ಮಹರ್ಷಿ ವಿಶ್ವಾಮಿತ್ರ 
ಅಂಕಣಗಳು

ಕಠಿಣ - ಕಠೋರ ವಿಶ್ವಮಿತ್ರ?!

ಹಾಗೆ ನೋಡಿದರೆ ಹರಿಶ್ಚಂದ್ರ ಸೋಲುವುದು ವಿಶ್ವಾಮಿತ್ರರಿಗೇ ಬೇಕಿರಲಿಲ್ಲ. ಅವರು ಏನೂ ಮಾಡದೆಯೇ ಸುಮ್ಮನಿದ್ದಿದ್ದರೇ ಸಾಕಿತ್ತು , ಅವನು ಸೋತು ಉರುಳಿಹೋಗುತ್ತಿದ್ದ. ಆ ಎರಡು ಘಟ್ಟಗಳು ಯಾವುವು ?

ತಲೆ ಹಾರಿ ಆ ಕಡೆ ಬೀಳಬೇಕು !! ಇಲ್ಲ - ಇಲ್ಲ , ಬೀಳಲಿಲ್ಲ !!! ಕತ್ತಿಯೇ ಮಾಯ !!!! ತಾನು ಹೊಡೆದ ಹೊಡೆತಕ್ಕೆ ಅಡ್ಡ ಎದ್ದದ್ದು ಬಿಳಿಯ ಕೈ . ಕೈ ಹಿಂದೆ ಬಿಳಿ ದೇಹ , ವಿಭೂತಿ ಪಟ್ಟೆಗಳು . ಓಹ್ ! ಜಟೆ , ಚಂದ್ರ , ಹಾವು , ಅದೆಂತಹ ಪ್ರಶಾಂತ ವದನ ! ಕೊರಳಲ್ಲಿ ಸರ್ಪ , ಎಡ ತೊಡೆಯಲ್ಲಿ ಪಾರ್ವತಿ , ಹತ್ತು ಕೈಗಳು , ಐದು ಮುಖಗಳು , ಸಾಕ್ಷಾತ್ ಪರಮೇಶ್ವರ ! ಮಸಣದಲ್ಲಿ ಮಹಾದೇವ !! 
(ಹೊಡೆದ ಕಡುಗದ ಬಾಯ ಕಡೆಯ ಹೊಡೆಗುಳನು ಆಂತು ಮಡದಿಯ ಎಡೆ ಕೊರಳ ನಡುವೆ ಅಡಸಿ ಮೂಡಿದನು ಕೆಂಜಡೆಯ ಶಶಿಕಳೆಯ ಸುರನದಿಯ ಬಿಸಿಗಣ್ಣ ಫಣಿ ಕುಂಡಲದ ಪಂಚಮುಖದ ಎಡದ ಗಿರಿಜೆಯ ತಳಿತ ದಶಭುಜದ ಪುಲಿದೊಗಲಿನ ಉಡುಗೆಯ ಮಹಾವಿಷ್ಣು ನಯನ ಏರಿಸಿದ ಮೆಲ್ ಅಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯ ಎನುತಿರೆ )
ಮುಂದಿನದೆಲ್ಲ ಸುಖಾಂತ . ವರವಿತ್ತ ಶಿವ ; ಗೆದ್ದ ಹರಿಶ್ಚಂದ್ರ ; ಬೆನ್ನು ತಟ್ಟಿದ ವಿಶ್ವಮಿತ್ರರು ; ಹರ್ಷದಿಂದ ಇರುವ ವಸಿಷ್ಠರು ; ಪಣವಿತ್ತ ಎರಡರಷ್ಟು ಕೊಟ್ಟ ಮುನಿ ; ರಾಜ್ಯವನ್ನೂ ಕೊಟ್ಟ . ವಸಿಷ್ಠರಿಗೆ ಶುಬಾಶಯ ಹೇಳಿದ !! ಅಲ್ಲಿಗೆ , ಹರಿಶ್ಚಂದ್ರನ ಕಥೆ ಮುಗಿಯಿತು. 
( ಆದರೆ ಒಂದು ವಿಷಯವನ್ನು ಓದುಗರೆ , ನಾನು ತಮ್ಮಲ್ಲಿ ಚರ್ಚಿಸಬೇಕಿದೆ . ಹರಿಶ್ಚಂದ್ರನ ಕಥೆ ಕೇಳಿದ ಮಂದಿ, ಚಲನಚಿತ್ರ ನೋಡಿದ ಜನ , ಹರಿಕಥೆಗೆ ಕಿವಿಕೊಟ್ಟ ಭಕ್ತರು .... ಎಲ್ಲರೂ ವಿಶ್ವಮಿತ್ರರನ್ನು ಬೈಯ್ಯುವವರೇ , ನಿಟಿಗೆ ಮುರಿಯುವವರೇ , ಕಣ್ಣು ತುಂಬಿಕೊಳ್ಳುವವರೇ . ಅಲ್ಲವೇ ? ಖಳನಾಯಕನಿಗಿನ್ನ ಹೆಚ್ಚು ಹಿಂಸಿಸಿದ್ದ ವಿಶ್ವಮಿತ್ರರನ್ನು ಇನ್ನೇನು ಹೂಗಳಿಂದ ಪೂಜಿಸಬೇಕೇ ? ವಸಿಷ್ಠರಲ್ಲಿ ಸೆಣೆಸಿ ಗೆಲ್ಲಲಾಗದೆ , ಅವನ ಶಿಷ್ಯನಲ್ಲಿ , ಅದೂ ಸ್ಪರ್ಧೆಗೇ ಸಿದ್ಧವಾಗದ ಅಷ್ಟು ಮೃದು ಮಾತಿನ ಶುದ್ಧ ಮನಸ್ಕನನ್ನು ನೋಯಿಸಬಹುದೇ ? ಪಾಪ , ಚಂದ್ರಮತಿ ಎಂತಹ ಕೋಮಲೆ ; ಆಕೆಯನ್ನು ಜೀತದಾಳಾಗಿ ಮಾಡುವುದೇ ? ನಾಗನನ್ನು ಕಳಿಸಿ ಲೋಹಿತಾಶ್ವನನ್ನು ಕಚ್ಚಿಸುವುದೇ ? ಕಾಶಿ ರಾಜನ ಮಗನನ್ನು ಸಾಯಿಸಿ , ಚಂದ್ರಮತಿಯ ದಾರಿಯಲ್ಲಿ ಇಟ್ಟು , ಹತಾಶ ರಾಣಿಯನ್ನು ಕಟಕಟೆಯಲ್ಲಿ ನಿಲ್ಲುವಂತೆ ಮಾಡಬಹುದೇ ? ಇನ್ನೇನು ಪರಾಕ ಪಟ್ಟಿ ಹೇಳೋಣ ಸ್ವಾಮಿ , ವಿಶ್ವಮಿತ್ರರ ಬಗ್ಗೆ ? 
ನಿಜ ನಿಜ , ನಿಮಗೆ ಹೀಗೆ ಅನ್ನಿಸಲು ಸಾಕಷ್ಟು ಸಾಕ್ಷ್ಯಗಳಿವೆ . ಆದರೆ ಒಂದೆರಡು ಅಂಶಗಳನ್ನು ತಾವು ದಯವಿಟ್ಟು ತಾಳ್ಮೆಯಿಂದ ಚಿಂತಿಸಬೇಕು . 
  • ವಿಶ್ವಮಿತ್ರರು ಪರೀಕ್ಷಿಸಿದರಾಗಿ ಹರಿಶ್ಚಂದ್ರ , ಸತ್ಯಹರಿಶ್ಚಂದ್ರನಾದ !  
  •  ಪರೀಕ್ಷಾ ಕೋಣೆಯಲ್ಲಿ ಕುಳಿತು , ಪ್ರಶ್ನಪತ್ರಿಕೆ ಕಷ್ಟವಾಗಿದೆಯೆಂದು ಪರೀಕ್ಷಕರನ್ನು ದೂರಲಾಗುವುದೇ ?
  •  ಪರೀಕ್ಷೆ ನಡೆಯುವಾಗ ವ್ಯಕ್ತಿಗಳು ಗೌಣ . ಕೇವಲ ಪರೀಕ್ಷೆ , ವಿದ್ಯಾರ್ಥಿಯ ಸಿದ್ಧತೆ , ಫಲಿತಾಂಶ , ಅಷ್ಟೇ ಮುಖ್ಯ .
  •  ಮೇಲ್ನೋಟಕ್ಕೆ ವಸಿಷ್ಠ-ವಿಶ್ವಮಿತ್ರರು ಜಿದ್ದಿಗೆ ಬಿದ್ದು ಪರಸ್ಪರ ಹೊಡೆದಾಡುವಂತೆ ಕಂಡರೂ , ಅವರಿಬ್ಬರೂ ಗುರು - ಶಿಷ್ಯರೆಂಬುದನ್ನು ಮರೆಯುವಂತಿಲ್ಲ . ನಿಜಕ್ಕೂ ಇದು ಹರಿಶ್ಚಂದ್ರನ ಪರೀಕ್ಷೆಯಲ್ಲ , ಇದು ವಿಶ್ವಮಿತ್ರರ ಪರೀಕ್ಷೆ . ಇದರಲ್ಲಿ ಅವರು ಸೋತು ಗೆದ್ದರು !
  •  ಗೆದ್ದರೆ ? ಹೇಗೆ ? ಪಣ ತೊಟ್ಟಿದ್ದು ತಪಃ ಫಲದಲ್ಲಿ ಅರ್ಧ . ಆದರೆ ಕೊಟ್ಟದ್ದು ಪೂರ್ಣ ಫಲ . ಐವತ್ತು ಕೋಟಿ ವರ್ಷಗಳ ಪುಣ್ಯದಲ್ಲಿ ಅವರು ಹೇಳಿದ್ದು , " ಗೆದ್ದರೆ ಅರ್ಧ ಕೊಡುವೆ " ಎಂದು . ಆದರೆ ಅವರು ಪೂರ್ಣ ತಪಸ್ಸಿನ ಸಿದ್ಧಿಯನ್ನು ಹರಿಶ್ಚಂದ್ರನಿಗೆ ಧಾರೆ ಎರೆದುಬಿಟ್ಟರು !!
  •  ಹರಿಶ್ಚಂದ್ರನ ಸಿಂಹಾಸನ , ರಾಜ್ಯ ತೆಗೆದುಕೊಂಡು ವಿಶ್ವಮಿತ್ರರಿಗೆ ಆಗಬೇಕಾದ್ದೇನು ? ಅವರದೇ ರಾಜ್ಯವನ್ನು ತೊರೆದು ಋಷಿಯಾಗಿದ್ದವರಲ್ಲವೇ ಅವರು ? 
  • ಎಲ್ಲಕ್ಕಿನ್ನ ಪ್ರಧಾನವಾಗಿ ವಿಶ್ವಮಿತ್ರರ ದೊಡ್ಡತನ ಕಾಣುವುದು ಎರಡು ಸಂದರ್ಭಗಳಲ್ಲಿ . ಹೇಗಾದರೂ ಮಾಡಿ ಹರಿಶ್ಚಂದ್ರನನ್ನು ಸೋಲಿಸುವುದು ಅವರ ಏಕೈಕ ಅಪೇಕ್ಷೆ ಅಲ್ಲವೇ ಅಲ್ಲ . ಹಾಗೆ ನೋಡಿದರೆ ಹರಿಶ್ಚಂದ್ರ ಸೋಲುವುದು ಅವರಿಗೇ ಬೇಕಿರಲಿಲ್ಲ . ಅವರು ಏನೂ ಮಾಡದೆಯೇ ಸುಮ್ಮನಿದ್ದಿದ್ದರೇ ಸಾಕಿತ್ತು , ಅವನು ಸೋತು ಉರುಳಿಹೋಗುತ್ತಿದ್ದ . ಆ ಎರಡು ಘಟ್ಟಗಳು ಯಾವುವು ? 
  • ಅ) ಕೊನೆಯ ದಿನ , ಅವಧಿ ಮುಗಿಯಲು ಇನ್ನೇನು ಕೆಲವೇ ಘಂಟೆಗಳಿದ್ದಾಗ ಏನಾಯಿತು ? ಏನೂ ಮಾಡಲಾಗದೆಂದು ಕೈಚೆಲ್ಲಿ ಕುಳಿತಿದ್ದ ಹರಿಶ್ಚಂದ್ರನನ್ನು ಪೂಸಲಾಯಿಸಿ ತನ್ನನ್ನು ಮಾರಲು ಚಂದ್ರಮತಿ ಒತ್ತಾಯಿಸಿದಳು ತಾನೆ ? ಯಾರು ಕೊಂಡಾರು ಆಕೆಯನ್ನು ; ಆ ಮಧ್ಯ ವಯಸ್ಕೆಯನ್ನು ? ( ಒತ್ತೆಯಾಳುಗಳನ್ನು ವಿಶ್ವಾದ್ಯಂತ ಮಾರಾಟ ಮಾಡುತ್ತಿದ್ದ ಕರಾಳ ಕಾಲ ಅದು . ಅದರ ಗುಣಾವಗುಣಗಳನ್ನು ೨೧ನೆಯ ಶತಮಾನದಲ್ಲಿ ಚರ್ಚಿಸುವುದು ವಿಮರ್ಶೆಯಾಗದು ) . ಚಂದ್ರಮತಿ ಲೋಹಿತಾಶ್ವರನ್ನು ಯಾರೂ ಕೊಳ್ಳದೇ ಇದ್ದಿದ್ದರೂ ಸಾಕಿತ್ತು !! ಸಂಜೆಯಾಗುತ್ತಿತ್ತು ; ಹರಿಶ್ಚಂದ್ರ ಹಣ ಕೊಡಲಾಗದೆ ಸೋತು ಹೋಗುತ್ತಿದ್ದ ! ಆದರೆ ಅವನು ಸೋಲುವುದಲ್ಲ , ಅವನ ಗಟ್ಟಿತನದ ಪರೀಕ್ಷೆಯಾಗಬೇಕಿತ್ತು ವಿಶ್ವಮಿತ್ರರಿಗೆ . ಅದಕ್ಕಾಗಿ ಅವನನ್ನು ಸೋಲಲು ಬಿಡದೆ ಅಗ್ನಿಯನ್ನು ಕರೆದು ಆಕೆಯನ್ನು ಕೊಂಡು ದುಡ್ಡು ಕೊಡಲು ಹೇಳಿದರು . ಹಾಗವರು ಅತನನ್ನು ಕಳಿಸದೇ ಸುಮ್ಮನಿದ್ದು ಬಿಟ್ಟಿದ್ದಿದ್ದರೆ , ಹರಿಶ್ಚಂದ್ರ ಸೋತು ಹೋಗುತ್ತಿದ್ದ . (ಅನಿಮಿತ್ತ ಮುನಿವ ಮುನಿಪನ ಬೆಸದೊಳು ಅಗ್ನಿ ವಿಪ್ರನ ವೇಷದಿಂದ ಬಂದು....) ಇದಕ್ಕೂ ಪ್ರಧಾನವಾದದ್ದು ಮುಂದಿನದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT