ಇಂಟರ್ನೆಟ್ ಬಳಸುತ್ತಿರುವ ಮಕ್ಕಳು 
ಅಂಕಣಗಳು

ಮಕ್ಕಳ ಸೈಬರ್ ವಿಹಾರದ ಬಗ್ಗೆ ನಿಗಾ ಇರಲಿ

ಸಾಮಾಜಿಕ ತಾಣಗಳ ಅತಿ ದೊಡ್ಡ ಸಮಸ್ಯೆಯೆಂದರೆ ಅವು ಮಕ್ಕಳನ್ನು ದೈಹಿಕ ಚಟುವಟಿಕೆಗಳಿಂದ ದೂರ ಇಡುವುದು!

ಸಾಮಾಜಿಕ ತಾಣಗಳ ಅತಿ ದೊಡ್ಡ ಸಮಸ್ಯೆಯೆಂದರೆ ಅವು ಮಕ್ಕಳನ್ನು ದೈಹಿಕ ಚಟುವಟಿಕೆಗಳಿಂದ ದೂರ ಇಡುವುದು! ಎಲ್ಲಾ ಗೆಳೆಯರು ಪ್ರಯಾಣದ ತ್ರಾಸಿಲ್ಲದೇ ಮನೆಯಲ್ಲೇ ಕೂತು ಹರಟೆ ಹೊಡೆಯಲು ಸಿಗುವುದರಿಂದ ಹೊರಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಗೆಳೆಯರೊಡನೆ ವಿಡಿಯೋ ಗೇಮ್ ಆಟವಾಡಲೂ ಸಹ ಇಂಟರ್ ನೆಟ್ ನಲ್ಲಿ ಅವಕಾಶ ಇರುವುದರಿಂದ ಆಟಗಳಲ್ಲಿ ಸಿಗುವ ಮನರಂಜನೆಯೂ ಮಕ್ಕಳಿಗೆ ಸಿಗುತ್ತದೆ. ಕೆಲ ವರ್ಷಗಳ ಹಿಂದೆ ಅಮೇರಿಕೆಯಲ್ಲಿ ಟಿ ವಿ ಮತ್ತು ಇಂಟರ್ ನೆಟ್ ವ್ಯಸನದಿಂದಾಗಿ ಅತಿಯಾಗಿ ಬೊಜ್ಜು ಬೆಳೆಸಿಕೊಳ್ಳುತ್ತಿರುವ ಮಕ್ಕಳ ಬಗ್ಗೆ ನಿಗಾ ವಹಿಸಲು ಹಾಗೂ ಅವರಿಗೆ ವ್ಯಸನದಿಂದ ಮುಕ್ತಗೊಳಿಸಲು ತರಬೇತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇದೊಂದು "ರಾಷ್ಟ್ರೀಯ ಅಪಾಯ" ಎಂದು  ಸರಕಾರವು ಪರಿಗಣಿಸಿತ್ತು. ದೇಶವನ್ನಾಳುವ ಮುಂದಿನ ಪೀಳಿಗೆ ಈ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲವಾಗುತ್ತಿರುವುದು ಸರಕಾರಕ್ಕೆ ಆತಂಕ ತಂದಿತ್ತು.
 ಇಲ್ಲಿಯೂ ಪರಿಸ್ಥಿತಿ ವಿಭಿನ್ನವಾಗಿಯೇನೂ ಇಲ್ಲ! ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಎಲ್ಲ ರೀತಿಯ ಗ್ಯಾಜೆಟ್ ಗಳನ್ನು ಎಟುಕಿಸಿಕೊಳ್ಳುತ್ತವೆ.  ತಮಗೆ ನಿರ್ವಹಿಸಲು ಸಾಧ್ಯವಾಗದಂತಹ ಗ್ಯಾಜೆಟ್ ಗಳನ್ನು ಮಕ್ಕಳು ಸುಲಭವಾಗಿ  ನಿರ್ವಹಿಸುವುದನ್ನು ಕಂಡು ಸಂತಸ ಪಡುತ್ತಾರೆ. ಇತರೆದುರಿಗೆ ಹೇಳಿಕೊಂಡು ಹೆಮ್ಮೆ ಪಡುತ್ತಾರೆ. ಅತಿಥಿಗಳೆದುರಿಗೆ ತಮ್ಮ ಮಗನ ಜಾಣ್ಮೆಯನ್ನು 'ಡೆಮೋ' ಗೆ ಇಡುತ್ತಾರೆ. ಪೋಷಕರ ಇಂತಹ ಪ್ರವೃತ್ತಿ ಮಕ್ಕಳನ್ನು ಹೆಚ್ಚು ಗ್ಯಾಜೆಟ್ ಗಳ ಕಡೆ ವಾಲುವಂತೆ ಮಾಡುತ್ತದೆ.
 ಈಗಿನ ಮುಂದುವರಿದ ವಿದ್ಯಮಾನಗಳಲ್ಲಿ ಮಕ್ಕಳು ಇಂಟರ್ ನೆಟ್ ವ್ಯವಸ್ಥೆ ಅಥವಾ ಯಾವುದೇ ಗ್ಯಾಜೆಟ್ ಗಳನ್ನು ಬಳಸಬಾರದೆಂಬ ನಿಯಮ ಹೇರುವುದರಲ್ಲಿ ಅರ್ಥವಿಲ್ಲ. ಮನೆಯಲ್ಲಿ ಇರದಿದ್ದರೂ ತಮ್ಮ ಗೆಳೆಯರ ಮನೆಗಳಲ್ಲಿ ಅಥವಾ ಸೈಬರ್ ಸೆಂಟರ್ ಗಳಲ್ಲಿ ಬಳಸಲು ಅವಕಾಶವಿರುತ್ತದೆ. ಇಂಟರ್ ನೆಟ್ ಮೂಲಕ ಮಕ್ಕಳ ಕಲಿಕೆಗೂ ಅವಕಾಶ ಇರುವುದರಿಂದ ಕೊಂಚ ಮಟ್ಟಿಗೆ ಇಂಟರ್ ನೆಟ್ ಬಳಕೆಗೆ ಅವಕಾಶ ಇರುವುದು ಒಳ್ಳೆಯದೂ ಸಹ!  ಆದರೆ ಮಕ್ಕಳು ಸೈಬರ್ ಲೋಕದಲ್ಲಿ ಎಲ್ಲೆಲ್ಲಿ ವಿಹರಿಸುತ್ತಾರೆ ಎಂಬುದರ ಬಗ್ಗೆ ನಿಗಾ ಇಡುವುದು ಈಗಿನ ಪೋಷಕರ ಮುಂದಿನ ಅತಿ ದೊಡ್ಡ ಸವಾಲು. ಇದಕ್ಕಾಗಿ ಪೋಷಕರು ಯಾವತ್ತಿಗೂ ದಿನೇ ದಿನೇ ಹೊಸದನ್ನು ಪೇರಿಸಿಕೊಂಡು ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮನ್ನು ತಾವು ಪರಿಷ್ಕರಿಸಿಕೊಳ್ಳಬೇಕು. ಪ್ರತಿದಿನ ಸಾಧ್ಯವಾದಷ್ಟೂ ಹೊಸ ತಂತ್ರಜ್ಞಾನದ ಬಗ್ಗೆ ಕಲಿಯಬೇಕು. ಇಂತಹ ವಿಷಯಗಳನ್ನು ಮಕ್ಕಳು ಬಹಳ ಬೇಗ ಕಲಿಯುತ್ತವೆ. ಅವರ ವೇಗದೊಡನನೆ ಪೋಷಕರ ವೇಗ ಸಾಟಿಯಾಗುವುದಿಲ್ಲ. ಆದರೂ ಮಕ್ಕಳ ಏಳಿಗೆಗಾಗಿ ಸಾಧ್ಯವಾದಷ್ಟು ಕಾಲದೊಡನೆ ಓಡುವ ನಮ್ಮ ವೇಗವನ್ನು ಹೆಚ್ಚಿಸಿಕೊಳ್ಳಬೇಕು.
 ಇತ್ತೀಚೆಗೆ ಮಕ್ಕಳು ಯಾವ ವೆಬ್ ಸೈಟ್ ಗಳಿಗೆ ಭೇಟಿ ಕೊಡುತ್ತಿದ್ದಾರೆ, ಯಾರ್ಯಾರಿಗೆ ಮೇಲ್ ಮಾಡುತ್ತಿದ್ದಾರೆ, ಸಾಮಾಜಿಕ ತಾಣಗಳಲ್ಲಿ ಏನೆಲ್ಲಾ ಅಪ್ ಲೋಡ್ ಮಾಡುತ್ತಿದ್ದಾರೆ ಅಥವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದೆಲ್ಲರ ಜಾಡು ಹಿಡಿಯಲು ಕೆಲ ಮೊಬೈಲ್ ಆಪ್ ಗಳು ಮಾರುಕಟ್ಟೆಯಲ್ಲಿ ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಲಭ್ಯವಿವೆ. ಚಿಲ್ಡ್ರನ್ ಟ್ರಾಕರ್, ಟೀನ್ ಸೇಫ್ ನಂತಹ ಅನೇಕ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅಥವಾ ಇವನ್ನು ಬಳಸುತ್ತಿರುವ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಗೂಗಲಿಸಿದ ರೆ ಇಂತಹ ಆಪ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತವೆ. ಈ ಆಪ್ ಗಳ ಮೂಲಕ ಮಕ್ಕಳು ಕರೆ ಮಾಡಿದ್ದು, ಸಂದೇಶ ಕಳುಹಿಸಿದ್ದು, ವಿವಿಧ ಜಾಲತಾಣಗಳಿಗೆ ಭೇಟಿಕೊಟ್ಟಿದ್ದು, ಎಲ್ಲೆಲ್ಲಿ ಯಾವ ನೆಟ್ ವರ್ಕ್ ಗಳಿಗೆ ಸಂಪರ್ಕ ಪಡೆದಿದ್ದರು, ಮೇಲ್ ಕಳಿಸಿದ್ದು, ಜಿ ಪಿ ಎಸ್ ಮುಖಾಂತರ ಯಾವ ಸ್ಥಳಗಳಿಗೆ ಬೇಟಿ ನೀಡಿದ್ದರು ಎಂಬುದೆಲ್ಲ ಮಾಹಿತಿ ಕೂತಲ್ಲಿಯೇ ಸಿಗುತ್ತದೆ.
    ಪ್ರತಿ ಹಿರಿಯ ಮತ್ತು ಕಿರಿಯ ಪೀಳಿಗೆಗಳ ನಡುವೆ ಒಂದು Generation Gap  ಇರುತ್ತದೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮೊದಲಾದರೆ ಬಹುತೇಕ ಎರಡು ಪೀಳಿಗೆಗಳ ನಡುವೆ ಸಾಮಾಜಿಕ ಪರಿಸ್ಥಿತಿ ಒಂದೇ ರೀತಿ ಇರುತ್ತಿದ್ದುದರಿಂದ ಈ ಕಂದಕ ಚಿಕ್ಕದಿತ್ತು. ಆದರೆ ತಂತ್ರಜ್ಞಾನದ ಅಗಾಧ ಕ್ರಾಂತಿಯಿಂದಾಗಿ ಈಗಿನ ಪೀಳಿಗೆ ಗಳ ನಡುವೆ ಈ ತಲೆಮಾರಿನ ಕಂದಕ ಕೊಂಚ ಹೆಚ್ಚೇ ಇದೆ! ತಂತ್ರಜ್ಞಾನದ ಬಳಕೆಯಿಂದಾಗಿ ಮಕ್ಕಳು ಸಾಕಷ್ಟು ಬೇಗನೆ ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಮಾನಸಿಕವಾಗಿ ಬಹು ಬೇಗ ಕೌಮಾರ್ಯವನ್ನು ಪ್ರವೇಶಿಸುತ್ತಿದ್ದಾರೆ ಎಂದು ಅನೇಕ ಅಧ್ಯಯನಗಳು ಆತಂಕ ವ್ಯಕ್ತಪಡಿಸಿವೆ. ಈ ಮುಗ್ಧತೆಯನ್ನು ಕಾಪಾಡುವ ಮತ್ತು ಮಕ್ಕಳ ಜೀವನದ ತಳಹದಿಯನ್ನು ಗಟ್ಟಿಗೊಳಿಸುವ ಸವಾಲು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹಾಗಾಗಿ ಮಕ್ಕಳೊಡನೆ ತಂತ್ರಜ್ಞಾನದ ರೇಸ್ ನಲ್ಲಿ ಪೋಷಕರೂ ಸ್ಪರ್ಧಿಸುವುದು ಅನಿವಾರ್ಯವಾಗಿದೆ.  

-ಸಿಂಧು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT