ಸ್ನಾಯುಗಳ ದೌರ್ಬಲ್ಯ 
ಅಂಕಣಗಳು

ಮೈಸ್ತೇನಿಯಾ ಗ್ರ್ಯಾವಿಸ್ ಅಥವಾ ಸ್ನಾಯುಗಳ ದೌರ್ಬಲ್ಯ (ಕುಶಲವೇ ಕ್ಷೇಮವೇ)

ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಪ್ರಕಾರ 40/60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಎಂಜಿ ಎಂದು ಕರೆಯಲ್ಪಡುವ ಮೈಸ್ತೇನಿಯಾ ಗ್ರ್ಯಾವಿಸ್ ನರ-ಸ್ನಾಯುಗಳಿಗೆ ಸಂಬಂಧಿಸಿದ ಒಂದು ಅಸ್ವಸ್ಥತೆ. ಈ ರೋಗ ಬಂದಾಗ ನರಗಳ ಮತ್ತು ಸ್ನಾಯುಗಳ ನಡುವಿನ ಸಂಕೇತಗಳಲ್ಲಿ ಅಡ್ಡಿ ಉಂಟಾಗುತ್ತದೆ ಮತ್ತು ಇದು ದೇಹದ ವಿವಿಧ ಭಾಗಗಳಲ್ಲಿ ಸ್ನಾಯುಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

"ಮೈಸ್ತೇನಿಯಾ ಗ್ರ್ಯಾವಿಸ್" ಎಂಬ ಹೆಸರು ಗ್ರೀಕ್ ಭಾಷೆಯ "ಮೈಸ್ತೇನಿಯಾ" (ಅಂದರೆ ಸ್ನಾಯು ದೌರ್ಬಲ್ಯ) ಮತ್ತು "ಗ್ರ್ಯಾವಿಸ್" (ಎಂದರೆ ತೀವ್ರ) ಪದಗಳಿಂದ ಬಂದಿದೆ.

ಮೈಸ್ತೇನಿಯಾ ಗ್ರ್ಯಾವಿಸ್ ಕೆಲವರಿಗೆ ಹುಟ್ಟಿನಿಂದಲೇ ಕಾಣಿಸಿಕೊಳ್ಳಬಹುದು ಅಥವಾ ನಂತರ ವಯಸ್ಸಿನಲ್ಲಿ ಬರಬಹುದು. ಈ ರೋಗ ಕೇವಲ ಮಾನವರನ್ನಷ್ಟೇ ಅಲ್ಲ. ಪ್ರಾಣಿಗಳನ್ನೂ ಕಾಡಬಹುದು. ಸಾಮಾನ್ಯವಾಗಿ ಆರರಿಂದ ಎಂಟು ವಾರಗಳ ನಡುವೆ ನಾಯಿಮರಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಪ್ರಕಾರ 40/60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.

ಮೈಸ್ತೇನಿಯಾ ಗ್ರ್ಯಾವಿಸ್ ರೋಗ ಲಕ್ಷಣಗಳು

ಮೈಸ್ತೇನಿಯಾ ಗ್ರ‍್ಯಾವಿಸ್ ರೋಗ ಬಂದರೆ ದೇಹದ ರೋಗನಿರೋಧಕ ವ್ಯವಸ್ಥೆಯು ನರ ಸಂಕೇತಗಳನ್ನು ಸ್ವೀಕರಿಸುವ ಸ್ನಾಯು ಕೋಶಗಳ ಗ್ರಾಹಕಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ, ನರ ಕೋಶಗಳು ಮತ್ತು ಸ್ನಾಯುಗಳ ನಡುವಿನ ಸಂವಹನವನ್ನು ಅಡ್ಡಿಪಡಿಸುತ್ತದೆ. ಈ ಅಡ್ಡಿಯು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ, ಇದರ ತೀವ್ರತೆ ಆಗಾಗ ಬದಲಾಗಬಹುದು ಮತ್ತು ದಿನವಿಡೀ ಬಂದು ಹೋಗಬಹುದು.

ಮೈಸ್ತೇನಿಯಾ ಗ್ರ‍್ಯಾವಿಸ್ಸಿನ ಲಕ್ಷಣಗಳು ಬಬ್ಬರಿಂದ ಮತ್ತೊಬ್ಬರಿಗೆ ಬದಲಾಗಬಹುದು. ಆದರೆ ಇದರ ಸಾಮಾನ್ಯ ಲಕ್ಷಣಗಳು ಹೀಗಿವೆ: ಸ್ನಾಯು ದೌರ್ಬಲ್ಯವು ದೈಹಿಕ ಚಟುವಟಕೆಗಳನ್ನು ಮಾಡಲು ಅಡ್ಡಿಪಡಿಸುತ್ತದೆ. ವಿಶ್ರಾಂತಿ ತೆಗೆದುಕೊಂಡರೆ ಸ್ವಲ್ಪ ಸುಧಾರಿಸುತ್ತದೆ.

ಜೊತೆಗೆ ಇಳಿಬೀಳುವ ಕಣ್ಣುರೆಪ್ಪೆಗಳು (ಪ್ಟೋಸಿಸ್), ಇಬ್ಬಗೆಯ ದೃಷ್ಟಿ (ಡಿಪ್ಲೋಪಿಯಾ), ಮಾತನಾಡಲು ಅಥವಾ ನುಂಗಲು ತೊಂದರೆ, ತೋಳುಗಳು ಮತ್ತು ಕಾಲುಗಳಲ್ಲಿ ದೌರ್ಬಲ್ಯ ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ. ಈ ರೋಗಲಕ್ಷಣಗಳು ನಿರ್ದಿಷ್ಟ ಸ್ನಾಯು ಗುಂಪುಗಳಿಗೆ ಸೀಮಿತವಾಗಿರಬಹುದು ಅಥವಾ ವ್ಯಾಪಕವಾಗಿ ಇರಬಹುದು. ನಿಧಾನವಾಗಿ ಹೆಚ್ಚಾಗಬಹುದು.

ಮೈಸ್ತೇನಿಯಾ ಗ್ರ‍್ಯಾವಿಸ್ ರೋಗಕ್ಕೆ ಕಾರಣಗಳು

ಮೈಸ್ತೇನಿಯಾ ಗ್ರ‍್ಯಾವಿಸ್ ಒಂದು ಸ್ವಯಂ ನಿರೋಧಕ (ಆಟೋಇಮ್ಯೂನ್) ಅಸ್ವಸ್ಥತೆ. ಈ ರೋಗ ಏಕೆ ಬರುತ್ತದೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ, ಆದರೆ ಕುಟುಂಬದ ಇತಿಹಾಸ, ಇತರ ಸ್ವಯಂ ನಿರೋಧಕ ಅಸ್ವಸ್ಥತೆಗಳು, ಥೈರಾಯ್ಡ್ ಸಮಸ್ಯೆಗಳು, ರುಮಟಾಯ್ಡ್ ಸಂಧಿವಾತ ಮತ್ತಿತರ ಸಮಸ್ಯೆಗಳು ಈ ರೋಗಕ್ಕೆ ಕಾರಣವಾಗಬಹುದು. ಈ ರೋಗ ಬಂದರೆ ಸ್ನಾಯುಗಳು ದುರ್ಬಲವಾಗುವುದರಿಂದ ದಿನನಿತ್ಯ ಮಾಡುವ ಕೆಲಸಗಳನ್ನು ಮೊದಲಿನಂತೆ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಮೈಸ್ತೇನಿಯಾ ಗ್ರ‍್ಯಾವಿಸ್ ರೋಗನಿರ್ಣಯವು ಸವಾಲಾಗಿರುತ್ತದೆ. ಏಕೆಂದರೆ ಈ ರೋಗ ಲಕ್ಷಣಗಳು ಇತರ ಪರಿಸ್ಥಿತಿಗಳಂತೆಯೇ ಇರುತ್ತದೆ. ರೋಗನಿರ್ಣಯವನ್ನು ಸಾಮಾನ್ಯವಾಗಿ ವೈದ್ಯಕೀಯ ವಿವರಗಳು, ದೈಹಿಕ ಪರೀಕ್ಷೆ, ಸ್ನಾಯು ಗ್ರಾಹಕಗಳ ವಿರುದ್ಧ ಪ್ರತಿಕಾಯಗಳನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆಗಳು, ಸ್ನಾಯು ಚಟುವಟಿಕೆಯನ್ನು ಅಳೆಯಲು ಎಲೆಕ್ಟ್ರೋಮೋಗ್ರಫಿ ಮತ್ತು ಔಷಧಿಗೆ ಸ್ನಾಯುವಿನ ಪ್ರತಿಕ್ರಿಯೆಯನ್ನು ನಿರ್ಣಯಿಸಲು ಎಡ್ರೋಫೋನಿಯಮ್ ಪರೀಕ್ಷೆ ಸಂಯೋಜನೆಯ ಮೂಲಕ ಮಾಡಲಾಗುತ್ತದೆ.

ಮೈಸ್ತೇನಿಯಾ ಗ್ರ‍್ಯಾವಿಸ್ ರೋಗಕ್ಕೆ ಚಿಕಿತ್ಸೆ

ಮೈಸ್ತೇನಿಯಾ ಗ್ರ‍್ಯಾವಿಸ್ಸಿಗೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ವಿವಿಧ ಉಪಚಾರ ಕ್ರಮಗಳು ರೋಗ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕತೆಯನ್ನು ಹೆಚ್ಚಿಸಲು ಅಥವಾ ಸ್ನಾಯುವಿನ ಕಾರ್ಯವನ್ನು ಸುಧಾರಿಸಲು ಔಷಧಿಗಳು, ವಿಶ್ರಾಂತಿ ಮತ್ತು ಒತ್ತಡ ತಗ್ಗಿಸುವ ಜೀವನಶೈಲಿ ಮಾರ್ಪಾಡುಗಳು ರೋಗ ನಿರ್ವಹಣೆಗೆ ಸಹಾಯಕವಾಗಿವೆ.

ಸರಿಯಾದ ಆರೈಕೆ ಮತ್ತು ಉಪಚಾರದೊಂದಿಗೆ ಮೈಸ್ತೇನಿಯಾ ಗ್ರ‍್ಯಾವಿಸ್ ರೋಗವಿರುವ ಅನೇಕ ಜನರು ಸಕ್ರಿಯ ಜೀವನವನ್ನು ನಡೆಸಬಹುದು. ಆದಾಗ್ಯೂ ರೋಗಲಕ್ಷಣಗಳು ಏರುಪೇರಾಗಬಹುದು ಮತ್ತು ಮರುಕಳಿಸುವಿಕೆಯು ಸಂಭವಿಸಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಮೈಸ್ತೇನಿಯಾ ಗ್ರ‍್ಯಾವಿಸ್ ದೀರ್ಘಕಾಲದ ಮತ್ತು ಅಶಕ್ತಗೊಳಿಸುವ ಸ್ಥಿತಿಯಾಗಿರಬಹುದು.

ಮೈಸ್ತೇನಿಯಾ ಗ್ರ‍್ಯಾವಿಸ್ ರೋಗ ಕುರಿತು ಸಂಶೋಧನೆ

ಮೈಸ್ತೇನಿಯಾ ಗ್ರ‍್ಯಾವಿಸ್ಸಿನ ಕಾರಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸಂಶೋಧಕರು ಇಂದು ಅವಿರತ ಕೆಲಸ ಮಾಡುತ್ತಿದ್ದಾರೆ. ಈ ರೋಗದ ಬೆಳವಣಿಗೆಯಲ್ಲಿ ತೊಡಗಿರುವ ನಿರ್ದಿಷ್ಟ ಜೀನ್‌ಗಳನ್ನು ಗುರುತಿಸುವುದು, ರೋಗನಿರೋಧಕತೆ ವೃದ್ಧಿಗಾಗಿ ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟೇಷನ್‌ನಂತಹ (ಆಕರ ಕೋಶ ವರ್ಗಾವಣೆ) ಪರ್ಯಾಯ ಚಿಕಿತ್ಸೆಗಳನ್ನು ಅನ್ವೇಷಿಸುವುದರಲ್ಲಿ ಅವರು ತೊಡಗಿದ್ದಾರೆ.

ಒಟ್ಟಾರೆ ಹೇಳುವುದಾರೆ ಮೈಸ್ತೇನಿಯಾ ಗ್ರ‍್ಯಾವಿಸ್ ಒಂದು ಸಂಕೀರ್ಣ ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದ್ದು ಸ್ನಾಯುವಿನ ಶಕ್ತಿ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ರೋಗ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಅನೇಕ ಆರೈಕೆ ವಿಧಾನಗಳು, ಉಪಚಾರ ಕ್ರಮಗಳು ಮತ್ತು ಜೀವನಶೈಲಿ ಮಾರ್ಪಾಡುಗಳು ಸಹಾಯ ಮಾಡುತ್ತದೆ. ಕಾರಣಗಳು, ರೋಗ ಲಕ್ಷಣಗಳು ಮತ್ತು ಉಪಚಾರ-ಆರೈಕೆಯ ಆಯ್ಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮೂಲಕ ಮೈಸ್ತೇನಿಯಾ ಗ್ರ‍್ಯಾವಿಸ್ ಇರುವ ಜನರು ಪೂರ್ಣ ಮತ್ತು ಸಕ್ರಿಯ ಜೀವನವನ್ನು ನಡೆಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರೂ ಸಮತೋಲಿತ ಆಹಾರ, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ಸೇವಿಸಬೇಕು. ಆಹಾರವನ್ನು ಬಿಸಿಯಾಗಿ ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ದೈಹಿಕವಾಗಿ ಸದೃಢರಾಗಿರಲು ಬಿರುಸು ನಡಿಗೆ ಅಥವಾ ವ್ಯಾಯಾಮಗಳನ್ನು ಪ್ರತಿದಿನ ರೂಢಿಸಿಕೊಂಡಿರಬೇಕು. ಪ್ರತಿನಿತ್ಯ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನ, ಪ್ರಾಣಾಯಾಮ ಮತ್ತು ಯೋಗಾಭ್ಯಾಸವನ್ನು ಮಾಡಬೇಕು. ಆಯುರ್ವೇದ ಪಂಚಕರ್ಮ ಚಿಕಿತ್ಸೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT