ಹಣಕಾಸು ತಾರತಮ್ಯ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಜಾಗತಿಕವಾಗಿ ಹೆಚ್ಚುತ್ತಿರುವ ಹಣಕಾಸು ತಾರತಮ್ಯಕ್ಕೆ ಕಾರಣ ಈ 12 ಅಂಶಗಳು...

ಈ ಬದುಕು, ಪ್ರಪಂಚ ಎಂದಿಗೂ ಸಮವಾಗಿಲ್ಲ, ಅದು ಮುಂದೆಂದಿಗೂ ಸಮವಾಗುವುದೂ ಇಲ್ಲ. ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತವೆ ಅಷ್ಟು ನಮಗೆ ಒಳ್ಳೆಯದು. (ಹಣಕ್ಲಾಸು-413)

ಈ ಬದುಕು, ಪ್ರಪಂಚ ಎಂದಿಗೂ ಸಮವಾಗಿಲ್ಲ, ಅದು ಮುಂದೆಂದಿಗೂ ಸಮವಾಗುವುದೂ ಇಲ್ಲ. ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತವೆ ಅಷ್ಟು ನಮಗೆ ಒಳ್ಳೆಯದು. ಎನ್ನುವ ಮಾತುಗಳನ್ನು ಇಂಗ್ಲಿಷ್ನಲ್ಲಿ "The World/Life was never fair and never will be. The sooner you will realize it, the better." ಎಂದಿದ್ದಾರೆ.

ಒಂದಲ್ಲ ಒಂದು ಬಾರಿ ಈ ಮಾತನ್ನು ನಾವು ಕೇಳಿರುತ್ತೇವೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ. ನಮ್ಮದೇನಿದ್ದರೂ ಗೊಣಗಾಟ. ನಿಲ್ಲದ ನಿತ್ಯ ಗೊಣಗಾಟ. ನನಗೆ ಯಾರೂ ಅವಕಾಶ ಕೊಡಲಿಲ್ಲ , ನನಗ್ಯಾರೂ ಸಹಾಯ ಮಾಡಲಿಲ್ಲ. ಈ ಜಗತ್ತಿನಲ್ಲಿ ಹೊಸಬರಿಗೆ ಜಾಗವಿಲ್ಲ, ಹೀಗೆ ಗೊಣಗಾಟಗಳ ಪಟ್ಟಿ ಹನುಮಂತನ ಬಾಲದಂತೆ ಲಂಬವಾಗುತ್ತಲೆ ಹೋಗುತ್ತದೆ.

ಈ ಸಮಾಜ ಇರುವುದೇ ಹೀಗೆ, ಇಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ. ಏನನ್ನಾದರೂ ಗಳಿಸಲು ನಾವು ಏನನ್ನನಾದರೂ ಕಳೆದುಕೊಳ್ಳಲು ನಾವು ತಯಾರಿರಬೇಕು. ಇಲ್ಲಿ ಪುಕ್ಕಟೆ ಎನ್ನುವುದು ಕೇವಲ ಭ್ರಮೆ. ಇಷ್ಟಕ್ಕೂ ಯಾರಾದರೂ ನಮಗೇಕೆ ಸಹಾಯ ಮಾಡುತ್ತಾರೆ? ಅದಕ್ಕಿಂತ ಮುಂಚೆ ಅವರೇಕೆ ನಮಗೆ ಸಹಾಯ ಮಾಡಬೇಕು? ಬೇರೆಯವರು ನಮಗೆ ಸಹಾಯ ಮಾಡಲಿ ಎಂದು ಯೋಚಿಸುವುದೇ ತಪ್ಪು. ಇಲ್ಲಿ ನಮ್ಮ ಸಾಮರ್ಥ್ಯದಿಂದ ನಮ್ಮ ಜಾಗವನ್ನು ನಾವು ಸೃಷ್ಟಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯತತ್ಪರರಾದಾಗ ಮನುಷ್ಯ ಸಹಾಯ, ದೈವ ಸಹಾಯ ಒದಗಿ ಬರುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕು.

ಈ ಮಾತುಗಳನ್ನು ಇನ್ನಷ್ಟು ಪುಷ್ಟಿ ಪಡಿಸುವ ಒಂದಷ್ಟು ಸಂಪತ್ತಿಗೆ ಸಂಬಂಧಿಸಿದ ಅಂಶಗಳನ್ನು ಹಂಚಿಕೊಳ್ಳುವೆ. ಕೊನೆಗೆ ನಿರ್ಧಾರ ನಿಮಗೆ ಬಿಟ್ಟದ್ದು.

ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತ ಜನ ಜಗತ್ತಿನ ಸಂಪತ್ತಿನ 50 ಪ್ರತಿಶತ ಸಂಪತ್ತಿನ ಮೇಲೆ ಅಧಿಕಾರ ಹೊಂದಿದ್ದಾರೆ. ಅದೇ ಸಮಯದಲ್ಲಿ ಜಗತ್ತಿನ 50 ಪ್ರತಿಶತ ಜನ ಜಗತ್ತಿನ 0.75 ಪ್ರತಿಶತ ಸಂಪತ್ತಿನ ಮೇಲೆ ಹಿಡಿತ ಹೊಂದಿದ್ದಾರೆ ಎನ್ನುವುದು ಜಗತ್ತಿನಲ್ಲಿರುವ ಹಣಕಾಸು ತಾರತಮ್ಯವನ್ನು ತೋರಿಸುತ್ತದೆ.

  • ಜಗತ್ತಿನ 80 ಬಿಲಿಯನೇರ್ಗಳು ಪ್ರಪಂಚದ 50 ಪ್ರತಿಶತ ಜನರ ಬಳಿ ಇರುವ ಸಂಪತ್ತಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ.

  • ನಮ್ಮ ಸಮಾಜದಲ್ಲಿನ 10 ಜನ ಬಿಲಿಯನೇರ್ಗಳು ಆಫ್ರಿಕಾದ ಸಾಮಾನ್ಯ 200 ಮಿಲಿಯನ್ ಮಹಿಳೆಯರ ಬಳಿ ಇರುವ ಸಂಪತ್ತನ್ನು ಹೊಂದಿದ್ದಾರೆ.

  • ಜಗತ್ತಿನಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಇವತ್ತು ನಾವು ಕಾಣುತ್ತಿರುವ ದೊಡ್ಡ ಮಟ್ಟದ ಕಂದರ ಸೃಷ್ಟಿಯಾಗಿದ್ದು ಕಳೆದ 25 ವರ್ಷಗಳಲ್ಲಿ ಎನ್ನುವುದನ್ನು ನಾವು ಗಮನಿಸಬೇಕು.

  • ಜಗತ್ತಿನ ಅತಿ ಬಡ ದೇಶಗಳು ತಮ್ಮ ದೇಶದ ಆರೋಗ್ಯದ ಮೇಲೆ ವ್ಯಯಿಸುವ ಹಣದ ನಾಲ್ಕು ಪಟ್ಟು ಹಣವನ್ನು ಬಡ್ಡಿಯ ರೂಪದಲ್ಲಿ ಶ್ರೀಮಂತ ದೇಶಗಳಿಗೆ ಕಟ್ಟುತ್ತಿವೆ.

  • ಇತ್ತೀಚಿಗೆ ಸೃಷ್ಟಿಯಾಗಿರುವ ಹೊಸ ಜಾಗತಿಕ ಸಂಪತ್ತಿನ ಅಗ್ರ ಪಾಲು ಕೂಡ ಈ ಸಾಹುಕಾರರು ತಮ್ಮ ಕಿಸೆಗೆ ಹಾಕಿಕೊಳ್ಳುತ್ತಿದ್ದಾರೆ.

  • ಈ ಸಾಹುಕಾರರು ಸಾಮಾನ್ಯ ಮನುಷ್ಯ ಉತ್ಪಾದಿಸುವ ಕಾರ್ಬನ್ ನ ಹತ್ತು ಲಕ್ಷ ಪಟ್ಟು ಹೆಚ್ಚು ಕಾರ್ಬನ್ ಉತ್ಪಾದಿಸುತ್ತಾನೆ. ತನ್ಮೂಲಕ ಜಾಗತಿಕ ವಾತಾವರಣ ಬದಲಾವಣೆಗೆ ಮುಖ್ಯ ಕಾರಣೀಕರ್ತನಾಗಿದ್ದಾನೆ.

  • ಜಗತ್ತಿನ ಎಲ್ಲಾ ಬಿಲಿಯನೇರ್ಗಳು ಒಟ್ಟಾಗಿ ಪ್ರತಿ ದಿನ ಹತ್ತಿರತ್ತಿರ 3 ಬಿಲಿಯನ್ ಡಾಲರ್ ಆದಾಯವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.

  • ಆಹಾರ ಮತ್ತು ಎನೆರ್ಜಿ (ಇಂಧನ) ಸಂಸ್ಥೆಗಳು, ಅಂದರೆ ಸೂಪರ್ ಮಾರ್ಕೆಟ್ , ಹೈಪರ್ ಮಾರ್ಕೆಟ್ ಮತ್ತು ಎಲೆಕ್ಟ್ರಿಸಿಟಿ, ಗ್ಯಾಸ್ ಮತ್ತಿತರೇ ಎನರ್ಜಿ ಮಾರಾಟ ಮಾಡುವ ಸಂಸ್ಥೆಗಳ ಲಾಭ ಕೋವಿಡ್ ಪ್ಯಾಂಡಮಿಕ್ ನಂತರ ಹಿಂದಿನ ಲೆಕ್ಕಾಚಾರದಲ್ಲಿ ಲಾಭವನ್ನು ದುಪ್ಪಟ್ಟು ಮಾಡಿಕೊಂಡಿವೆ . ಅದೇ ಸಮಯದಲ್ಲಿ ಜಗತ್ತಿನಾದ್ಯಂತ ಹತ್ತಿರತ್ತಿರ 1 ಬಿಲಿಯನ್ ಜನ ರಾತ್ರಿ ಹಸಿವಿನಿಂದ ಮಲಗುತ್ತಿದ್ದಾರೆ ಎನ್ನುವ ಅಂಕಿ-ಅಂಶ ಕೂಡ ನಮ್ಮ ಮುಂದಿದೆ.

  • ಜಗತ್ತಿನ ಅತಿ ದೊಡ್ಡ ಸಾಹುಕಾರರು 3 ರಿಂದ 4 ಪ್ರತಿಶತ ಮಾತ್ರ ತೆರಿಗೆಯನ್ನು ನೀಡುತ್ತಾರೆ. ಅವರಿಗೆ ಹೆಚ್ಚು ತೆರಿಗೆ ನೀಡದೆ ಬರುವ ದಾರಿ ಗೊತ್ತಿದೆ. ಸರಕಾರಗಳು ಕೂಡ ಕೆಲಸ ಸೃಷ್ಟಿಸಿದರೆ ಸಾಕು ಎಂದು ಅವರಿಗೆ ಕನಿಷ್ಠ 5 ವರ್ಷ ತೆರಿಗೆ ವಿನಾಯತಿ ನೀಡುತ್ತವೆ. ಅದೇ ಸಮಯದಲ್ಲಿ ಒಬ್ಬ ಸಾಮಾನ್ಯ ವ್ಯಾಪಾರಸ್ಥ ತನ್ನ ಆದಾಯದ 40 ಪ್ರತಿಶತ ಹಣವನ್ನು ತೆರಿಗೆಯ ರೂಪದಲ್ಲಿ ನೀಡುತ್ತಾನೆ.

  • ಸಣ್ಣ ಪುಟ್ಟ ವ್ಯಾಪಾರಸ್ಥರು ದಿವಾಳಿಯಾದಾಗ ಬ್ಯಾಂಕುಗಳು ಮುಲಾಜಿಲ್ಲದೆ ಅವರ ಆಸ್ತಿಯನ್ನು ಮಟ್ಟುಗೋಲು ಹಾಕಿಕೊಳ್ಳುತ್ತವೆ. ಸಾಹುಕಾರ ಡಿಫಾಲ್ಟ್ ಆದಾಗ ಅವನೊಡನೆ ನೆಗೋಸಿಯೆಷನ್ ಗೆ ಇಳಿಯುತ್ತವೆ. ಸಾಲದ 60 ಅಥವಾ 70 ಭಾಗ ನೀಡಿದರೆ ಉಳಿದ 40 ಅಥವಾ 30 ಭಾಗ ಡಿಸ್ಕೌಂಟ್ ಕೊಡುವುದಾಗಿ ಹೇಳುತ್ತವೆ.

  • ಇನ್ನು ಉಳ್ಳವರ ಮತ್ತು ಅಧಿಕಾರಸ್ಥರ ನಡವಳಿಕೆ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಗ್ರಂಥವಾಗುತ್ತದೆ. ಇಂದಿಗೂ ಮನುಷ್ಯರ ಕಳ್ಳಸಾಕಾಣಿಕೆ, ಬಲವಂತದಿಂದ ವೇಶ್ಯಾವೃತ್ತಿ ಮಾಡಿಸುವುದು, ಅಂಗಾಂಗ ಕಳ್ಳತನ ಮಾಡುವುದು, ಮಕ್ಕಳನ್ನು ಬೀದಿಯಲ್ಲಿ ಭಿಕ್ಷೆಗೆ ಬಿಡುವುದು , ಒಂದೆರೆಡಲ್ಲ ಪಟ್ಟಿ ಬಹು ದೊಡ್ಡದು.

ಜಗತ್ತಿನಾದ್ಯಂತ ಇದು ಸೇಮ್, ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರರು ಒಂದು ವರ್ಷದಲ್ಲಿ ಗಳಿಸುವ ಹಣವನ್ನು ಸಾಮಾನ್ಯ ಮನುಷ್ಯ 500/600 ಕೆಲವೊಮ್ಮೆ ಸಾವಿರ ವರ್ಷವಾದರೂ ದುಡಿಯಲು ಸಾಧ್ಯವಿಲ್ಲ. ಇದೆ ಮಾತನ್ನು ನಾವು ಚಲಚಿತ್ರ ನಂತರ ಬಗ್ಗೆ ಕೂಡ ಹೇಳಬಹುದು. ಆದರೆ ವಿಪರ್ಯಾಸ ಗೊತ್ತೇ? ಕೆಲವೇ ಕೆಲವು ಜನರಿಗೆ ಮಾತ್ರ ಈ ಅದೃಷ್ಟವಿದೆ. ಕೋಟ್ಯಂತರ ಸಂಭಾವನೆ ಪಡೆಯುವ ಹೀರೋ ಜೊತೆಯಲ್ಲಿ ಪೋಷಕ ಪಾತ್ರ ಮಾಡುವ ವ್ಯಕ್ತಿಗೆ ನಿಜ ಜೀವನದಲ್ಲಿ ಉತ್ತಮ ಜೀವನ ನಡೆಸಲು ಬೇಕಾಗುವ ಹಣವೇ ಇರುವುದಿಲ್ಲ. ನೀವು ಯಾವುದೇ ಕಾರ್ಯಕ್ಷೇತ್ರವನ್ನು ಗಣನೆಗೆ ತೆಗೆದುಕೊಳ್ಳಿ ಇದು ಸತ್ಯ. ಸಂಪತ್ತು ಎನ್ನುವುದು ಕೆಲವೇ ಕೆಲವರ ಸೊತ್ತು.

ಕೊನೆಮಾತು: ಈಗೇನು ಮಾಡುವುದು? ಇದು ವಿಶ್ವ ವ್ಯವಸ್ಥೆ ಇದು ಇರುವುದು ಹೀಗೆ. ಇದನ್ನು ಬದಲಿಸುವ ಶಕ್ತಿ ಬಹುಸಂಖ್ಯಾತರಾದ ಸಾಮಾನ್ಯರಲ್ಲಿ ಇಲ್ಲವೇ? ಸಂಪತ್ತಿನ ಮೇಲೆ ಅಧಿಕಾರವಿಲ್ಲ ಗೊತ್ತಿದೆ. ಆದರೆ ನಾವೆಲ್ಲಾ ಒಗ್ಗಟ್ಟಾಗಿ ನಿಂತರೆ ವಿಶ್ವ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲವೇ? ಸಾಧ್ಯವಿದೆ. ಆದರೆ ಈ ಒಗ್ಗಟ್ಟು ಎನ್ನುವುದನ್ನು ಎಲ್ಲಿಂದ ಎರವಲು ತರೋಣ ನೀವೇ ಹೇಳಿ? ಜಗತ್ತಿನಲ್ಲಿ ಎಲ್ಲದಕ್ಕೂ ಹೊಡೆದಾಟ ಶುರು. ನಾವು ಅದೆಷ್ಟು ಛಿದ್ರವಾಗಿದ್ದೇವೆ ಎಂದರೆ ನಮ್ಮ ದೇಹದ ಎರಡು ಕೈಗಳ ನಡುವೆ ಅಂದರೆ ಎಡಗೈ ಮತ್ತು ಬಲಗೈ ಜೊತೆಯಲ್ಲಿ ಕಿತ್ತಾಟ ನಡೆಸುವಷ್ಟು, ನಾವು ಬದಲಾಗುವುದಿಲ್ಲ, ಹೀಗಾಗಿ ಅವರ ಸಂಪತ್ತಿನ ಮೇಲಿನ ಹಿಡಿತ ಇಂಚೂ ಕರಗುವುದಿಲ್ಲ. ಸರಿ ನಾವು ಇರುವುದು ಹೀಗೆ, ಇಲ್ಲಿ ಎಲ್ಲರನ್ನೂ ಬದಲಿಸಲು ಸಾಧ್ಯವಿಲ್ಲ. ಆದರೆ ಸ್ವ ಪ್ರಯತ್ನದಿಂದ ನಾವು ಇತ್ತಕಡೆಯಿಂದ, ಅತ್ತಕಡೆಗೆ ವಲಸೆ ಖಂಡಿತ ಹೋಗಬಹುದು. ಅದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಪರಿಸ್ಥಿತಿಯನ್ನು ಒಪ್ಪಿಕೊಂಡು , ಬದಲಾವಣೆಗೆ ಸಿದ್ಧವಾಗುವುದು ಮಾತು ಗೊಣಗಾಟ ನಿಲ್ಲಿಸುವುದು. ಕೊನೆಗೆ: “There is no market for emotions. So never advertise your feelings, just display your attitude”

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT