾರೆ. ಹಲವು ಹಾಡುಗಳಿದ್ದರು ಒಂದೆರಡು ಮಾತ್ರ ಮನಸ್ಸಿನಲ್ಲಿ ಉಳಿಯುತ್ತವೆ..

ಸಿನಿಮಾ: ಒಂದು ಪ್ರೇಮಕಥೆ
ನಿರ್ದೇಶನ: ಸಿಂಪಲ್ ಸುನಿ
ಕಲಾವಿದರು: ವಿನಯ್‌ ರಾಜ್‌ಕುಮಾರ್‌, ಸ್ವಾತಿಷ್ಠ, ಮಲ್ಲಿಕಾ ಸಿಂಗ್‌, ರಾಜೇಶ್‌ ನಟರಂಗ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT