ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನೂ ಕೆಲವರಿಗೆ ಹತ್ತಾರು ವರ್ಷಗಳಿಂದ ಕೆಲಸ ನೀಡಿದ್ದ ಅವರ ಸಂಸ್ಥೆಯೇ ಗೇಟ್ ಪಾಸ್ ನೀಡಿದೆ. ಅಂದರೆ ಅವಧಿಗೂ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳದೆ ವಿಧಿಯಿಲ್ಲ ಎನ್ನುವಂತಾಗಿದೆ.
ಎರಡನೇ ವರ್ಗದ ಜನ ತಮ್ಮ ಮುಂದಿನ ಜೀವನದ ರೂಪುರೇಷೆಗಳನ್ನ ಮರು ಪರಿಶೀಲಿಸಬೇಕಾದ ಅವಶ್ಯಕತೆ ಇರುತ್ತದೆ. ಉಳಿದಂತೆ ಸ್ವಇಚ್ಛೆಯಿಂದ ನಿವೃತ್ತಿ ಪಡೆಯಲು ಬಯಸಿದವರಲ್ಲಿ ಫೈರ್ ಬಗ್ಗೆ ಮಾಹಿತಿ ಇರಬೇಕು. ಅಲ್ಲಿನ ಒಂದಷ್ಟು ನಿಯಮಾವಳಿಗಳನ್ನ ಪೂರ್ಣಗೊಳಿಸುವ ತಾಕತ್ತು ಉಳ್ಳವರು ಬೇಗ ನಿವೃತ್ತಿಯನ್ನ ಪಡೆಯಬಹುದು. ಬೇಗ ಎಂದರೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತದೆ.
ಸಾಮಾನ್ಯವಾಗಿ ನಿವೃತ್ತಿ ಎಂದರೆ 60 ರಿಂದ 65 ವಯಸ್ಸು ಎಂದು ನಾವು ಪರಿಗಣಿಸಬಹುದು. ಸಾಮಾನ್ಯವಾಗಿ ಒಪ್ಪಿಕೊಂಡ ಈ ವಯಸ್ಸಿಗಿಂತ ಮುಂಚೆ ನಿವೃತ್ತಿ ಹೊಂದುವುದನ್ನ ಅರ್ಲಿ ರಿಟೈರ್ಮೆಂಟ್ ಎಂದು ಕರೆಯಬಹುದು. ಕೆಲವರು 40ಕ್ಕೆ ನಿವೃತ್ತಿ ಬಯಸಿದರೆ, ಕೆಲವರು 45, 50, 55 ಹೀಗೆ ತಮ್ಮ ಇಂದಿನ ಜೀವನ ಶೈಲಿ, ಮುಂದಿನ ಜೀವನ ಶೈಲಿ ಎರಡನ್ನೂ ಅಳೆದು ತೂಗಿ ನಿರ್ಧಾರಗಳನ್ನ ಮಾಡುತ್ತಾರೆ.
FIRE- ಫೈನಾಸಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ ಎಂದರೇನು?
ಸಾಂಪ್ರದಾಯಿಕ ನಿವೃತ್ತಿ ಪಡೆಯಲು ನಾವು ಅನುಸರಿಸುವ ಗಳಿಕೆ-ಉಳಿಕೆ-ಹೂಡಿಕೆಯ ಮಾರ್ಗ, ಅರ್ಲಿ ರಿಟೈರ್ಮೆಂಟ್ ಪಡೆಯಲು ಬಯಸಿದಾಗ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಹಣಕಾಸು ಸ್ವಾತಂತ್ರ್ಯ ಪಡೆದು ಬೇಗ ನಿವೃತ್ತಿ ಹೊಂದಲು ಬೇರೆಯ ರೀತಿಯಲ್ಲಿ ಉಳಿಕೆ ಮತ್ತು ಹೂಡಿಕೆ ಮಾಡಬೇಕಾಗುತ್ತದೆ. ಈ ಬೇರೆ ರೀತಿಯ ಪರಿಭಾಷೆಗೆ ಫೈರ್ ಎನ್ನುವ ಹೆಸರನ್ನ ನೀಡಲಾಗಿದೆ. ಅಂದರೆ ಒಂದು ಅರ್ಥದಲ್ಲಿ ನಿಮ್ಮಲ್ಲಿ ನಿಜವಾದ ಕಿಚ್ಚು, ಬೆಂಕಿಯಿದ್ದರೆ ಮಾತ್ರ ಈ ಗುರಿಯನ್ನ ಸಾಧಿಸಲು ಸಾಧ್ಯ. ಇದು ಎಲ್ಲರಿಂದ ಖಂಡಿತ ಸಾಧ್ಯವಿಲ್ಲ ಎನ್ನುವುದನ್ನ ಕೂಡ ಇದು ಸೂಕ್ಷ್ಮವಾಗಿ ಧ್ವನಿಸುತ್ತದೆ.
ಬೇಗ (ಅರ್ಲಿ) ನಿವೃತ್ತರಾಗಲು ಏನು ಮಾಡಬೇಕು?
ಸಾಂಪ್ರದಾಯಿಕ ನಿವೃತ್ತಿಗಿಂತ ಮುಂಚೆ ನಿವೃತ್ತರಾಗಲು ಬಯಸುವವರು ಅಸಂಪ್ರದಾಯಿಕ ನಡೆಗಳನ್ನ ತಮ್ಮದಾಗಿಸಿಕೊಳ್ಳಬೇಕು. ನಾವು ಬೇರೆಯವರಿಗಿಂತ ಭಿನ್ನರಾಗಬೇಕಾದರೆ, ನಮ್ಮ ನಡೆ-ನುಡಿ ಕೂಡ ಅವರಿಗಿಂತ ಭಿನ್ನವಾಗಿರಬೇಕು. ಹೀಗೆ ಗುಂಪಿನಿಂದ ಬೇರ್ಪಟ್ಟು ನಮ್ಮದೇ ಆದ ದಾರಿಯಲ್ಲಿ ನಡೆಯಬೇಕಾದರೆ ಕೆಲವೊಂದು ಅಂಶಗಳನ್ನ ಪಾಲಿಸಬೇಕಾಗುತ್ತದೆ. ಅಂತಹ ಅಂಶಗಳೇನು ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.
ಮೇಲೆ ಹೇಳಿದ ರೂಲ್ಸ್ ಎಲ್ಲರಿಗೂ ಸರಿ ಹೊಂದುತ್ತದೆಯೆ?
ಗಮನಿಸಿ ನೋಡಿ, ನಾವೆಲ್ಲಾ ಒಬ್ಬರಂತೆ ಒಬ್ಬರಿಲ್ಲ, ನನ್ನ ಜೀವನಶೈಲಿ ನಿಮ್ಮದಲ್ಲ!, ನಿಮ್ಮ ಜೀವನ ಶೈಲಿ ನನಗೆ ಹೊಂದುವುದಿಲ್ಲ. ಅಂದರೆ ಕೆಲವರಿಗೆ ಖರ್ಚು ಮಾಡುವುದರಲ್ಲಿ ಖುಷಿ, ಕೆಲವರಿಗೆ ಉಳಿಸುವುದರಲ್ಲಿ ನೆಮ್ಮದಿ. ಇನ್ನು ಕೆಲವರಿಗೆ ಆಸ್ತಿ ಮಾಡುವುದರಲ್ಲಿ ಆಸಕ್ತಿ ಹೆಚ್ಚು. ನಮ್ಮಲಿ ಹಲವರದು ಹೆಚ್ಚು ಹಣವಿದ್ದೂ ಅತ್ಯಂತ ಸರಳವಾದ ಜೀವನ ನಡೆಸುವ ಬದುಕು, ಇನ್ನು ಕೆಲವರು ಸಾಲ ಮಾಡಿಯಾದರೂ ಸರಿಯೇ ಕಣ್ಣುಕುಕ್ಕುವ ಹಾಗೆ ಬದುಕಬೇಕು ಎನ್ನುವ ಹಂಬಲ. ಹೀಗಾಗಿ ಮೇಲೆ ಹೇಳಿದ ರೂಲ್ಸ್ ಎಲ್ಲರಿಗೂ ಸರಿ ಹೊಂದುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ಇದು ಕೆಳಗೆ ನಮೂದಿಸಿರುವ ಗುಣಗಳನ್ನ ಹೊಂದಿರುವ ಜನರಿಗೆ ಹೆಚ್ಚು ಹೊಂದುತ್ತದೆ ಎಂದು ಹೇಳಬಹುದು.
ಕೊನೆಮಾತು: ನಿವೃತ್ತಿ ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಕೆಲವರಿಗೆ ನಿವೃತ್ತಿ ವಯಸ್ಸಾದರೂ ಕೆಲಸಕ್ಕೆ ಹೋಗುವ ತವಕವಿರುತ್ತದೆ. ಇನ್ನು ಕೆಲವರಿಗೆ 40ಕ್ಕೆ ಸಾಕೆನಿಸುತ್ತದೆ. ನಿವೃತ್ತಿ ಎಂದ ತಕ್ಷಣ ಅದು ಬದುಕಿಂದ ನಿವೃತ್ತಿ ಎಂದಲ್ಲ. ನಮಗೆ ಬೇಕಾದ ಕೆಲಸವನ್ನ, ಇಷ್ಟವಾದ ಕೆಲಸವನ್ನ ನಮಗೆ ಬೇಕಾದ ಸಮಯದಲ್ಲಿ, ನಮ್ಮ ವೇಗಕ್ಕೆ ತಕ್ಕಂತೆ ಮಾಡುವುದು ಎಂದರ್ಥ! ಇದು ಇಂದು ಬದಲಾವಣೆ ಕಂಡಿರುವ ನಿವೃತ್ತಿ ವ್ಯಾಖ್ಯಾನ. ಹೀಗಾಗಿ ಬೇಗ ನಿವೃತ್ತಿ ಪಡೆಯಲು ಬಯಸಿರುವವರು ಮೇಲೆ ಹೇಳಿದ ರೀತಿಯಲ್ಲಿ ಗಳಿಸಿ, ಉಳಿಸಿ, ಹೂಡಿಕೆ ಮಾಡಿದ್ದರೂ ಕೂಡ, ಸಮಾಜದಲ್ಲಿ ಆಗುತ್ತಿರುವ ವೇಗದ ಬದಲಾವಣೆಯ ಬಗ್ಗೆ ಗಮನವನ್ನ ನೀಡಬೇಕಾಗುತ್ತದೆ. ಸದಾ ತಮ್ಮ ಕೌಶ್ಯಲ್ಯವನ್ನ ವೃದ್ಧಿಸಿಕೊಳ್ಳುತ್ತ ಇರಬೇಕಾಗುತ್ತದೆ. ಸಮಯ ಬಂದರೆ ತಮ್ಮ ಇಂದಿನ ಜೀವನ ಶೈಲಿ ಬದಲಾವಣೆಗೂ ಸಿದ್ಧರಿರಬೇಕಾಗುತ್ತದೆ. ಸಮಾಜದಲ್ಲಿ ಅನಿಶ್ಚಿತತೆ ಹೆಚ್ಚಿದಷ್ಟೂ ಇಂತಹ ನಿವೃತ್ತರಲ್ಲೂ ಅನಿಶ್ಚಿತತೆ ಮನೆ ಮಾಡುತ್ತದೆ. ನಿವೃತ್ತಿಗಾಗಿ ತೆಗೆದಿಡುವ ಮೀಸಲು ನಿಧಿಯ ಮೊತ್ತವನ್ನ ಹೆಚ್ಚಿಸುವುದು, ಸಮಾಜದಲ್ಲಿ ಸದಾ ಪ್ರಸ್ತುತತೆಯನ್ನ ಉಳಿಸೊಳ್ಳುವುದು ಇಂತಹ ಅನಿಶ್ಚಿತತೆಗೆ ಇರುವ ಸರಳ ಮದ್ದುಗಳು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com