ವಿಂಡೀಸ್ ಬ್ಯಾಟ್ಸಮನ್ ಮರ್ಲಾನ್‌ ಸ್ಯಾಮುಯೆಲ್ಸ್ (ಸಂಗ್ರಹಚಿತ್ರ) 
ಕ್ರಿಕೆಟ್

ಟೀಕೆ ಮಾಡುವವರಿಗೆ ಬ್ಯಾಟ್ ಮೂಲಕವೇ ಉತ್ತರ: ಸ್ಯಾಮುಯೆಲ್ಸ್

ನನ್ನ ವಿರುದ್ಧ ಟೀಕೆ ಮಾಡುವವರಿಗೆ ನನ್ನ ಬ್ಯಾಟ್ ಮೂಲಕ ಉತ್ತರ ನೀಡಿದ್ದೇನೆ ಎಂದು ಟಿ20 ಫೈನಲ್ ಪಂದ್ಯದಲ್ಲಿ 82 ರನ್ ಗಳಿಸಿ ವಿಂಡೀಸ್ ತಂಡದ ಗೆಲುವಿಗೆ ಕಾರಣರಾದ ಮರ್ಲಾನ್‌ ಸ್ಯಾಮುಯೆಲ್ಸ್ ಹೇಳಿದ್ದಾರೆ.

ಕೋಲ್ಕತ್ತಾ: ನನ್ನ ವಿರುದ್ಧ ಟೀಕೆ ಮಾಡುವವರಿಗೆ ನನ್ನ ಬ್ಯಾಟ್ ಮೂಲಕ ಉತ್ತರ ನೀಡಿದ್ದೇನೆ ಎಂದು ಟಿ20 ಫೈನಲ್ ಪಂದ್ಯದಲ್ಲಿ 82 ರನ್ ಗಳಿಸಿ ವಿಂಡೀಸ್ ತಂಡದ ಗೆಲುವಿಗೆ ಕಾರಣರಾದ ಮರ್ಲಾನ್‌ ಸ್ಯಾಮುಯೆಲ್ಸ್ ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ತಮಗೆ ಲಭಿಸಿದ ಪಂದ್ಯ ಶ್ರೇಷ್ಠ ಗೌರವವನ್ನು ಸ್ಪಿನ್‌ ದಿಗ್ಗಜ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ಗೆ  ಅರ್ಪಿಸುವ ಮೂಲಕ ಆಸಿಸ್ ಸ್ಪಿನ್ ದಿಗ್ಗಜನಿಗೆ ಟಾಂಗ್ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸ್ಯಾಮುಯೆಲ್ಸ್, ಕೆಲ ಬಾರಿ ಬ್ಯಾಟಿಂಗ್ ವೈಫಲ್ಯ ಕಂಡಾಗ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ. ಆಗ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ನನ್ನ ಬ್ಯಾಟಿಂಗ್ ಬಗ್ಗೆ ಒಂದು ವರ್ಷದಿಂದ ಸಾಕಷ್ಟು ನಕಾರಾತ್ಮಕ ಸುದ್ದಿಗಳು ಹರಿದಾಡುತ್ತಿವೆ. ಆದ್ದರಿಂದ ಸುಧಾರಣೆ ಕಂಡುಕೊಳ್ಳುವುದು ನನಗೂ ಅಗತ್ಯವಾಗಿತ್ತು. ಏಕದಿನ ಮತ್ತು ಟೆಸ್ಟ್‌ ಮಾದರಿಯಲ್ಲಿ ನಾವಿನ್ನೂ ಬಲಿಷ್ಠವಾಗಬೇಕಿದೆ. ಟಿ20ಯಲ್ಲಿ ನಮ್ಮದು ಬಲಿಷ್ಠ ತಂಡ’ ಎಂದು ಸ್ಯಾಮುಯಲ್‌ ಹೇಳಿದರು.

ಅಂತೆಯೇ ತಮ್ಮ ವಿರುದ್ಧದ ಟೀಕೆಗಳಿಗೆ ಕುರಿತಂತೆ ಉತ್ತರಿಸಿದ ಅವರು, "ಎಲ್ಲದಕ್ಕೂ ನನ್ನ ಬ್ಯಾಟ್‌ ಮೂಲಕವೇ ಉತ್ತರ ನೀಡುತ್ತೇನೆ. ಈ ಗುಣ ಬೆಳಸಿಕೊಂಡು ಬಂದಿದ್ದರಿಂದಲೇ ಫೈನಲ್‌ನಲ್ಲಿ ಉತ್ತಮ ಇನಿಂಗ್ಸ್‌ ಕಟ್ಟಲು ಸಾಧ್ಯವಾಯಿತು ಎಂದು ಹೇಳಿದರು. ಇದೇ ವೇಳೆ ತಮ್ಮ ಮತ್ತು ಶೇನ್ ವಾರ್ನ್ ನಡುವಿನ ವಾಕ್ಸಮರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದೇ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಪಂದ್ಯವನ್ನು ಆಡುತ್ತಿದ್ದೆವು. ಶೇನ್ ವಾರ್ನ್ ಮತ್ತು ನನ್ನ ನಡುವೆ ಕೆಲ ವಿಷಯಗಳಿಗೆ ಮನಸ್ತಾಪ ಉಂಟಾಗಿತ್ತು. ಆದರೂ ಒಮ್ಮೆಯೂ ಅವರನ್ನು ಅಗೌರವದಿಂದ ಕಂಡಿಲ್ಲ. ಆದರೆ ಅವರು ಫೈನಲ್‌ ಪಂದ್ಯದ ಬೆಳಿಗ್ಗೆ ನನ್ನ ಬಗ್ಗೆ ಸತತವಾಗಿ ಮಾತನಾಡುತ್ತಲೇ ಇದ್ದರು. ಆದ್ದರಿಂದ ಭಾನುವಾರದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದರೆ ವಾರ್ನ್‌ಗೆ ಅರ್ಪಿಸಲು ಮೊದಲೇ ನಿರ್ಧರಿಸಿದ್ದೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT