ಝಿಕಾ ವೈರಸ್ ಲಕ್ಷಣಗಳು (ಸಂಗ್ರಹ ಚಿತ್ರ) online desk
ಅಂಕಣಗಳು

ಝಿಕಾ ವೈರಸ್: ಕಾರಣ, ರೋಗಲಕ್ಷಣ & ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್. 1947 ರಲ್ಲಿ ಉಗಾಂಡಾದಲ್ಲಿ ರೀಸಸ್ ಮಕಾಕ್ ಮಂಗಗಳಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸಲಾಯಿತು.

ಕಳೆದ ಕೆಲವು ವರ್ಷಗಳಿಂದ ಸುದ್ದಿ ಮಾಡುತ್ತಿರುವ ಝಿಕಾ ವೈರಸ್ ಈಗ ಮತ್ತೊಮ್ಮೆ ಸುದ್ದಿಗೆ ಬಂದಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೆಲವು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿರುವ ಹೊತ್ತಿನಲ್ಲಿ ನಮ್ಮ ರಾಜ್ಯದಲ್ಲಿಯೂ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಕಟ್ಟೆಚ್ಚರ ವಹಿಸಲಾಗಿದೆ.

ಸೊಳ್ಳೆಯಿಂದ ಹರಡುವ ವೈರಸ್

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್. 1947 ರಲ್ಲಿ ಉಗಾಂಡಾದಲ್ಲಿ ರೀಸಸ್ ಮಕಾಕ್ ಮಂಗಗಳಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸಲಾಯಿತು. ನಂತರ 1950ರ ದಶಕದಲ್ಲಿ ಇತರ ಆಫ್ರಿಕನ್ ದೇಶಗಳಲ್ಲಿ ಮಾನವರಲ್ಲಿ ಸೋಂಕು ಮತ್ತು ರೋಗದ ಪುರಾವೆಗಳು ಕಂಡುಬಂದವು. ಇತ್ತೀಚೆಗೆ ಝಿಕಾ ವೈರಸ್ ಸೋಂಕು ಈಡಿಸ್ ಸೊಳ್ಳೆಗಳ ಕಚ್ಚುವಿಕೆಯ, ಅದರಲ್ಲಿಯೂ ಮುಖ್ಯವಾಗಿ ಈಡಿಸ್ ಈಜಿಪ್ಟೈ ಸೊಳ್ಳೆಯ ಮೂಲಕ ಸಂಭವಿಸುತ್ತದೆ. ಈ ಸೊಳ್ಳೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ರೋಗಗಳನ್ನೂ ಸಹ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಲೈಂಗಿಕ ಕ್ರಿಯೆಯ ಮೂಲಕ ಒಬ್ವರಿಂದ ಮತ್ತೊಬ್ಬರಿಗೆ, ತಾಯಿಯಿಂದ ಭ್ರೂಣಕ್ಕೆ ಮತ್ತು ರಕ್ತ ಮತ್ತು ರಕ್ತದ ಉತ್ಪನ್ನಗಳ ವರ್ಗಾವಣೆಗಳ ಮೂಲಕ ಈ ರೋಗ ಪ್ರಸರಣವಾಗುತ್ತದೆ. 2017ರಿಂದ ಜಾಗತಿಕವಾಗಿ ಝಿಕಾ ವೈರಸ್ ಕಾಯಿಲೆಯ ಪ್ರಕರಣಗಳು ಇಳಿಮುಖವಾಗಿದ್ದರೂ ಅಮೇರಿಕಾ ಮತ್ತು ಇತರ ಹಲವಾರು ದೇಶಗಳಲ್ಲಿ ಪ್ರಸರಣವು ಸ್ವಲ್ಪವಾದರೂ ಇಂದಿಗೂ ಮುಂದುವರಿಯುತ್ತದೆ. ಹೀಗಾಗಿ ಇದು ಸಾರ್ವಜನಿಕ ಕಾಳಜಿಯ ವಿಷಯವಾಗಿ ಇಂದಿಗೂ ಮುಂದುವರೆದಿದೆ.

ಝಿಕಾ ವೈರಸ್ ರೋಗಲಕ್ಷಣಗಳು

ಮಳೆಗಾಲದಲ್ಲಿ ಮನೆಯ ಸುತ್ತ ನೀರು ನಿಲ್ಲಲು ಬಿಡಬಾರದು. ತೆಂಗಿನ ಚಿಪ್ಪು ಮತ್ತು ಟೈರಿನಂತಹ ತ್ಯಾಜ್ಯವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತೊಟ್ಟಿ, ಬಿಂದಿಗೆ ಮತ್ತು ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ. ಸೊಳ್ಳೆ ಪರದೆ ಹಾಕಿಕೊಂಡು ಮಲಗುವುದು ಒಳ್ಳೆಯದು. ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ಓಡಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳ್ಳೆಯದು. ನಗರಗಳಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಬೇಕು. ಬಜೆಪುಡಿಯನ್ನು ದೊಡ್ಡವರು ಮತ್ತು ಮಕ್ಕಳು ಮೈಕೈಗೆ ಹಚ್ಚಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.

ಮನೆಯ ಮುಂದೆ ಗೋಮಯ (ದನದ ಸೆಗಣಿ) ಸಾರಿಸುವುದು ಕೂಡ ಉತ್ತಮ ಕ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಈ ಕ್ರಮ ರೂಢಿಯಲ್ಲಿದೆ, ಸಗಣಿ ಕ್ರಿಮಿಕೀಟಗಳನ್ನು ದೂರವಿರಿಸಿ. ರೋಗಾಣುಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಬಿಳಿಯ ಬಣ್ಣ ನಮ್ಮ ಮನಸ್ಸಿಗೆ ಶಾಂತಿ, ಸಮಾಧಾನ ನೀಡಿ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ಮನೆಯಲ್ಲಿ ಸಾಂಬ್ರಾಣಿ, ಬೆಳ್ಳುಳ್ಳಿ ಸಿಪ್ಪೆ, ಒಣಗಿದ ಬೇವಿನೆಲೆ, ಒಣಗಿದ ತುಳಸಿ ಎಲೆ, ಬಿಳಿಸಾಸಿವೆ, ಗುಗ್ಗುಳ, ಚಂದನ, ಅರಶಿನ ಇವುಗಳಲ್ಲಿ ಯಾವುದಾದರೊಂದರ ಧೂಪ ಹಾಕುವುದೂ ಒಳ್ಳೆಯದು. ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು, ಬಾಣಂತಿಯರಿಗೆ, ಚಿತ್ರ ಮಗುವಿಗೆ ಸಾಂಬ್ರಾಣಿ ಧೂಪ ಹಾಕುವ ಕ್ರಮವಿದೆ. ಈ 'ಧೂಪ' ಕೂಡ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ದೇವರಿಗೆ 'ದೀಪ' ಹಚ್ಚುವಾಗ ಹೊಂಗೆ ಎಣ್ಣೆ, ಬೇವಿನೆಣ್ಣೆ ಬಳಸುವುದು ಒಳ್ಳೆಯದು. ಬೇವು, ಹೊಂಗೆ ಮರಗಳನ್ನು ಬಡಾವಣೆಗಳಲ್ಲಿ, ಹಳ್ಳಿಗಳಲ್ಲಿ ಸಾಲುಮರಗಳಾಗಿ ಬೆಳೆಸುವುದು ಉತ್ತಮ. ಯಾವುದೇ ಜ್ವರ ಬಂದರೂ ಎರಡು ದಿನಗಳಲ್ಲಿ ವಾಸಿಯಾಗದಿದ್ದರೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ಝಿಕಾ ವೈರಸ್ ಸೋಂಕಿತರಲ್ಲಿ ಹೆಚ್ಚಿನ ಜನರು ಯಾವುದೇ ಬಗೆಯ ರೋಗಲಕ್ಷಣಗಳನ್ನು ತೋರುವುದಿಲ್ಲ. ಆದರೆ ಸೋಂಕು ತಗುಲಿದ 3 ರಿಂದ 14 ದಿನಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಮತ್ತು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಮೈಮೇಲೆ ದದ್ದುಗಳು, ಜ್ವರ, ಕಂಜಂಕ್ಟಿವಿಟಿಸ್, ಸ್ನಾಯುಗಳ ನೋವು ಮತ್ತು ಕೀಲು ನೋವು ಜೊತೆಗೆ ಅಸ್ವಸ್ಥತೆ, ಬಳಲಿಕೆ ಮತ್ತು ತಲೆನೋವು ಕಂಡುಬರುತ್ತದೆ.

ಝಿಕಾ ವೈರಸ್ ರೋಗಕ್ಕೆ ಚಿಕಿತ್ಸೆ

ಈ ವೈರಲ್ ಸೋಂಕು ಬಂದ ವ್ಯಕ್ತಿಗಳಲ್ಲಿ ಇಂತಹ ರೋಗಲಕ್ಷಣಗಳು ಸಾಮಾನ್ಯವಾಗಿ ಒಂದು ವಾರದ ತನಕ ಇರುತ್ತವೆ. ಸೋಂಕು ದೃಢವಾಗಲು ಪ್ರಯೋಗಾಲಯದ ಪರೀಕ್ಷೆ ಅತ್ಯಗತ್ಯ. ಆದ್ದರಿಂದ ಒಂದು ವಾರದ ತನಕ ಇಂತಹ ಲಕ್ಷಣಗಳು ಹೋಗುತ್ತಿಲ್ಲ ಎಂದರೆ ಪ್ರಯೋಗಾಲಯದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ರಕ್ತ ಅಥವಾ ಮೂತ್ರದ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶಗಳು ಅಪರೂಪ.

ಝಿಕಾ ವೈರಸ್ ರೋಗ ಗುಣಪಡಿಸಲು ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ದದ್ದು, ಜ್ವರ ಅಥವಾ ಕೀಲು ನೋವಿದ್ದರೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು, ಆಗಾಗ ಸಾಕಷ್ಟು ನೀರು ಕುಡಿಯುತ್ತಿರಬೇಕು, ಅಗತ್ಯವಿದ್ದಾಗ ಜ್ವರ ನಿವಾರಕಗಳು ಅಥವಾ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಕು. ರೋಗಲಕ್ಷಣಗಳನ್ನು ಪರಿಹಾರ ಮಾಡಲು ಇಂತಹ ಕ್ರಮಗಳನ್ನು ಕೈಗೊಂಡರೆ ಒಳಿತು.

ಝಿಕಾ ವೈರಸ್ ಸೋಂಕು ತಡೆಯುವುದು ಹೇಗೆ?

ಝಿಕಾ ವೈರಸ್ ಸೋಂಕನ್ನು ತಡೆಗಟ್ಟಲು ಸೊಳ್ಳೆಗಳನ್ನು ಮೊದಲು ನಿಯಂತ್ರಣ ಮಾಡಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು. ಚರ್ಮದ ಮೇಲೆ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಂಡರೆ ಸೊಳ್ಳೆಗಳನ್ನು ದೂರವಿಡಬಹುದು.

ಮಳೆಗಾಲದಲ್ಲಿ ಮನೆಯ ಸುತ್ತ ನೀರು ನಿಲ್ಲಲು ಬಿಡಬಾರದು. ತೆಂಗಿನ ಚಿಪ್ಪು ಮತ್ತು ಟೈರಿನಂತಹ ತ್ಯಾಜ್ಯವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತೊಟ್ಟಿ, ಬಿಂದಿಗೆ ಮತ್ತು ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ. ಸೊಳ್ಳೆ ಪರದೆ ಹಾಕಿಕೊಂಡು ಮಲಗುವುದು ಒಳ್ಳೆಯದು. ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ಓಡಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳ್ಳೆಯದು. ನಗರಗಳಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಬೇಕು. ಬಜೆಪುಡಿಯನ್ನು ದೊಡ್ಡವರು ಮತ್ತು ಮಕ್ಕಳು ಮೈಕೈಗೆ ಹಚ್ಚಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.

ಮನೆಯ ಮುಂದೆ ಗೋಮಯ (ದನದ ಸೆಗಣಿ) ಸಾರಿಸುವುದು ಕೂಡ ಉತ್ತಮ ಕ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಈ ಕ್ರಮ ರೂಢಿಯಲ್ಲಿದೆ, ಸಗಣಿ ಕ್ರಿಮಿಕೀಟಗಳನ್ನು ದೂರವಿರಿಸಿ. ರೋಗಾಣುಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಬಿಳಿಯ ಬಣ್ಣ ನಮ್ಮ ಮನಸ್ಸಿಗೆ ಶಾಂತಿ, ಸಮಾಧಾನ ನೀಡಿ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ಮನೆಯಲ್ಲಿ ಸಾಂಬ್ರಾಣಿ, ಬೆಳ್ಳುಳ್ಳಿ ಸಿಪ್ಪೆ, ಒಣಗಿದ ಬೇವಿನೆಲೆ, ಒಣಗಿದ ತುಳಸಿ ಎಲೆ, ಬಿಳಿಸಾಸಿವೆ, ಗುಗ್ಗುಳ, ಚಂದನ, ಅರಶಿನ ಇವುಗಳಲ್ಲಿ ಯಾವುದಾದರೊಂದರ ಧೂಪ ಹಾಕುವುದೂ ಒಳ್ಳೆಯದು. ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು, ಬಾಣಂತಿಯರಿಗೆ, ಚಿತ್ರ ಮಗುವಿಗೆ ಸಾಂಬ್ರಾಣಿ ಧೂಪ ಹಾಕುವ ಕ್ರಮವಿದೆ. ಈ 'ಧೂಪ' ಕೂಡ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ದೇವರಿಗೆ 'ದೀಪ' ಹಚ್ಚುವಾಗ ಹೊಂಗೆ ಎಣ್ಣೆ, ಬೇವಿನೆಣ್ಣೆ ಬಳಸುವುದು ಒಳ್ಳೆಯದು. ಬೇವು, ಹೊಂಗೆ ಮರಗಳನ್ನು ಬಡಾವಣೆಗಳಲ್ಲಿ, ಹಳ್ಳಿಗಳಲ್ಲಿ ಸಾಲುಮರಗಳಾಗಿ ಬೆಳೆಸುವುದು ಉತ್ತಮ.

ಯಾವುದೇ ಜ್ವರ ಬಂದರೂ ಎರಡು ದಿನಗಳಲ್ಲಿ ವಾಸಿಯಾಗದಿದ್ದರೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT