ಧೋನಿಯನ್ನು ಕಾಡಿದ ವಿಂಡೀಸ್ ನಾಯಕ ಸಾಮಿ (ಚಿತ್ರಕೃಪೆ: ಐಸಿಸಿ) 
ಕ್ರಿಕೆಟ್

ಧೋನಿಯನ್ನು ಏಪ್ರಿಲ್ ಫೂಲ್ ಮಾಡಿದ ವಿಂಡೀಸ್ ನಾಯಕ ಸಾಮಿ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ವೆಸ್ಟ್ ಇಂಡೀಸ್ ನಾಯಕ ಡರೆನ್ ಸಾಮಿ ಒಂದು ದಿನ ಮುಂಚಿತವಾಗಿಯೇ ಮೂರ್ಖರನ್ನಾಗಿಸಿದ್ದಾರೆ.

ಮುಂಬೈ: ಏಪ್ರಿಲ್ 1 ಮೂರ್ಖರ ದಿನ ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ವೆಸ್ಟ್ ಇಂಡೀಸ್ ನಾಯಕ ಡರೆನ್ ಸಾಮಿ ಒಂದು  ದಿನ ಮುಂಚಿತವಾಗಿಯೇ ಮೂರ್ಖರನ್ನಾಗಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದ ವೇಳೆ ಧೋನಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾಗ ಅಲ್ಲಿಗೆ ಅಗಮಿಸಿದ ಸಾಮಿ, ಧೋನಿ ಅವರನ್ನು  ಮೂರ್ಖರನ್ನಾಗಿಸಿದ್ದಾರೆ. ಪಂದ್ಯಕ್ಕೆ ಸಂಬಂಧಿಸಿದಂತೆ ನಾಯಕ ಧೋನಿ ಅಧಿಕಾರಿಗಳೊಂದಿಗೆ ಗಾಢವಾದ ಚರ್ಚೆಯಲ್ಲಿದ್ದರೆ, ಇದರ ಅನುಕೂಲ ಪಡೆದ ಸಾಮಿ ಸುಲಭವಾಗಿ ಧೋನಿಯನ್ನು  ಮೂರ್ಖರನ್ನಾಗಿಸಿದ್ದಾರೆ.

ಧೋನಿ ಹೆಗಲ ಮೇಲೆ ಕೈಹಾಕಿ ಕೂಗುವಂತೆ ಮಾಡಿದ ಸಾಮಿ ಅವರು ತಿರುಗಿ ನೋಡುವಷ್ಟರಲ್ಲಿ ಅತ್ತ ಬಾಗಿದ್ದರು. ಆ ಬಳಿಕವೂ ಧೋನಿಯನ್ನು ಕಾಡಿದ ಸಾಮಿ ಅಧಿಕಾರಿಯೊಬ್ಬರಿಗೆ ಧೋನಿ  ನೀಡಬೇಕಾದ ಕಾಗದಪತ್ರವನ್ನು ತಾವೇ ತೆಗೆದುಕೊಂಡು ಅಧಿಕಾರಿಯಂತೆ ಹಸ್ತ ಲಾಘವ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ನಡೆದರು ಕ್ಯಾಪ್ ಧರಿಸಿದ್ದ ಧೋನಿ ತಲೆ ಎತ್ತಿ ಅವರು ಯಾರು ಎಂದು  ಕೂಡ ನೋಡದೆ ಸಾಮಿಯನ್ನು ಐಸಿಸಿ ಅಧಿಕಾರಿಯೆಂದು ತಿಳಿದು ಪತ್ರವನ್ನು ಸಾಮಿ ಕೈಗೆ ನೀಡಿದ್ದಾರೆ.

ಆ ಬಳಿಕ ವಿಂಡೀಸ್ ನಾಯಕ ಸಾಮಿಯೇ ಧೋನಿಯನ್ನು ಎಚ್ಚರಿಸಿದ್ದು, ಧೋನಿಗೂ ಗೂಡ ಆ ಬಳಿಕವೇ ತಾವು ಮೂರ್ಖರಾದ ವಿಚಾರ ತಿಳಿದಿದೆ. ಬಳಿಕ ಇಬ್ಬರೂ ನಾಯಕರು ಹಸನ್ಮುಖರಾಗಿ  ತಮ್ಮ-ತಮ್ಮ ಡ್ರೆಸಿಂಗ್ ರೂಂಗೆ ತೆರಳಿದ್ದಾರೆ.

ಒಟ್ಟಾರೆ ಸಾಮಿ-ಧೋನಿ ಅವರ ಈ ಪ್ರಸಂಗ ನಿಜಕ್ಕೂ ಕ್ರೀಡಾ ಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸಿದ್ದು, ಈ ಅಪೂರ್ವ ವಿಡಿಯೋವನ್ನು ಐಸಿಸಿ ಶೇರ್ ಮಾಡಿದೆ. ಇದೀಗ ಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಿ ಕೀಟಲೆ ಇದೀಗ ಅಭಿಮಾನಿಗಳಲ್ಲಿ ನಗೆಯ ಅಲೆ ಉಕ್ಕಿಸುತ್ತಿದೆ.

ಈ ಅಪರೂಪದ ವಿಡಿಯೋ ಇಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT