ಸಾಮಾಜಿಕ ಉದ್ಯಮ 
ಅಂಕಣಗಳು

ಸಾಮಾಜಿಕ ಉದ್ಯಮ ಸಾಧ್ಯವೇ? ನಮ್ಮ ಸಮಸ್ಯೆಗಳಿಗೆ ಇದು ಪರ್ಯಾಯವಾಗಬಲ್ಲದೇ?

ಮುಂದಿನ ದಶಕದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ನೂರಾರು ಜನ ಮಾಡುವ ಕೆಲಸವನ್ನ ಟೆಕ್ನಾಲಜಿ ಸಹಾಯದಿಂದ ಒಬ್ಬ ಮನುಷ್ಯ ಮಾಡಿ ಬಿಡಬಹುದು. ಹಾಗಾದರೆ ನಮ್ಮ ಕೆಲಸದ ಗತಿ ಏನು? ಎನ್ನುವ ಪ್ರಶ್ನೆಗೆ

 ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಒಂದು ಮಾತು ನಮ್ಮಲ್ಲಿ ಬಳಸುತ್ತಿದ್ದೆವು. ಕಳೆದ ಎರಡು ದಶಕಗಳಿಂದ ಉದ್ಯೋಗಂ ಮನುಷ್ಯ ಲಕ್ಷಣಂ ಎಂದು ಬದಲಿಸಬಹದು ಆಷ್ಟು ಪ್ರಮಾಣದಲ್ಲಿ ಪುರುಷ ಅಥವಾ ಸ್ತ್ರ‍ೀ ಎನ್ನುವ ಭೇದವಿಲ್ಲದೆ ಎಲ್ಲರೂ ಒಂದಲ್ಲ ಒಂದು ಕಾಯಕದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಮುಂದಿನ ದಶಕದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ನೂರಾರು ಜನ ಮಾಡುವ ಕೆಲಸವನ್ನ ಟೆಕ್ನಾಲಜಿ ಸಹಾಯದಿಂದ ಒಬ್ಬ ಮನುಷ್ಯ ಮಾಡಿ ಬಿಡಬಹುದು. ಹಾಗಾದರೆ ನಮ್ಮ ಕೆಲಸದ ಗತಿ ಏನು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ದರ್ದು ಇಂದು ಹೆಚ್ಚಾಗಿದೆ. 
ಅಕೌಂಟೆಂಟ್, ಆಡಿಟರ್ ವೃತ್ತಿಯಿಂದ ಹಿಡಿದು ಡ್ರೈವರ್ ಕೆಲಸದ ವರೆಗೆ ಎಲ್ಲವನ್ನೂ ನಿಖರವಾಗಿ ಮಾಡಲು ಮಷೀನ್ ಗಳು ಸಿದ್ಧವಾಗುತ್ತಿವೆ. ಹಲವಾರು ಕ್ಷೇತ್ರದಲ್ಲಿ ಆಗಲೇ ಇದು ಸಿದ್ಧವಿದೆ ಕೂಡ. ಇದೆಲ್ಲಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವರಿಗೆ ಹೊಸ ವಿಷಯವೇನೂ ಅಲ್ಲ. ನಿತ್ಯ ಯಾವುದಾದರೊಂದು ದೊಡ್ಡ ಕಾರ್ಪೊರೇಟ್ ಸಂಸ್ಥೆ ತನ್ನ ನೌಕರರನ್ನ ಲೇ ಆಫ್ ಮಾಡುವುದು ಜನ ಸಾಮಾನ್ಯ ಕೂಡ ಸುದ್ದಿ ಪತ್ರಿಕೆಗಳಲ್ಲಿ ಓದಿರುತ್ತಾನೆ. ಜಗತ್ತು ಈ ಸಮಸ್ಯೆಯನ್ನ ಅರಿತಿದೆ. ಪ್ರತಿ ನಿತ್ಯ ಹೆಚ್ಚುತ್ತಿರುವ ಜನಸಂಖ್ಯೆಗೆ ಕೆಲಸ ಒದಗಿಸಲು ಹೇಗೆ ತಾನೇ ಸಾಧ್ಯ? ನಮ್ಮ ತಂತ್ರಜ್ಞಾನ ಹೆಚ್ಚಾದಂತೆ ನಮಗೆ ಕೆಲಸ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರವೇನು? ಇದಕ್ಕೆ ಪರಿಹಾರ ಸೋಶಿಯಲ್ ಎಂಟರ್ಪ್ರೈಸಿಂಗ್.  ಏನಿದು ಸೋಶಿಯಲ್ ಎಂಟರ್ಪ್ರೈಸಿಂಗ್? ಇದನ್ನ ಹೇಗೆ ಬಳಸಿ ಕೊಂಡರೆ ಉತ್ತಮ ಎನ್ನುವುದನ್ನ ನೋಡೋಣ. 
ಸೋಶಿಯಲ್ ಎಂಟರ್ಪ್ರೈಸಿಂಗ್ ಎಂದರೇನು? 
ಒಂದಷ್ಟು ಜನ ಸಮಾನಮನಸ್ಕರು ಒಂದು ಸಾಮಾನ್ಯ ಉದ್ದೇಶಕ್ಕಾಗಿ ಹುಟ್ಟು ಹಾಕುವ ಸಂಸ್ಥೆಗೆ ಸೋಶಿಯಲ್ ಎಂಟರ್ಪ್ರೈಸ್ ಎನ್ನಬಹದು. ಉದಾಹರಣೆ ನೋಡಿ ಅಮುಲ್ ಎಲ್ಲರಿಗೂ ಗೊತ್ತಿರುವ ಸಂಸ್ಥೆ. ಇದೊಂದು ಸೋಶಿಯಲ್ ಎಂಟರ್ಪ್ರೈಸ್. ಲೀಚರ್ಡ್ ಪಾಪಡ್ ಇನ್ನೊಂದು ಹೆಸರುವಾಸಿ ಸಂಸ್ಥೆ. ಇದು ಕೂಡ ಸೋಶಿಯಲ್ ಎಂಟರ್ಪ್ರೈಸ್. ಗಮನಿಸಿ ಯಾವುದಾದರೊಂದು ಸಾಮಾನ್ಯ ಉದ್ದೇಶವನ್ನ ಆಯ್ದುಕೊಂಡು ಅದರ ಬಗ್ಗೆ ಕೆಲಸ ಮಾಡಲು ಶುರು ಮಾಡುವುದು ಮತ್ತು ತನ್ನ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ದುಡಿಯುವುದು ಇಂತಹ ಸಂಸ್ಥೆಗಳ ಬಹು ಮುಖ್ಯ ಲಕ್ಷಣ. ನಮ್ಮಲ್ಲಿ ಸೋಶಿಯಲ್ ಎಂಟರ್ಪ್ರೈಸ್ ಎಂದರೆ ಅದು ಲಾಭಕ್ಕಾಗಿ ನೆಡೆಸದ ಸಂಸ್ಥೆ ಎನ್ನುವ ಒಂದು ಭಾವನೆಯಿದೆ. ಇದೊಂತರ ಎನ್ ಜಿ ಓ ಇದ್ದಹಾಗೆ ಎನ್ನುವ ಅಭಿಪ್ರಾಯವಿದೆ. ಭಾರತ ದೇಶದಲ್ಲಿ ಇಂತಹ ಸಂಸ್ಥೆಗಳು ಶುರುವಾದಾಗ ನಮ್ಮ ದೇಶ ಅತ್ಯಂತ ಬಡ ದೇಶವಾಗಿತ್ತು. ಆಗ ಅಲ್ಲಿ ಲಾಭ ಮಾಡುವುದಕ್ಕಿಂತ ಸಂಸ್ಥೆಯ ಸದಸ್ಯರ ಜೀವನೋಪಾಯಕ್ಕೆ ಏನಾದರೂ ಮಾಡಿದರೆ ಸಾಕು ಎನ್ನುವ ಭಾವನೆಯಿತ್ತು. ಹೀಗಾಗಿ ಇದು ಅನೇಕ ದಶಕಗಳ ಕಾಲ ಲಾಭಕ್ಕೆ ಮಾಡಿದರೆ ಅದು ಎಥಿಕಲ್ ಅಲ್ಲ ಎನ್ನುವ ಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಬೇರೂರಿತ್ತು. ಬದಲಾದ ಇಂದಿನ ಸನ್ನಿವೇಶದಲ್ಲಿ ಬಹಳಷ್ಟು ಸಂಸ್ಥೆಗಳು ಆರೋಗ್ಯಕರ ಲಾಭವನ್ನೂ ಮಾಡುತ್ತಿವೆ ಜೊತೆಗೆ ಸಮಾಜಕ್ಕೆ ಸೇವೆಯನ್ನೂ ನೀಡುತ್ತಿವೆ. 
ಸೋಶಿಯಲ್ ಎಂಟರ್ಪ್ರೈಸ್ ನಲ್ಲಿ ಎಷ್ಟು ವಿಧಗಳಿವೆ? 
ಇದನ್ನ ಮುಖ್ಯವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹದು.  
ಅನ್ವೇಷಣೆಯ ಉದ್ದೇಶ: ಅಂದರೆ ಜಗತ್ತಿನ ಜನರ ಒಳಿತಿಗಾಗಿ ಹೊಸ ಚಿಕಿತ್ಸಾ ವಿಧಾನ ಕಂಡು ಹಿಡಿಯುವುದು ಅಥವಾ ಮಕ್ಕಳಿಗೆ ಹೊಸ ಕಲಿಕಾ ವಿಧಾನ ಕಂಡು ಹಿಡಿಯಲು ಶ್ರಮಿಸುವುದು ಇತ್ಯಾದಿ. 
ಕೆಲಸ ವೃದ್ಧಿ: ಜನರಿಗೆ ಕೆಲಸ ನೀಡುವ ಉದ್ದೇಶದಿಂದ ಸೃಷ್ಟಿಯಾಗುವ ಸಂಸ್ಥೆಗಳು. ಉದಾಹರಣೆಗೆ ಭಾರತದಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯನ್ನ ಗಣನೆಗೆ ತೆಗೆದುಕೊಂಡು ಒಂದು ಒಳ್ಳೆಯ ವೃದ್ಧಾಶ್ರಮ ತೆಗೆಯುವುದು ತನ್ಮೂಲಕ ಅಲ್ಲಿನ ವೃದ್ಧರ ಸೇವೆಗೆ ಎಂದು ನೂರಾರು ಜನರನ್ನ ಕೆಲಸಕ್ಕೆ ನೇಮಿಸಿಕೊಳ್ಳುವುದು. ಹೀಗೆ ಹಲವಾರು ಇಂದಿನ ಸಾಮಾಜಿಕ ಸಮಸ್ಯೆಗಳನ್ನ ಹೆಕ್ಕಿ ಅದಕ್ಕೆ ಪರಿಹಾರ ಕೂಡ ಕೊಡಬಹದು ಜೊತೆಗೆ ಕೆಲಸ ಕೂಡ ಸೃಷ್ಟಿಸಬಹದು.
ಸಮಾಜಕ್ಕೆ ಹಿಂತಿರುಗಿಸಲು ಅಥವಾ ಋಣ ಸಂದಾಯ ವಿಧಾನ: ಇಲ್ಲಿ ಸಂಸ್ಥೆ ತನ್ನ ಪ್ರತಿ ಉತ್ಪನ್ನದ ಮೇಲೆ ಬರುವ ಲಾಭಾಂಶವನ್ನ ಸಮಾಜದ ಒಳಿತಿಗಾಗಿ ಬಳಸುತ್ತದೆ. ಉದಾಹರಣೆ ನೋಡಿ ಯಾವುದೋ ಒಂದು ಕಾರು ಮಾರುವ ಸಂಸ್ಥೆ ತಾನು ಮಾರಿದ ಪ್ರತಿ ಕಾರಿನ ಒಂದಷ್ಟು ಲಾಭಾಂಶವನ್ನ ಜನರ ಒಳಿತಿಗಾಗಿ ಬಳಸಲು ತನ್ನದೇ ಅದ ಒಂದು ಅಂಗ ಸಂಸ್ಥೆ ತೆಗೆದುಕೊಳ್ಳುತ್ತದೆ. ಅವುಗಳನ್ನ ಈ ವಿಭಾಗದಡಿಯಲ್ಲಿ ಸೇರಿಸಬಹದು. 
ಈ ಸೋಶಿಯಲ್ ಎಂಟರ್ಪ್ರೈಸ್ ಏಕೆ ಬೇಕು? 
ಜಗತ್ತು ಹಿಂದೆದೂ ಕಂಡು ಕೇಳರಿಯದಷ್ಟು ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿ ಸಿಕ್ಕಿದೆ. ಇವರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಇರುವುದು ಸಹಕಾರ ಸಂಸ್ಥೆ ಹುಟ್ಟುಹಾಕುವುದು. ಸಾಧ್ಯವಾದಷ್ಟೂ ದೊಡ್ಡ ಬ್ರಾಂಡ್ ಗಳನ್ನ ಕೊಳ್ಳದೆ ಇರುವುದು ಅದಕ್ಕೆ ಪರ್ಯಾಯವಾಗಿ ನಮ್ಮದೇ ಆದ ಒಂದು ಬ್ರಾಂಡ್ ಸೃಷ್ಟಿಸುವುದು ಮತ್ತು ಅದನ್ನ ಸದಸ್ಯರ ನಡುವೆ ಮಾರಾಟ ಮಾಡುವುದು ಮಾಡಿದರೆ ನಿಧಾನವಾಗಿ  'ಅವರ' ಮಾರುಕಟ್ಟೆ ಮೌಲ್ಯ ಕುಗುತ್ತದೆ. ಎಲ್ಲಕೂ ಮೊದಲು ಒಂದು ಸಾಮಾನ್ಯ ಉದ್ದೇಶ ಆಯ್ದುಕೊಳ್ಳಬೇಕು. ಸಾಮಾನ್ಯ ಉದ್ದೇಶವನ್ನ ಇಷ್ಟಪಡುವ ಮತ್ತು ಅದರಲ್ಲಿ ನಂಬಿಕೆ ಇರುವ ಜನರನ್ನ ಒಗ್ಗೊಡಿಸಬೇಕು. ಅವರಿಂದ ಒಂದಷ್ಟು ಹಣ ಸಂಗ್ರಹಿಸಬೇಕು. ಸಹಕಾರಿ ಸಂಸ್ಥೆ ಎಂದು ನೋಂದಾಯಿಸಿಕೊಳ್ಳಬೇಕು, ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ನಿರಂತರ ನಿಷ್ಠೆಯಿಂದ ದುಡಿಯಬೇಕು. ಉದಾಹರಣೆ ನೋಡಿ ಮೂರರಿಂದ ಐದು ಸಾವಿರ ಜನರಿರುವ ಒಂದು ಹಳ್ಳಿಯ ಜನರನ್ನ ಸೇರಿಸಿ ಒಂದು ಸಹಕಾರಿ ಸಂಸ್ಥೆ ತೆಗೆದರೆ ಮತ್ತು ಅಲ್ಲಿನ ಎಲ್ಲಾ ಉತ್ಪನ್ನಗಳ ಅಲ್ಲಿನ ಸದಸ್ಯರ ನಡುವೆ ಕೊಳ್ಳುವುದು ಮಾರುವುದು ನೆಡೆದರೆ ಅಲ್ಲಿ ರಿಲಯನ್ಸ್ ಫ್ರೆಶ್ಗೆ ಏನು ಕೆಲಸವಿರುತ್ತದೆ ನೀವೇ ಹೇಳಿ? ಜನರ ಪ್ರತಿಯೊಂದು ಬೇಕುಗಳನ್ನ ಪಟ್ಟಿ ಮಾಡಿ ಅದನ್ನ ಅಲ್ಲೇ ಸ್ಥಳೀಯವಾಗಿ ಉತ್ಪಾದಿಸಲು ಅಲ್ಲಿನ ಜನರನ್ನೇ ಪ್ರೋತ್ಸಾಹಿಸಿದರೆ ಹಳ್ಳಿಯ ಜನ ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಪ್ರಮೇಯವಿರುವುದಿಲ್ಲ. ಅವರ ಕೊತ್ತಂಬರಿ ಸೊಪ್ಪನ್ನ ಹತ್ತು ಪೈಸೆಗೆ ಕೊಂಡು ರುಪಾಯಿಗೆ ಮಾರಲು ರಿಲಯನ್ಸ್ ಫ್ರೆಶ್ಗೂ ಸಾಧ್ಯವಾಗುವುದಿಲ್ಲ. 
ದಿನ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಭೇದಭಾವ ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಾ ಸದಸ್ಯರ ಒಗ್ಗಟ್ಟಾಗಿ ಸಾಮಾನ್ಯ ಗುರಿಯ ಕಡೆಗೆ ನೆಡೆಸುವುದು ಸುಲಭದ ಮಾತಲ್ಲ. ಆದರೇನು ಮುಂಬರುವ ದಿನಗಳಲ್ಲಿ ಕೆಲಸ ಅಭಾವದ ಜೊತೆಗೆ ಹೆಚ್ಚಾಗಿ ಸಿಗುವ ಸಮಯವನ್ನ ಸರಿಯಾಗಿ ವ್ಯಯಿಸುವ ಉದ್ದೇಶದಿಂದ ಕೂಡ ಇಂತಹ ಸಂಸ್ಥೆಗಳು ಶುರವಾಗುತ್ತದೆ. ಶುರುವಾಗಲಿ ಎನ್ನುವುದು ಆಶಯ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT